Site icon Vistara News

Suicide Case | ಹೆಣ್ಣು ಮಗು ಹುಟ್ಟಿತು ಎಂಬ ಕಾರಣಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ

suicide

ಕೋಲಾರ: ೨೧ನೇ ಶತಮಾನದಲ್ಲಿದ್ದರೂ ಇನ್ನೂ ಲಿಂಗ ತಾರತಮ್ಯ ಎಂಬುದು ದೂರವಾಗಿಲ್ಲ ಎಂಬುದು ಸಮಾಜವೇ ತಲೆತಗ್ಗಿಸುವ ವಿಚಾರ. ಗಂಡು- ಹೆಣ್ಣು ಸಮಾನರು, ಎಲ್ಲರಿಗೂ ಸಮಾನ ಅವಕಾಶ ಇರುವ ಈ ದಿನಗಳಲ್ಲಿ ಇನ್ನೂ ಕೆಲವರ ಮನಸ್ಥಿತಿ ಮಾತ್ರ ಬದಲಾಗಿಲ್ಲ ಎಂಬುದಕ್ಕೆ ಇದೊಂದು ನೈಜ ನಿದರ್ಶನ. ಹೆಣ್ಣು ಮಗು ಹುಟ್ಟಿತು ಎಂಬ ಕಾರಣಕ್ಕೆ ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಲೋಕೇಶ್ ಆತ್ಮಹತ್ಯೆಗೆ ಶರಣಾದಾತ. ಲೋಕೇಶ್‌ ದಂಪತಿಗೆ ಈ ಮೊದಲೇ ಮೂವರು ಹೆಣ್ಣು ಮಕ್ಕಳಿದ್ದರು. ನಾಲ್ಕನೇ ಮಗು ಗಂಡಾಗಲಿದೆ ಎಂಬ ನಿರೀಕ್ಷೆ ಇದೆ. ಆದರೆ, ಹೆಣ್ಣು ಮಗುವಿನ ಜನನವಾಗಿದ್ದು, ಈ ಹಿನ್ನೆಲೆಯಲ್ಲಿ ಮನನೊಂದು ಲೋಕೇಶ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶನಿವಾರ ರಾತ್ರಿ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Hit and run | ವೃದ್ಧರ ಮೇಲೆ ಕಾರು ಹರಿದು ಸಾವು, ದ್ವೇಷದಿಂದ ಕೊಲೆ ಶಂಕೆ

Exit mobile version