Site icon Vistara News

Suicide Case | ಶಿವಮೊಗ್ಗದಲ್ಲಿ ನವವಿವಾಹಿತೆ ನೇಣಿಗೆ ಶರಣು; ಕೌಟುಂಬಿಕ ಕಲಹ ಕಾರಣವೇ?

shivamogga navyashree

ಶಿವಮೊಗ್ಗ: ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆಯೊಬ್ಬರು ಇಲ್ಲಿನ ಅಶ್ವಥ್ ನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide Case) ಶರಣಾಗಿದ್ದಾರೆ.

ನವ್ಯಶ್ರೀ (23) ನೇಣಿಗೆ ಶರಣಾದ ದುರ್ದೈವಿ. ಇವರು ತಮ್ಮ ಮನೆಯ ಕಾರ್ ಶೆಡ್‌ನಲ್ಲಿ ಶನಿವಾರ ರಾತ್ರಿ ನೇಣಿಗೆ ಶರಣಾಗಿದ್ದಾರೆ. 5 ತಿಂಗಳ ಹಿಂದಷ್ಟೇ ಆಕಾಶ್ ಎಂಬುವರನ್ನು ವಿವಾಹವಾಗಿದ್ದರು. ನಗರದ ಖ್ಯಾತ ವೈದ್ಯೆ ಡಾ. ಜಯಶ್ರೀ ಹೊಮ್ಮರಡಿ ಅವರ ಸೊಸೆಯಾಗಿದ್ದಾರೆ.

ತುಳಸಿ ಪೂಜೆಯಲ್ಲಿ ಭಾಗಿಯಾಗಿದ್ದ ನವ್ಯಶ್ರೀ
ನವ್ಯಶ್ರೀ ಶನಿವಾರ ರಾತ್ರಿ ತುಳಸಿ ಪೂಜೆಯನ್ನು ನೆರವೇರಿಸಿ ಅರಿಶಿನ, ಕುಂಕುಮವನ್ನೂ ಸ್ವೀಕರಿಸಿದ್ದರು ಎನ್ನಲಾಗಿದೆ. ಬಳಿಕ ಕಾರು ಶೆಡ್‌ನಲ್ಲಿ ನೇಣು ಬಿಗಿದು, ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನವ್ಯಶ್ರೀ ಕುಟುಂಬಸ್ಥರ ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Suicide Case | ಹೆಣ್ಣು ಮಗು ಹುಟ್ಟಿತು ಎಂಬ ಕಾರಣಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ

Exit mobile version