ಬಳ್ಳಾರಿ: ಇಲ್ಲಿನ ಕೊಳಗಲ್ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ತಂದೆಯೊಬ್ಬ ಐದು ವರ್ಷದ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿ, ಬಳಿಕ ತಾನೂ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಯೆಂಕಪ್ಪ ಈಡಿಗೇರ್ (32) ಆತ್ಮಹತ್ಯೆ (Suicide Case) ಮಾಡಿಕೊಂಡ ವ್ಯಕ್ತಿ. ಯೆಂಕಪ್ಪನ ಮಗ ವಿಜಯ ಮೃತ ದುರ್ದೈವಿ.
ಪತ್ನಿ ಸಾವಿನ ನಂತರ ಮನನೊಂದಿದ್ದ ಯೆಂಕಪ್ಪ ತೀವ್ರ ಖಿನ್ನತೆಗೆ ಒಳಗಾಗಿದ್ದ. ಈ ಹಿನ್ನೆಲೆಯಲ್ಲಿ ಇಂತಹದ್ದೊಂದು ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ. ಕಳೆದ ಸೆಪ್ಟೆಂಬರ್ 14ರಂದು ಯೆಂಕಪ್ಪ ಪತ್ನಿಯನ್ನು ಕಳೆದುಕೊಂಡಿದ್ದ.
ಜಮೀನಿಗೆ ತೆರಳುವ ವೇಳೆ ಆಟೋ ಕಾಲುವೆಗೆ ಮಗುಚಿ ಬಿದ್ದ ವೇಳೆ ಪತ್ನಿ ಹುಲಿಗೆಮ್ಮ ಮೃತಪಟ್ಟಿದ್ದರು. ಪತ್ನಿ ಸಾವಿನ ನಂತರ ಮನನೊಂದಿದ್ದ ಯೆಂಕಪ್ಪ ಈಡಿಗೇರ್, ಮಂಗಳವಾರ ತಮ್ಮ 5 ವರ್ಷದ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದು ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ. ಇನ್ನೊಬ್ಬ ಮಗ ಹೊರಗೆ ಆಟ ಆಡಲು ಹೋಗಿ ವಾಪಸ್ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ | Appu Namana | ಮಳೆಹನಿಗಳ ಮಂಗಳವೃಷ್ಟಿಯೊಂದಿಗೆ ಪುನೀತ್ ಮುಡಿಗೇರಿತು ಕರ್ನಾಟಕ ರತ್ನ ಪ್ರಶಸ್ತಿ