ಮಂಡ್ಯ: ಇಲ್ಲಿನ ವಿ.ಸಿ ಫಾರಂ ಬಳಿ ತಾಯಿ ಸಾವಿನಿಂದ ಮನನೊಂದ ಮಗನೂಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ (Suicide Case) ಶರಣಾಗಿರುವ ಘಟನೆ ನಡೆದಿದೆ. ನಗರದ ಕ್ರಿಶ್ಚಿಯನ್ ಕಾಲೋನಿಯ ನಿತಿನ್ ಮೃತ ದುರ್ದೈವಿ.
ನಿತಿನ್ ತಾಯಿ ವೀಣಾ ಎಂಬುವವರು ಭಾನುವಾರ (ಜ.1) ಸಂಜೆ ಮನೆಯಲ್ಲಿ ನೇಣು ಬಿಗಿದು ಮೃತಪಟ್ಟಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಶವವನ್ನು ಕಂಡ ನಿತಿನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ತಾಯಿ ಸಾವಿನಿಂದ ಮನನೊಂದ ನಿತಿನ್ ಸೋಮವಾರ (ಜ.2) ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತ ತಾಯಿ-ಮಗನ ಆತ್ಮಹತ್ಯೆ ಪ್ರಕರಣ ಸಂಬಂಧ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Suicide Case | ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಪ್ರಕರಣ: ಶಾಸಕ ಅರವಿಂದ ಲಿಂಬಾವಳಿ ವಿರುದ್ಧವೂ ಎಫ್‌ಐಆರ್