ಬೆಂಗಳೂರು: ಕಾರಿನೊಳಗೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ, ಉದ್ಯಮಿ ಪ್ರದೀಪ್ ಮೂರು ಡೆತ್ ನೋಟ್‌ಗಳನ್ನು ಬರೆದಿಟ್ಟಿದ್ದ ಎಂದು ತಿಳಿದುಬಂದಿದೆ. ಲಿಂಬಾವಳಿ ಅವರ ಹೆಸರು ಪ್ರಕರಣದಲ್ಲಿ ದಾಖಲಿಸದಂತೆಯೂ ಒತ್ತಡವಿತ್ತು ಎಂದು ಗೊತ್ತಾಗಿದೆ.
ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕಗ್ಗಲೀಪರ ಸಮೀಪದ ರೆಸಾರ್ಟ್‌ಗೆ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಪ್ರದೀಪ್ ಹೋಗಿದ್ದ. ಅದಕ್ಕೂ ಮುನ್ನ ಹುಟ್ಟೂರು ಶಿರಾಗೆ ಹೋಗಲು ಪ್ಲಾನ್ ಮಾಡಿ ಪತ್ನಿ ನಮಿತಾಳನ್ನು ಕರೆದಿದ್ದ. ಪತ್ನಿ ಶಿರಾಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ರೆಸಾರ್ಟಿಗೆ ಹೋಗಿದ್ದರು. ರಾತ್ರಿ ಪಾರ್ಟಿ ಮುಗಿಸಿದ ಬಳಿಕ ಪ್ರದೀಪ್ ಮಂಕಾಗಿದ್ದ. ಬೆಳಗ್ಗೆ ಯಾರಿಗೂ ಹೇಳದೆ ಬೆಳ್ಳಂದೂರಿನ ಮನೆಗೆ ಬಂದಿದ್ದ ಆತ, ಆತ್ಮಹತ್ಯೆಗೆ ನಿರ್ಧಾರ ಮಾಡಿ, ಮನೆಯಲ್ಲಿದ್ದ ಲೈಸೆನ್ಸ್‌ಡ್ ಪಿಸ್ತೂಲ್ ತೆಗೆದುಕೊಂಡಿದ್ದ.
ಬಳಿಕ ಬರೆದಿದ್ದ ಮೂರು ಡೆತ್ ನೋಟ್‌ಗಳಲ್ಲಿ ಒಂದನ್ನು ಪತ್ನಿ ನಮಿತಾ ವಾರ್ಡ್‌ರೋಬ್‌ನಲ್ಲಿಟ್ಟಿದ್ದ. ಬಳಿಕ ರೆಸಾರ್ಟ್‌ಗೆ ತೆರಳಿ ಸಂಬಂಧಿಕರ ಕಾರಿನ ವೈಪರ್ ಬಳಿ ಒಂದನ್ನು ಇಟ್ಟಿದ್ದ. ಬಳಿಕ ಮತ್ತೊಂಡ್ ಡೆತ್ ನೋಟನ್ನು ತನ್ನ ಕಾರಿನಲ್ಲಿಟ್ಟು, ಅದಕ್ಕೆ ಬ್ಯಾಂಕ್ ದಾಖಲೆಗಳನ್ನು ಅಟ್ಯಾಚ್ ಮಾಡಿದ್ದ. ಅದನ್ನು ಗಮನಿಸದ ಸಂಬಂಧಿಕರು ಸಂಜೆ ನಾಲ್ಕು ಗಂಟೆಗೆ ರೆಸಾರ್ಟ್‌ನಿಂದ ಹೊರಟಿದ್ದರು. ಪ್ರದೀಪ್ ಸಂಬಂಧಿಕರು ಹೋಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಿ ಮುನ್ನುಗ್ಗಿ, ಬಳಿಕ ಒಂದು ಕಿ.ಮೀ ದೂರದಲ್ಲಿ ನಿಟ್ಟಿಗೆರೆ ಎಂಬಲ್ಲಿ ಸಂಬಂಧಿಕರು ಹಿಂದೆ ಬರುತ್ತಿರುವುದನ್ನು ಖಾತ್ರಿ ಮಾಡಿಕೊಂಡಿದ್ದ. ಬಳಿಕ ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರದೀಪ್ ಕಾರಿನ ಹತ್ತಿರ ಬಂದ ಸಂಬಂಧಿಕರು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತನ್ನ ಶವ ಅನಾಥವಾಗಬಾರದು ಎಂಬುದಕ್ಕಾಗಿ ಈ ಸರ್ಕಸ್ ಮಾಡಿದ್ದನೆಂದು ಊಹಿಸಲಾಗಿದೆ.
ಇದನ್ನೂ ಓದಿ | Suicide Case | ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಪ್ರಕರಣ: ಶಾಸಕ ಅರವಿಂದ ಲಿಂಬಾವಳಿ ವಿರುದ್ಧವೂ ಎಫ್‌ಐಆರ್
ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಕಗ್ಗಲೀಪುರ ಪೊಲೀಸರು, ಪ್ರದೀಪ್ ಪತ್ನಿ ನೀಡಿದ ದೂರು ಹಾಗೂ ಡೆತ್ ನೋಟ್ ಆಧಾರದ ಮೇಲೆ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್ ದಾಖಲಿಸದಂತೆ ಪೊಲೀಸರ ಮೇಲೆ ಲಿಂಬಾವಳಿ ಕಡೆಯಿಂದ ಒತ್ತಡ ಬಂದಿತ್ತು ಎಂದು ಹೇಳಲಾಗಿದೆ. ರಾತ್ರೋರಾತ್ರಿ ಸಿಎಂ ಮನೆಗೆ ದೌಡಾಯಿಸಿದ್ದಲ್ಲದೆ, ಬಳಿಕ ಎಸ್‌ಪಿ ಮೇಲೆ ತಮ್ಮ ಹೆಸರು ಕೈ ಬಿಡುವಂತೆ ಒತ್ತಡ ತರಿಸಿದ್ದರು. ಆದೆ ಅಷ್ಟರಲ್ಲಾಗಲೇ ಆರು ಜನರ ವಿರುದ್ಧ ಕಗ್ಗಲೀಪುರ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ದೂರು ವಾಪಸ್ಸು ಪಡೆಯುವಂತೆ ಪ್ರದೀಪ್ ಪತ್ನಿಯ ಮೇಲೂ ಒತ್ತಡ ಹಾಕಲಾಗಿದೆ. ದೂರು ಕೊಟ್ಟ ಕೆಲವೇ ನಿಮಿಷಗಳಲ್ಲಿ ಪತ್ನಿ ನಮಿತಾ ಹಿಂದೇಟು ಹಾಕಿದ್ದರು. ಪ್ರಕರಣದ ಗಂಭೀರತೆ ಅರಿತು ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಕೊನೆಗೆ ಒತ್ತಡಕ್ಕೆ ಮಣಿದು ಆರೋಪಿಗಳಿಗೆ ನೋಟಿಸ್ ನೀಡಲು ಚಿಂತನೆ ನಡೆಸಿದ್ದರು. ಸದ್ಯ ಐವರು ಆರೋಪಿಗಳಿಗೆ ನೊಟೀಸ್ ನೀಡಲಾಗಿದೆ. ಅವರ ಹೇಳಿಕೆ ಪಡೆದು ಲಿಂಬಾವಳಿಗೂ ನೊಟೀಸ್ ನೀಡಲಾಗಿದೆ. ಪ್ರದೀಪ್ ಪತ್ನಿ ನಮಿತಾ ಮೇಲೂ ಕೆಲವು ಅನುಮಾನಗಳಿದ್ದು, ಅವರ ಫೋನ್‌ನ ಸಿಡಿಆರ್ ಕಲೆಕ್ಟ್ ಮಾಡಲಾಗಿದೆ.
ಇದನ್ನೂ ಓದಿ | Suicide Case | ಡೆತ್ ನೋಟ್‌ನಲ್ಲಿ ಬಸವರಾಜ ಬೊಮ್ಮಾಯಿ ಹೆಸರು ಬರೆದರೆ ಏನು ಮಾಡ್ತೀರಿ?: ಯಾವುದೇ ತನಿಖೆಗೆ ಸಿದ್ಧ ಎಂದ ಅರವಿಂದ ಲಿಂಬಾವಳಿ