Site icon Vistara News

Suicide Case: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 21ರ ಮಹಿಳೆ; ಕೌಟುಂಬಿಕ ಕಲಹ ಶಂಕೆ

Suicide Case updates 21 year old woman commits suicide by hanging herself

ಶಿವಮೊಗ್ಗ: ಇಲ್ಲಿನ ಮಿಳಘಟ್ಟದ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide Case) ಶರಣಾಗಿದ್ದಾರೆ. ಕೌಟುಂಬಿಕ ಕಾರಣ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮಳಘಟ್ಟದ ಸಂಗೀತ (21) ಮೃತ ಮಹಿಳೆ. ಇವರು ಎರಡು ವರ್ಷಗಳ ಹಿಂದಷ್ಟೇ ಮಿಳಘಟ್ಟದ ನಿವಾಸಿ ಗುರೂಮೂರ್ತಿ ವಿವಾಹವಾಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದಾಗ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೆ, ಪ್ರಕರಣ ದಾಖಲು ಮಾಡಿಕೊಂಡಿದ್ದು, ಕುಟುಂಬದವರ ವಿಚಾರಣೆ ಕೈಗೊಂಡಿದ್ದಾರೆ. ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ: MySugar Factory: ಮೈಶುಗರ್ ಕಾರ್ಖಾನೆಗೆ ಬಾಕಿ ಇರುವ 17.42 ಕೋಟಿ ರೂ. ಬಿಡುಗಡೆ ಮಾಡಿ: ದಿನೇಶ್‌ ಗೂಳಿಗೌಡ

ನಿರ್ಜನ ಪ್ರದೇಶದಲ್ಲಿ 8 ವರ್ಷದ ಬಾಲಕನ ಶವ ಪತ್ತೆ; ದುಷ್ಕರ್ಮಿಗಳು ಕೊಲೆ ಮಾಡಿ ಎಸೆದ ಶಂಕೆ

ಹುಬ್ಬಳ್ಳಿ: ಇಲ್ಲಿನ ದೊಡ್ಡ ಮನಿ ಕಾಲೊನಿಯ ಪಾಳು ಬಿದ್ದ ನಿರ್ಜನ ಜಾಗದಲ್ಲಿ ಎಂಟು ವರ್ಷದ ಬಾಲಕನೊಬ್ಬನ ಶವ ಪತ್ತೆಯಾಗಿದ್ದು, ಪರಿಸರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಆತನನ್ನು ಕೊಲೆ ಮಾಡಿ ಎಸೆದಿರುವ (Mysterious death) ಸಂಶಯವಿದೆ. ನದೀಮ್ ಹಸನಸಾಬ್ ಹುಬ್ಬಳ್ಳಿ (8) ಮೃತ ಬಾಲಕ. ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದ ಈ ಹುಡುಗನಿಗಾಗಿ ಎಲ್ಲ ಕಡೆ ಹುಡುಕಾಟ ನಡೆದಿತ್ತು. ಪೋಷಕರು ಪೊಲೀಸರಿಗೂ ದೂರು ನೀಡಿದ್ದರು. ಆದರೆ, ಎಲ್ಲೂ ಆತ ಪತ್ತೆಯಾಗಿರಲಿಲ್ಲ. ಶುಕ್ರವಾಗ ಕುರುಚಲು ಗಿಡಗಳಿರುವ ನಿರ್ಜನ ಪ್ರದೇಶದಲ್ಲಿ ಆತನ ಶವ ಪತ್ತೆಯಾಗಿದ್ದು, ಹಲವು ಸಂಶಯಗಳನ್ನು ಹುಟ್ಟುಹಾಕಿದೆ.

ಮೂರನೇ ತರಗತಿಯಲ್ಲಿ ಓದುತ್ತಿರುವ ಈ ಹುಡುಗನಿಗೆ ಶಾಲೆಗೆ ರಜೆ ಸಿಕ್ಕಿದೆ. ಹೀಗಾಗಿ ಆತ ಘಂಟಿಕೇರಿಯಲ್ಲಿರುವ ಅಜ್ಜಿ‌ ಮನೆಗೆ ಬಂದಿದ್ದ. ಸಂಜೆಯವರೆಗೂ ಆಟವಾಡುತ್ತಿದ್ದ ಆತ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದ. ಶುಕ್ರವಾರ ಮನೆಯಿಂದ ಸ್ವಲ್ಪ ದೂರದಲ್ಲಿರುವ ದೊಡ್ಡಮನಿ ಕಾಲನಿಯ ಪಾಳುಬಿದ್ದ ಜಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಎಸೆದಿರುವ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆಯಾದರೂ ಇಷ್ಟು ಸಣ್ಣ ಹುಡುಗನನ್ನು ಯಾಕೆ ಕೊಲೆ ಮಾಡಿದರು ಎಂಬ ಸಂಶಯವಿದೆ. ಕುಟುಂಬದ ವಿವರಗಳು, ಈ ಭಾಗದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಹಂತಕರನ್ನು ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ʼಕಾಂತಾರ’ ಚಿತ್ರದ ದೃಶ್ಯ ಕಳಿಸಿ ಕೊಲೆ ಬೆದರಿಕೆ! ದೂರು ದಾಖಲು

ಬೆಂಗಳೂರು: ʼಕಾಂತಾರʼ ಚಲನಚಿತ್ರದ ದೃಶ್ಯವೊಂದು ಕೊಲೆ ಬೆದರಿಕೆಗೆ ಬಳಕೆಯಾಗಿರುವ ವಿಲಕ್ಷಣ ಘಟನೆ ನಡೆದಿದೆ. ಜಮೀನು ವ್ಯಾಜ್ಯ ಸಂಬಂಧ ಹಿರಿಯ ನಾಗರಿಕರೊಬ್ಬರಿಗೆ ಹೀಗೆ ಕೊಲೆ ಬೆದರಿಕೆ ಹಾಕಲಾಗಿದೆ.

ಕುಣಿಗಲ್‌ನಲ್ಲಿ ನರಸಿಂಹಮೂರ್ತಿ ಎಂಬ ಹಿರಿಯ ನಾಗರಿಕರಿಗೆ ಶರತ್ ಕುಮಾರ್ ಎಂಬಾತ ಹೀಗೆ ಹತ್ಯೆ ಬೆದರಿಕೆ ಒಡ್ಡಿದ್ದಾನೆ. ಕುಣಿಗಲ್‌ನಲ್ಲಿ ಪತ್ನಿ ಹೆಸರಿನಲ್ಲಿ ನರಸಿಂಹ ಮೂರ್ತಿ ಎರಡು ಎಕರೆ ಜಮೀನು ಖರೀದಿ ಮಾಡಿದ್ದರು. ಈ ಜಮೀನಿನ ಕುರಿತು ಶರತ್‌ ಕುಮಾರ್‌ ಎಂಬಾತ ತಗಾದೆ ತೆಗೆದಿದ್ದ. ಜಮೀನಿಗೆ ಈತ ಅತಿಕ್ರಮ ಪ್ರವೇಶ ಮಾಡಿದ್ದಾನೆ ಎಂದು ಈ ಹಿಂದೆ ನರಸಿಂಹಮೂರ್ತಿ ದೂರು ನೀಡಿದ್ದರು. ಸದ್ಯ ಜಮೀನು ವ್ಯಾಜ್ಯ ನ್ಯಾಯಾಲಯದಲ್ಲಿದೆ.

ಇದನ್ನೂ ಓದಿ: Fire tragedy : ಹೊಸಕೋಟೆಯಲ್ಲಿ ಭೀಕರ ದುರಂತ; ಗ್ಯಾಸ್‌ ಸಿಲಿಂಡರ್‌ ಲೀಕ್‌ ಆಗಿ 7 ಕಾರ್ಮಿಕರ ದಾರುಣ ಸಾವು

ಇದೇ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಶರತ್ ಕುಮಾರ್ ತನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ವಾಟ್ಸ್ಯಾಪ್ ಮೂಲಕ ʼಕಾಂತಾರʼ ಚಿತ್ರದ ದೃಶ್ಯಗಳನ್ನು ಕಳಿಸಿ ಇದೇ ರೀತಿ ಸಾಯ್ತೀಯ ಎಂದು ಬೆದರಿಕೆ ಹಾಕಿದ್ದಾನೆ ಎಂದು ನರಸಿಂಹಮೂರ್ತಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಎಫ್‌ಐಆರ್‌ನಲ್ಲಿ ಕೂಡ ಉಲ್ಲೇಖಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕಿರುಕುಳ, ಕೊಲೆ ಬೆದರಿಕೆ ದೂರು ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Exit mobile version