Site icon Vistara News

Karnataka Election 2023: ಸಿದ್ದರಾಮಯ್ಯಗೆ ಸನ್‌ಸ್ಟ್ರೋಕ್‌; ಕಾರಲ್ಲಿ ನಿಂತು ಕೈಬೀಸುವಾಗಲೇ ಕುಸಿದುಬಿದ್ದರು

ವಿಜಯನಗರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಕಣ ದಿನೇ ದಿನೆ ಕಾವು ಪಡೆದುಕೊಳ್ಳುತ್ತಿದೆ. ಬಿಸಿಲ ಝಳದ ಮಧ್ಯೆಯೂ ರಾಜಕೀಯ ನಾಯಕರು ದಣಿವರಿಯದೇ ಪ್ರಚಾರದಲ್ಲಿ ನಿರತರಾಗಿದ್ದಾರೆ. ರಾಜ್ಯದ ಹಲವು ಕಡೆ ಸಂಚಾರ ಮಾಡುತ್ತಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಎನ್.ಟಿ. ಶ್ರೀನಿವಾಸ್ ಪರವಾಗಿ ಪ್ರಚಾರಕ್ಕೆ ಆಗಮಿಸಿದಾಗ ಸನ್‌ಸ್ಟ್ರೋಕ್‌ನಿಂದಾಗಿ (Sunstroke) (ಬಿಸಿಲಾಘಾತ) ಕುಸಿದುಬಿದ್ದಿರುವ ಘಟನೆ ನಡೆದಿದೆ.

ಕೂಡ್ಲಿಗಿ ಕಾಂಗ್ರೆಸ್ ಅಭ್ಯರ್ಥಿ ಡಾ. ಎನ್.ಟಿ. ಶ್ರೀನಿವಾಸ್ ಪರವಾಗಿ ಸಿದ್ದರಾಮಯ್ಯ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಮೂಲಕ ಕೂಡ್ಲಿಗಿಗೆ ಶನಿವಾರ (ಏಪ್ರಿಲ್‌ 29) ಸಿದ್ದರಾಮಯ್ಯ ಅವರು ಆಗಮಿಸಿದರು. ಈ ವೇಳೆ ಕೆಲವು ಸಮಯ ಫೋನ್‌ನಲ್ಲಿ ಸಂಭಾಷಣೆ ಮಾಡಿದ್ದಾರೆ.

ಕೂಡ್ಲಿಗಿ ಹೆಲಿಪ್ಯಾಡ್‌ನಲ್ಲಿ ಕಾರು ಹತ್ತಲು ಆಗಮಿಸಿದ ಸಿದ್ದರಾಮಯ್ಯ

ಇದನ್ನೂ ಓದಿ: Karnataka Election 2023: 80 ವರ್ಷ ದಾಟಿದವರ ವೋಟಿಂಗ್‌ ಮನೆಯಿಂದಲೇ ಶುರು; ಮತದಾನ ಪ್ರಕ್ರಿಯೆ ಜೋರು

ಬಳಿಕ ಕಾರಿನ ಬಳಿಗೆ ಬಂದು ಸುತ್ತಮುತ್ತಲು ಸೇರಿದ್ದ ಬೆಂಬಲಿಗರು, ಪಕ್ಷದ ಕಾರ್ಯಕರ್ತರನ್ನು ಮಾತನಾಡಿಸಿದ್ದಾರೆ. ಈ ವೇಳೆಯೇ ಸ್ವಲ್ಪ ಆಯಾಸವಾದಂತೆ ಸಿದ್ದರಾಮಯ್ಯ ಕಂಡಿದ್ದರು. ಹಾಗೇ ಕಾರನ್ನು ಏರುತ್ತಾ ಜನರತ್ತ ಕೈ ಬೀಸಲು ಹೋಗಿದ್ದಾರೆ. ಹಾಗೆಯೇ ಅವರಿಗೆ ಕಣ್ಣು ಕತ್ತಲು ಆವರಿಸಿದಂತೆ ಆಗಿ ಕಣ್ಮುಚ್ಚಿ ಕುಸಿದಿದ್ದಾರೆ. ತಕ್ಷಣವೇ ಅವರನ್ನು ಅಕ್ಕಪಕ್ಕದಲ್ಲಿದ್ದವರು ಹಿಡಿದು ಕೂರಿಸಿದ್ದಾರೆ.

ನೀರು ಕೊಟ್ಟು ಆರೈಕೆ

ಒಮ್ಮೆಗೆ ಕುಸಿದ ಸಿದ್ದರಾಮಯ್ಯ ಅವರನ್ನು ಹಿಡಿದುಕೊಂಡ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು, ಅವರನ್ನು ಹಾಗೇ ಕಾರಿನ ಒಳಗೆ ಕೂರಿಸಿದ್ದಾರೆ. ತಕ್ಷಣ ನೀರನ್ನು ಕುಡಿಯಲು ಕೊಟ್ಟಿದ್ದಾರೆ. ಬಳಿಕ ಅವರಿಗೆ ಗ್ಲೂಕೋಸ್‌ ಅನ್ನು ಸಹ ಕುಡಿಯಲು ನೀಡಿದ್ದಾರೆ. ಇದಾದ ಸ್ವಲ್ಪ ಸಮಯದ ಬಳಿ ಸಿದ್ದರಾಮಯ್ಯ ಅವರು ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ: Modi in Karnataka: ಅಂಬೇಡ್ಕರ್‌ಗೇ ರಾಕ್ಷಸ ಅಂದೋರು ನನ್ನನ್ನು ಬಿಡ್ತಾರಾ?: ಖರ್ಗೆ ವಿಷದ ಹಾವು ಹೇಳಿಕೆಗೆ ಮೋದಿ ಉತ್ತರ

ಕಾರಿನಲ್ಲಿ ಕುಸಿದ ಸಿದ್ದರಾಮಯ್ಯ; ವಿಡಿಯೊ ಇಲ್ಲಿದೆ

ಆರೋಗ್ಯ ಹೇಗಿದೆ ಎಂದು ಮುಖಂಡರು ವಿಚಾರಿಸಿದಾಗ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ತಾವು ಆರಾಮವಾಗಿದ್ದು, ಮುಂದಿನ ಪ್ರಚಾರ ಕಾರ್ಯಕ್ಕೆ ಹೋಗೋಣ ಎಂದು ಹೇಳಿದ್ದಾರೆ. ಅಲ್ಲದೆ, ಮತ್ತೆ ಜನರತ್ತ ಕೈಬೀಸಿದ ಅವರು ಕಾರ್ಯಕ್ರಮಕ್ಕೆ ತೆರೆಳುವ ಮುಂಚೆ ಎನ್.ಟಿ. ಶ್ರೀನಿವಾಸ ಅವರ ಮನೆಗೆ ತೆರಳಿ ಆರೈಕೆ ಪಡೆದಿದ್ದಾರೆ.

Exit mobile version