ನವದೆಹಲಿ: ಸಿಜೆಐ ಡಿ ವೈ ಚಂದ್ರಚೂಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸುಪ್ರೀಂ ಕೋರ್ಟ್ (Supreme Court) ಕೊಲಿಜಿಯಂ ಸಭೆಯು, 7 ನ್ಯಾಯಾಧೀಶರು ಮತ್ತು ಇಬ್ಬರು ನ್ಯಾಯವಾದಿಗಳನ್ನು ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ. ನ್ಯಾಯಾಧೀಶರಾದ ರಾಮಚಂದ್ರ ದತ್ತಾತ್ರೇಯ ಹುದ್ದಾರ್ ಮತ್ತು ವೆಂಕಟೇಶ್ ನಾಯ್ಕ್ ಥಾವರ್ಯನಾಯ್ಕ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳಾಗಿ ಶಿಫಾರಸು ಮಾಡಲಾಗಿದೆ.
ಮತ್ತೊಂದೆಡೆ, ಈ ಹಿಂದೆ ಶಿಫಾರಸು ಮಾಡಲಾಗಿದ್ದ ನಾಗೇಂದ್ರ ರಾಮಚಂದ್ರ ನಾಯ್ಕ್ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ಜಡ್ಜ್ ಆಗಿ ನೇಮಕ ಮಾಡಲು ಮತ್ತೆ ಶಿಫಾರಸು ಮಾಡಲಾಗಿದೆ. ಜನವರಿ 10ರಂದು ಕೊಲಿಜಿಯಂ ಸಭೆ ನಡೆಯಿತು. ಇದೇ ವೇಳೆ, ಬಾಂಬೆ ಹೈಕೋರ್ಟ್ ಜಡ್ಜ್ ಆಗಿ, ನ್ಯಾಯವಾದಿ ನೀಲಾ ಕೇದಾರ್ ಗೋಕಲೆ ಅವರನ್ನು ಶಿಫಾರಸು ಮಾಡಲಾಗಿದೆ. ಹಾಗೆಯೇ, ಗುವಾಹಟಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನ್ಯಾಯಾಧೀಶರಾದ ಮೃದುಲ್ ಕುಮಾರ್ ಕಲಿತಾ ಅವರನ್ನು ಹೆಸರಿಸಲಾಗಿದೆ.
ನ್ಯಾಯಾಧೀಶರಾದ ಪಿ ವೆಂಕಟ್ ಜ್ಯೋತಿರ್ಮಯಿ, ವಿ ಗೋಪಾಲಕೃಷ್ಣ ರಾವ್ ಅವರಿಗೆ ಆಂಧ್ರ ಹೈಕೋರ್ಟ್ ಜಡ್ಜ್ ಗಳಾಗಿ ಭಡ್ತಿಗೆ ಒಪ್ಪಿಗೆ ಸೂಚಿಸಲಾಗಿದೆ. ಮಣಿಪುರ್ ಹೈಕೋರ್ಟ್‌ಗೆ ಜುಡಿಷಿಯಲ್ ಆಫೀಸರ್‌ಗಳಾದ ಅರಿಬಮ್ ಗುಣೇಶ್ವರ್ ಶರ್ಮಾ ಮತ್ತು ಗೋಲ್ಮೆಯಿ ಗೈಫುಲ್ಶಿಲ್ಲು ಕಬುಯಿ ಅವರನ್ನು ಜಡ್ಜ್ ಆಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿ | Collegium | 2022ರಲ್ಲಿ ಅತಿ ಹೆಚ್ಚು ಜಡ್ಜ್‌ಗಳ ನೇಮಕ, ಕೊಲಿಜಿಯಂ ಬಿಕ್ಕಟ್ಟಿನ ಮಧ್ಯೆಯೇ ಕೇಂದ್ರ ಸರ್ಕಾರ ಸ್ಪಷ್ಟನೆ