ಮಂಗಳೂರು: ಸುರತ್ಕಲ್‌ನ ಜಲೀಲ್ ಕೊಲೆ ಪ್ರಕರಣ ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೊಲೆಯ (Surathkal Murder) ನಿಜವಾದ ಉದ್ದೇಶ ಏನು ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ.
ಸುರತ್ಕಲ್‌ನ ಕಾಟಿಪಳ್ಳದ ನಾಲ್ಕನೇ ವಾರ್ಡ್‌ನಲ್ಲಿ ಶನಿವಾರ ನಡೆದ ಜಲೀಲ್ ಕೊಲೆ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಜಲೀಲ್ ಕಾಟಿಪಳ್ಳದ 9ನೇ ವಾರ್ಡ್‌ನಲ್ಲಿ ವಾಸವಾಗಿದ್ದು, 4ನೇ ವಾರ್ಡ್‌ನಲ್ಲಿ ಅಂಗಡಿ ಇಟ್ಟುಕೊಂಡಿದ್ದರು. ಎರಡು ಪ್ರದೇಶಗಳೂ ಕೋಮು ಸೂಕ್ಷ್ಮ ಪ್ರದೇಶವಾಗಿದ್ದರೂ, 4ನೇ ವಾರ್ಡ್ ಹಿಂದು ಪ್ರಾಬಲ್ಯ ಹೊಂದಿರುವ ಪ್ರದೇಶವಾಗಿದೆ. ಅಲ್ಲಿಯ ಅನೇಕ ಹಿಂದುಗಳ ಜತೆ ಆತ್ಮೀಯತೆ ಇಟ್ಟುಕೊಂಡಿದ್ದ ಜಲೀಲ್ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು.
ಇದನ್ನೂ ಓದಿ | Sexual harassment | ಬೆಂಗಳೂರು ಟರ್ಫ್ ಕ್ಲಬ್ ಮಾಜಿ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಇದೇ ಸಲುಗೆಯಲ್ಲಿ ಹಿಂದು ಮಹಿಳೆಯೊಬ್ಬರ ಜತೆ ಜಲೀಲ್ ಅನೈತಿಕ ಸಂಬಂಧ ಬೆಳೆಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇದೇ ಕಾರಣದಿಂದ ಜಲೀಲ್ ಅವರನ್ನು ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಯುವಕರು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತನಿಖೆ ನಡೆಸಿರುವ ಪೊಲೀಸರು ಮಹಿಳೆ ಸೇರಿದಂತೆ ಹಲವರನ್ನು ವಿಚಾರಣೆ ಮಾಡಿದ ನಂತರ ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳಲ್ಲಿ ಇಬ್ಬರು ಈ ಹಿಂದೆಯೂ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದವರಾಗಿದ್ದಾರೆ. ಕೊಲೆಯ ನಿಜವಾದ ಉದ್ದೇಶವನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆರೋಪಿಗಳು ದಾಳಿ ಮಾಡುವುದನ್ನು ಕಣ್ಣಾರೆ ಕಂಡವರು ಇದ್ದಾರೆ. ಅವರು ಆರೋಪಿಗಳ ಗುರುತು ಪತ್ತೆ ಮಾಡಬೇಕಿದೆ. ಆ ಬಳಿಕ ನಿಖರ ಮಾಹಿತಿಯನ್ನು ತಿಳಿಸುವುದಾಗಿ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ | Assault | ಪುಟ್‌ಪಾತ್ ಮೇಲೆ ಬೈಕ್ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮುಖಕ್ಕೆ ಪಂಚ್ ಮಾಡಿದ ಡೆಲಿವರಿ ಬಾಯ್