Site icon Vistara News

BWSSB Corruption | ಕೋಟ್ಯಂತರ ರೂಪಾಯಿ ನುಂಗಿದ್ದ ಜಲಮಂಡಳಿಯ 13 ಭ್ರಷ್ಟ ಅಧಿಕಾರಿಗಳು, ಸಿಬ್ಬಂದಿ ಅಮಾನತು

BWSSB Corruption

ಬೆಂಗಳೂರು: ಕೋಟ್ಯಂತರ ರೂಪಾಯಿ ಕಾವೇರಿ ನೀರಿನ ಬಿಲ್ ಹಣ ದುರ್ಬಳಕೆ ಮಾಡಿಕೊಂಡಿದ್ದ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB Corruption) ೧೩ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಗ್ರಾಹಕರು ಪಾವತಿಸಿದ್ದ 5 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಮಂಡಳಿಗೆ ಪಾವತಿಸದ ಅಧಿಕಾರಿಗಳು ಹಾಗೂ ಬಿಲ್ ಕಲೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ. ನೋಟ್ ಬ್ಯಾನ್ ಮತ್ತು ಕೋವಿಡ್ ವೇಳೆ ನಗದು ಪಾವತಿಗೆ ಮಂಡಳಿ ಅವಕಾಶ ನೀಡಿತ್ತು. ಇದನ್ನೇ ಬಂಡವಾಳ ಮಾಡಿಕೊಂಡು ಕೆಲ ಅಧಿಕಾರಿಗಳು, ಸಿಬ್ಬಂದಿ ಮಂಡಳಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದರು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಮಂಡಳಿಯ 45 ಉಪ ವಿಭಾಗಗಳಲ್ಲಿ ಹಣ ದುರ್ಬಳಕೆ ಸಂಬಂಧ ಹಲವು ಪೊಲೀಸ್ ಠಾಣೆಗಳಿಗೆ ಮಂಡಳಿಯಿಂದ ದೂರು ನೀಡಲಾಗಿತ್ತು. ಅಡಿಟ್‌ನಲ್ಲಿ ಪತ್ತೆಯಾಗದಂತೆ ಹಣ ಗುಳುಂ ಮಾಡಿದ್ದ ಭ್ರಷ್ಟ ಅಧಿಕಾರಿಗಳನ್ನು ಪತ್ತೆ ಹಚ್ಚಲು ಜಲ ಮಂಡಳಿಯಿಂದ 3 ತನಿಖಾ ತಂಡ ರಚನೆ ಮಾಡಲಾಗಿತ್ತು. ಆಂತರಿಕ ತನಿಖೆಯಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ 13 ಅಧಿಕಾರಿಗಳನ್ನು ಅಮಾನತು ಮಾಡಿ, ಬೆಂಗಳೂರು ಜಲಮಂಡಳಿಯ‌ ಅಧ್ಯಕ್ಷ ಜಯರಾಂ ಆದೇಶ ಹೊರಡಿಸಿದ್ದಾರೆ.

ಎಂಜಿನಿಯರ್, ಕಂದಾಯ ವ್ಯವಸ್ಥಾಪಕರು, ಸಹಾಯಕರ ಕಲ್ಯಾಣ ಅಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಯಾವೆಲ್ಲ ಅಧಿಕಾರಿಗಳು ಸಸ್ಪೆಂಡ್?

ಇದನ್ನೂ ಓದಿ | Fake Doctor Arrested | ದೀರ್ಘಕಾಲೀನ ರೋಗಿಗಳೇ ಟಾರ್ಗೆಟ್‌; ಆಯುರ್ವೇದ ಚಿಕಿತ್ಸೆ ಹೆಸರಿನಲ್ಲಿ‌ ಲಕ್ಷ ಲಕ್ಷ ಪಡೆದು ವಂಚನೆ

Exit mobile version