ಗದಗ: ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಕಾಂಗ್ರೆಸ್ ಮುಖಂಡನ ಸಾವು ಪ್ರಕರಣಕ್ಕೆ ದೊಡ್ಡ ಟಿಸ್ಟ್ ಸಿಕ್ಕಿದೆ. ಏಕಾಏಕಿ ನಿಗೂಢವಾಗಿ ಸಾವನ್ನಪ್ಪಿದ್ದರಿಂದ ಕೊಲೆಯೆಂದೇ ಎಲ್ಲರೂ ಭಾವಿಸಿದ್ದರು. ಇಡೀ ಗ್ರಾಮಸ್ಥರು ಇದು ಸಹಜ ಸಾವಲ್ಲ, ಭಯಾನಕ ಕೊಲೆಯೇ ಎಂದು ತೀರ್ಮಾನಿಸಿಬಿಟ್ಟಿದ್ದರು. ಆದರೆ ಆತನ ಸಾವಿಗೆ (Suspicious Death) ಇದೀಗ ತಿರುವು ಸಿಕ್ಕಿದ್ದು, ಮುಖಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುವುದು ತನಿಖೆಯಲ್ಲಿ ಬಯಲಾಗಿದೆ.
ಹೌದು, ಮಾರ್ಚ್ 12 ರಂದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ವ್ಯಾಪ್ತಿಯ ಬೆಟ್ಟದ ಮೇಲೆ ನಡೆದ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಡೋಣಿ ಗ್ರಾಮದ ಶರಣಪ್ಪ ಸಂದಿಗೌಡರ್ ಎಂಬ 40 ವರ್ಷದ ವ್ಯಕ್ತಿ ನಿಗೂಢವಾಗಿ ಸಾವನ್ನಪ್ಪಿದ್ದ. ಸಾವಿನ ಹಿಂದಿನ ದಿನವಷ್ಟೇ ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದು ಸ್ವಗ್ರಾಮಕ್ಕೆ ವಾಪಾಸ್ ಬರ್ತಿದ್ದ ಶರಣಪ್ಪನನ್ನು ಅದ್ಯಾರೋ ಬೆನ್ನಟ್ಟಿ ಹಲ್ಲೆ ಮಾಡಿದ್ದರು. ಡೋಣಿ ಗ್ರಾಮದ ಹೊರವಲಯದ ಗುಡ್ಡದ ಬಳಿ ಕರೆದುಕೊಂಡು ಬಂದು, ಕಣ್ಣಿಗೆ ಖಾರದ ಪುಡಿ ಎರಚಿ, ಹೆಲ್ಮೆಟ್‌ನಿಂದ ಹಲ್ಲೆ ಮಾಡಿ, ಹಗ್ಗದಿಂದ ಕೈ,ಕಾಲು ಕಟ್ಟಿ, ಮರಕ್ಕೆ ನೇಣು ಬಿಗಿದು ಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ ಅನ್ನೋ ಸುದ್ದಿ ಎಲ್ಲರ ಬಾಯಲ್ಲೂ ಸರಸರನೇ ಹರಿದಾಡಿತ್ತು.
ಅಷ್ಟೇ ಯಾಕೆ ಸ್ಥಳಕ್ಕೆ ಬಂದ ಖಾಕಿಪಡೆ ಸಹ ಇದು ಪಕ್ಕಾ ಇದೇ ರೀತಿ ಕೊಲೆಯಾಗಿರಬಹುದು ಎಂದು ಡಿಸೈಡ್ ಮಾಡಿದ್ದರೇನೋ… ಆದರೆ, ವಿಚಿತ್ರ ಅಂದರೂ ನಂಬಲೇಬೇಕು, ಶರಣಪ್ಪ ಸಂದಿಗೌಡರ್ ಸತ್ತಿದ್ದು, ಯಾರೋ ಮಾಡಿದ ಕೊಲೆಯಿಂದ ಅಲ್ಲಾ, ಬದಲಾಗಿ ಕೊಲೆ ಕಥೆ ಸೃಷ್ಟಿ ಮಾಡಿ, ಸ್ವತಃ ತಾನೇ ಸೆಲ್ಫ್ ಸೂಸೈಡ್ ಮಾಡಿಕೊಂಡಿದ್ದಾನೆ ಅನ್ನೋ ಬಲವಾದ ಸತ್ಯ ಇದೀಗ ಹೊರಬಿದ್ದಿದೆ.
ಶರಣಪ್ಪ ಮತ್ತು ಆತನ ಪತ್ನಿ ನಡುವೆ ಮೊದಲಿನಿಂದಲೂ ವೈವಾಹಿಕ ಜೀವನ ಅಷ್ಟಕಷ್ಟೇ ಇತ್ತು. ಹೀಗಾಗಿ ಶರಣಪ್ಪನಿಂದ ಪತ್ನಿ ದೂರವೇ ಉಳಿದಿದ್ದಳು. ಇದರಿಂದ ಪತ್ನಿ ಮೇಲೆ ಶರಣಪ್ಪನಿಗೆ ಕೆಂಡದಂಥ ವೈಮನಸ್ಸು ಹುಟ್ಟಿಕೊಂಡಿತ್ತು. ಹೀಗಾಗಿ ಶರಣಪ್ಪ ತಾನು ಸಾವಿಗೆ ಶರಣಾಗುವ ಮುನ್ನ ತನ್ನನ್ನು ಪತ್ನಿಯೇ ಕೊಲೆ ಮಾಡಿಸಿದ್ದಾಳೆ ಅನ್ನೋ ರೀತಿ ಪ್ಲ್ಯಾನ್ ಸೃಷ್ಟಿ ಮಾಡಿದ್ದ. ತನ್ನ ಸೆಲ್ಫ್ ಸೂಸೈಡ್ ಅನ್ನ ಕೊಲೆಯಾಗಿ ಕನ್ವರ್ಟ್ ಮಾಡುವುದು ಹೇಗೆಂದು ಹಲವು ದಿನಗಳ ಮುಂಚೆಯೇ ಫ್ಲ್ಯಾನ್ ಮಾಡಿಕೊಂಡಿದ್ದನಂತೆ. ಇದನ್ನು ಭೇದಿಸಲು ಹೊರಟ ಖಾಕಿಪಡೆಗೆ ಶರಣಪ್ಪನ ಕಣ್ಣಿಗೆ ಬೀಳದ ಖಾರದ ಪುಡಿ, ಒಡೆಯದೇ ಇರೋ ಹೆಲ್ಮೆಟ್, ಕೊಂಚವೂ ಗಾಯವಾಗದ ದೇಹ, ತನ್ನ ಕುಟುಂಬಸ್ಥರಿಗೆ ಮಾಡಿದ ಸುಳ್ಳು ದೂರವಾಣಿ ಕರೆಗಳು, ಸುಳ್ಳು ಕೊಲೆಯ ಕಟ್ಟು ಕಥೆಯನ್ನು ಬಿಚ್ಚಿಟ್ಟಿದ್ದವು. ಇದೆಲ್ಲವನ್ನೂ ಭೇದಿಸಿದ ಖಾಕಿ, ವೈದ್ಯಕೀಯ ವರದಿ ಮತ್ತು FSL ವರದಿ ಆಧರಿಸಿ, ಶರಣಪ್ಪನ ಸಾವು ಕೊಲೆ ಅಲ್ಲ, ಇದು ಸೆಲ್ಫ್ ಸೂಸೈಡ್ ಅನ್ನೋದನ್ನು ಖಾತ್ರಿಪಡಿಸಿದೆ.
ಇದನ್ನೂ ಓದಿ | Drowns in Farm Pond: ಜಾನುವಾರು ಮೇಯಿಸುತ್ತಿದ್ದಾಗ ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವು
ಶರಣಪ್ಪ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೂ ಪಕ್ಷಾತೀತವಾಗಿ ಸಹಾಯ ಮಾಡುವ ವ್ಯಕ್ತಿಯಾಗಿದ್ದನಂತೆ. ರಾಜಕೀಯ ಕಾರಣಕ್ಕೆ ಜಗಳ ತೆಗೆಯುವ ಆಸಾಮಿಯಂತೂ ಅಲ್ಲವೇ ಅಲ್ಲ. ಆಗಾಗ ಪತ್ನಿ ಜತೆ ಕಲಹವಿದ್ದ ಕಾರಣ, ಶರಣಪ್ಪನ ಸಾವಿನ ಹಿಂದೆ ಪತ್ನಿಯ ಕೈವಾಡವಿದೆ ಅಂತ, ಸಾವು ನಡೆದ ದಿನವೇ ಗ್ರಾಮಸ್ಥರು ತೀರ್ಮಾನಿಸಿಬಿಟ್ಟಿದ್ದರು. ಅಲ್ಲದೇ ತನ್ನ ಕುಟುಂಬಸ್ಥರಲ್ಲಿಯೂ ಪತ್ನಿಯಿಂದ ಕೊಲೆ ಸಂಚು ನಡೆದಿದೆ ಅನ್ನೋ ರೀತಿ ಶರಣಪ್ಪ ಕಥೆ ಸೃಷ್ಟಿ ಮಾಡಿದ್ದ. ಆದರೆ ಅದೆಲ್ಲವೂ ಇದೀಗ ಉಲ್ಟಾ ಹೊಡೆದಿದೆ. ಹಾವಿನ ದ್ವೇಷ ಹನ್ನೆರೆಡು ವರುಷ ಅಂತ ಹೇಳ್ತಾರೆ. ಆದರೆ ಶರಣಪ್ಪ ತನ್ನ ಸಾವಿನಲ್ಲಿಯೂ ಪತ್ನಿ ಮೇಲೆ ದ್ವೇಷ ಸಾಧಿಸುವ ಪ್ರಯತ್ನ ವಿಫಲವಾಗಿದೆ.