Site icon Vistara News

Swabhimani hindu | ಇಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ, ಜಾರಕಿಹೊಳಿ ವಿರುದ್ಧ ಕೇಸು ದಾಖಲಿಸಲಿದೆ ಬಿಜೆಪಿ

BJP and Gujarat Election

ಬೆಂಗಳೂರು: ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರ ʻಕೀಳು ಹಿಂದುʼ ಹೇಳಿಕೆ ವಿರುದ್ಧ ಬುಧವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್‌ ಪ್ರತಿಭಟನೆ ಆಯೋಜಿಸಲು ಬಿಜೆಪಿ ರಾಜ್ಯ ಸಮಿತಿ ಸೂಚನೆ ನೀಡಿದೆ. ಜತೆಗೆ ಪ್ರತಿ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಜಾರಕಿಹೊಳಿ ವಿರುದ್ಧ ಕ್ರಿಮಿನಲ್‌ ಕಂಪ್ಲೇಂಟ್‌ ದಾಖಲಿಸಲು ನಿರ್ಧರಿಸಿದೆ.

ಪ್ರತಿಭಟನೆಯ ಸ್ವರೂಪವನ್ನು ಬಿಡುಗಡೆ ಮಾಡಿರುವ ಬಿಜೆಪಿ, ಪಕ್ಷದ ಧ್ವಜದೊಂದಿಗೆ ಪ್ರತಿಭಟನೆ ನಡೆಸಬೇಕು, ಕಾಂಗ್ರೆಸ್‌ನ ಹಿಂದೂ ವಿರೋಧಿ ಧೋರಣೆ ಅಥವಾ ನಾನು ಹಿಂದು ಎಂಬ ಬರಹ ಇರುವ ಭಿತ್ತಿ ಫಲಕಗಳನ್ನು ಪ್ರದರ್ಶಿಸಲು ಸೂಚಿಸಿದೆ. ಶಾಸಕರು, ಮಂತ್ರಿಗಳು, ಸಂಸದರು, ಜಿಲ್ಲಾ ಮುಖಂಡರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಬೇಕು ಎಂದು ಹೇಳಿದೆ.

ಹಿಂದೂ ಎಂಬ ಶಬ್ದ ಅನಾದಿ ಎಂಬ ನಿಕಟಪೂರ್ವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ನುಡಿ, ಹಿಂದೂ ಎಂಬುದು ಜೀವನಪದ್ಧತಿ ಎಂಬ ಸುಪ್ರೀಂ ಕೋರ್ಟ್‌ ತೀರ್ಪು, ಮಹಾತ್ಮಾ ಗಾಂಧಿ ಅವರು ಹಿಂದು ಧರ್ಮದ ಬಗ್ಗೆ ಆಡಿರುವ ಮಾತುಗಳನ್ನು ಭಾಷಣದಲ್ಲಿ ಉಲ್ಲೇಖಿಸಬೇಕು ಎಂದು ಸೂಚಿಸಲಾಗಿದೆ. ಜತೆಗೆ ಕಾಂಗ್ರೆಸ್‌ ಪಕ್ಷ ನಡೆಸುತ್ತಿರುವ ಹಿಂದು ಅವಹೇಳನ, ಮುಸ್ಲಿಂ ತುಷ್ಟೀಕರಣ, ಸಿದ್ದರಾಮಯ್ಯ, ಡಿಕೆಶಿ ಅವರು ಮಾಡಿರುವ ಹಿಂದೂ ವಿರೋಧಿ ಕ್ರಮಗಳನ್ನು ಉಲ್ಲೇಖಿಸುವಂತೆ ಸೂಚಿಸಲಾಗಿದೆ.

ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್‌ ಕುಮಾರ್‌ ಅವರು ಮಂಗಳವಾರವೇ ನಾನು ಸ್ವಾಭಿಮಾನಿ ಹಿಂದೂ ಎಂಬ ಹೋರಾಟ ಶುರು ಮಾಡಿದ್ದರು. ಬಿಜೆಪಿ ಈಗ ಈ ರೀತಿಯ ಪ್ರತಿಭಟನೆಗೆ ಸೂಚಿಸಿದೆ.

ಇದನ್ನೂ ಓದಿ| Swabhimani hindu | ಕಾಂಗ್ರೆಸ್‌ ಕ್ಷಮೆ ಕೇಳುವವರೆಗೆ ರಾಜ್ಯಾದ್ಯಂತ ನಾನು ಸ್ವಾಭಿಮಾನಿ ಹಿಂದು ಅಭಿಯಾನ ಎಂದ ಸುನಿಲ್ ಕುಮಾರ್‌

Exit mobile version