Site icon Vistara News

T Narasipur Election Results : ಟಿ ನರಸಿಪುರದಲ್ಲಿ ಮಾಜಿ ಸಚಿವ ಎಸ್​ ಸಿ ಮಹದೇವಪ್ಪ ಅವರಿಗೆ ಗೆಲುವು

T Narasipur Election Results HC MAHADEVAPPA Winner

#image_title

ಮೈಸೂರು: ಕಾಂಗ್ರೆಸ್​ನ ಭದ್ರಕೋಟೆಯಾಗಿರುವ ತಿರುಮಲಕೂಡು ನರಸಿಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದ ಡಾ. ಎಚ್.ಸಿ ಮಹದೇವಪ್ಪ (77884) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್​ನ ಅಶ್ವಿನ ಕುಮಾರ್. ಎಂ (59265) ವಿರುದ್ಧ 18619 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. 2018ರಲ್ಲಿ ಈ ಕ್ಷೇತ್ರದಲ್ಲಿ 2018ರಲ್ಲಿ ಮಹದೇವಪ್ಪ ಅವರನ್ನು 29,000 ಮತಗಳ ಅಂತರಿಂದ ಸೋಲಿಸಿದ ಜೆಡಿಎಸ್‌ನ ಅಶ್ವಿನ್‌ ಕುಮಾರ್‌ ಎಂ. ಶಾಸಕರಾಗಿ ಆಯ್ಕೆಯಾಗಿದ್ದರು.

ಟಿ ನರಸೀಪುರ ಕ್ಷೇತ್ರದಲ್ಲಿ ದಲಿತ ಸಮುದಾಯವೇ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಕ್ಷೇತ್ರದಲ್ಲಿ ಸುಮಾರು 1,98,898 ಮತದಾರರಿದ್ದಾರೆ. ಅವರಲ್ಲಿ 82 ಸಾವಿರ ದಲಿತರು, 49 ಸಾವಿರ ಪರಿಶಿಷ್ಟ ಪಂಗಡದವರು, 20 ಸಾವಿರ ಮುಸ್ಲಿಮರು ಮತ್ತು ಇತರ ಜಾತಿಗಳ 25 ಸಾವಿರ ಮಂದಿ ಮತದಾರರಿದ್ದಾರೆ.

ಮೊದಲ ನಾಲ್ಕು ಚುನಾವಣೆಗಳಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದ ತಿ ನರಸೀಪುರ, 1978ರ ಬಳಿಕ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ. ಇದುವರೆಗೂ, ಕಾಂಗ್ರೆಸ್‌ 7 ಬಾರಿ, ಜನತಾ ಪಕ್ಷ ಮತ್ತು ಜೆಡಿಎಸ್‌ತಲಾ 2 ಬಾರಿ, ಎನ್‌ಸಿಒ (ಹಳೇ ಕಾಂಗ್ರೆಸ್‌), ಜನತಾ ದಳ ಹಾಗೂ ಬಿಜೆಪಿ ಅಭ್ಯರ್ಥಿಗಳು ತಲಾ ಒಂದು ಬಾರಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಮತ್ತು ಜನತಾ ಪಕ್ಷ/ದಳಗಳ ಮಧ್ಯೆಯೇ ಈ ಕ್ಷೇತ್ರದಲ್ಲಿನೇರ ಹಣಾಹಣಿ ನಡೆಯುವುದಾದರೂ, ಒಮ್ಮೆ ಮಾತ್ರ ಇಲ್ಲಿಂದ ಬಿಜೆಪಿ ಗೆದ್ದಿದೆ ಕಾಂಗ್ರೆಸ್ಸಿನ ಪ್ರಮುಖ ನಾಯಕ ಹೆಚ್.ಸಿ. ಮಹದೇವಪ್ಪ ಅವರು ಇಲ್ಲಿಂದ ಜನತಾ ಪಕ್ಷ, ಜನತಾ ದಳ, ಜೆಡಿಎಸ್ ಪಕ್ಷದಿಂದತಲಾ ಒಂದೊಂದು ಬಾರಿ ಮತ್ತು ಕಾಂಗ್ರೆಸ್​ನಿಂದ ಎರಡು ಬಾರಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : Heggadadevankote Election Results : ಎಚ್​​ಡಿ ಕೋಟೆಯಲ್ಲಿ ಕಾಂಗ್ರೆಸ್​ನ ಅನಿಲ್​ ಚಿಕ್ಕಮಾದುಗೆ ಗೆಲುವು

2004ರ ವೇಳೆಗೆ ಜನತಾ ದಳದಿಂದ ಬೇರ್ಪಟ್ಟ ಜೆಡಿಎಸ್‌ ಜೊತೆಗಿದ್ದ ಎಚ್‌.ಸಿ ಮಹದೇವಪ್ಪ ಮತ್ತೆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2008ರ ಚುನಾವಣೆಯ ವೇಳೆಗೆ ಕಾಂಗ್ರೆಸ್‌ ಸೇರಿದ ಎಚ್‌.ಸಿ ಮಹದೇವಪ್ಪ ಜೆಡಿಎಸ್‌ ಅಭ್ಯರ್ಥಿ ಎಂ. ಸಿ ಸುಂದರೇಶ್‌ ವಿರುದ್ಧ 14,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2013ರಲ್ಲಿ ಮತ್ತೆ ಗೆದ್ದ ಅವರು ಸುಂದರೇಶ್‌ ವಿರುದ್ಧವೇ ಕೇವಲ 400 ಮತಗಳ ಅಂತರದಿಂದ ಗೆದ್ದು ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

Exit mobile version