ಚಾಮರಾಜನಗರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ನನ್ನ ಸೋಲಿಗೆ ನನ್ನ ಸಮುದಾಯದ ಕೆಲವರೇ ಕಾರಣರಾದರು. ಪಕ್ಷದ್ರೋಹ ಮಾಡಿದವರಿಗೆ ಜೋಡಲ್ಲಿ ಹೊಡೆಯಿರಿ, ಆ ನನ್ನ ಮಕ್ಕಳಿಗೆ ಬುದ್ಧಿ ಕಲಿಸಿ ಎಂದ ಮಾಜಿ ಸಚಿವ ವಿ. ಸೋಮಣ್ಣ (V Somanna) ತೀವ್ರ ವಾಗ್ದಾಳಿ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಆಪ್ತರ ವಿರುದ್ಧ ಹರಿಹಾಯ್ದರು.
ಅವರು ಚಾಮರಾಜನಗರದಲ್ಲಿ ಏರ್ಪಡಿಸಲಾಗಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ವಿ. ಸೋಮಣ್ಣ, ನಾನೇನು ದಡ್ಡ ಅಲ್ಲ, 45 ವರ್ಷ ರಾಜಕೀಯ ಮಾಡಿದ್ದೇನೆ. ಇಲ್ಲಿರುವ ಒಬ್ಬೊಬ್ಬರು 10 ಮತಗಳನ್ನು ಹಾಕಿಸಿದ್ದರೂ ಸಾಕಿತ್ತು. ಆ ಒಬ್ಬ ಲೋಫರ್‌ಗಾಗಿ ನನ್ನ ಸೋಲಿಸಿದಿರಿ ಎಂದು ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ ಆಪ್ತ ರುದ್ರೇಶ್ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: Supreme Court: ಭಯದ ವಾತಾವರಣ ಸೃಷ್ಟಿಸಬೇಡಿ ಎಂದು ಇ.ಡಿ.ಗೆ ತಾಕೀತು ಮಾಡಿದ ಸುಪ್ರೀಂ ಕೋರ್ಟ್
ಆಗಲೇ ಅವರಿಗೆ ಚಪ್ಪಲಿ ತಗೊಂಡ್ ಹೊಡಿಯಬೇಕಿತ್ತು. ಈಗ ಮಾತಾಡಿದರೆ ಏನು ಪ್ರಯೋಜನ? ಈ ಪೌರುಷವನ್ನ್ನು ಆಗಲೇ ತೊರಿಸಬೇಕಿತ್ತು ನೀವು. ಸುರಿಯುವ ಮಳೆಯಲ್ಲಿ ಪ್ರಚಾರ ಮಾಡಿದ್ದೆ. ಆಗ ನಮಗೋಸ್ಕರ ಹೊಡೆದಾಡಿದವರ ಗತಿ ಏನೀಗ? ಎಂದು ವಿ. ಸೋಮಣ್ಣ ಪ್ರಶ್ನೆ ಮಾಡಿದರು.
ಬುಕ್ ಬರೆಯೋವಷ್ಟು ಮಾಹಿತಿ ಇದೆ
ನನ್ನ ಸೋಲಿಗೆ ಯಾರು ಕಾರಣ ಅಂತ ಗೊತ್ತಿದೆ. ಯಾರು ಈ ಕೆಲಸ ಮಾಡಿದ್ದು ಅಂತಾ ಗೊತ್ತು. ಒಂದು ಬುಕ್ ಬರೆಯೋವಷ್ಟು ಮಾಹಿತಿ ನನ್ನ ಬಳಿ ಇದೆ. ನಾನು ಏನೂ ತಿಳಿಯದೆ ಇರುವ ಮುಗ್ದ ಅಲ್ಲ. ಎಂಟು, ಹತ್ತು ಜನರ ಪಾಪದ ಕೆಲಸದಿಂದ ಮನೆ ಹಾಳಾಗಿದೆ. ಮನೆ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಜತೆಯಲ್ಲೇ ಇದ್ದುಕೊಂಡೇ ಕತ್ತು ಕೊಯ್ದಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಆಪ್ತ ರುದ್ರೇಶ್ ವಿರುದ್ಧ ಸೋಮಣ್ಣ ಪರೋಕ್ಷ ವಾಗ್ದಾಳಿ ನಡೆಸಿದರು.
ಒಬ್ಬನಿಗೋಸ್ಕರ ಇಡೀ ಜಿಲ್ಲೆಯನ್ನು ಹಾಳು ಮಾಡಿದರು
12 ಚುನಾವಣೆ ಎದುರಿಸಿರುವ ನನಗೆ ಯಾವತ್ತೂ ಇಂತಹ ಮಾನಸಿಕ ಯಾತನೆ ಆಗಿರಲಿಲ್ಲ. ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ ಇಲ್ಲಿಗೆ ನಾನಾಗಿಯೇ ಬರಲ್ಲಿಲ್ಲ. ಪಕ್ಷದ ಆದೇಶದ ಮೇರೆಗೆ ಬಂದೆ. ಜಿಲ್ಲೆಯನ್ಮು ಅಭಿವೃದ್ಧಿ ಮಾಡುವ ಕನಸು ಹೊಂದಿದ್ದೆ. ಆದರೆ ಒಬ್ಬನಿಗೋಸ್ಕರ ಇಡೀ ಜಿಲ್ಲೆಯನ್ನು ಹಾಳು ಮಾಡಿದರು. ನನ್ನನ್ನು ಸೋಲಿಸಲು ಅಲ್ಲಿಂದಲೇ ಡೈರಕ್ಷನ್ ಬಂದಿತ್ತು. ಮುಂಚೂಣಿ ನಾಯಕರೇ ಇದಕ್ಕೆ ಕಾರಣ. ಯಥಾ ರಾಜ, ತಥಾ ಪ್ರಜಾ ಎಂದು ಸೋಮಣ್ಣ ಗುಡುಗಿದರು.
ಇದನ್ನೂ ಓದಿ: Weather Report: ಈ ಬಾರಿ ಆಗಲಿದೆಯಾ ವಾಡಿಕೆ ಮಳೆ?; ಈ ತಿಂಗಳು ರಾಜ್ಯದ ಅಲ್ಲಲ್ಲಿ ಬಿಸಿಲೂ ಹೆಚ್ಚು!
ಸೋಮಣ್ಣ ಪವರ್ ಅಂದರೆ ಅದು
ವರುಣಾದಲ್ಲಿ ಸಿದ್ದರಾಮಯ್ಯ ಪ್ರಚಾರಕ್ಕೆ ಬರಲ್ಲ ಎಂದು ಹೇಳಿದವರು ಏನು ಮಾಡಿದರು? ನಟರನ್ನು ಕರ್ಕೊಂಡು ಪ್ರಚಾರ ಮಾಡಿದರು. ಸೋಮಣ್ಣ ಪವರ್ ಅಂದರೆ ಅದು. ನಿಮಗೆ ಸ್ವಾಭಿಮಾನ, ಗೌರವ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ನನಗೆ ಎಂತಹ ಬಳುವಳಿ ಕೊಟ್ಟಿರಿ ನೀವು? ಈ ಕೃಪಾಪೋಷಿತ ನಾಟಕದಲ್ಲಿ ಮೋಸ ಮಾಡಿದವರು ನನ್ನ ಸಮುದಾಯದವರು ಎಂದು ಲಿಂಗಾಯತ ಸಮುದಾಯ ವಿರುದ್ಧ ಸೋಮಣ್ಣ ಆಕ್ರೋಶವನ್ನು ಹೊರಹಾಕಿದರು.