ವಿಜಯಪುರ: ಮಳೆ, ಗಾಳಿಯನ್ನು ಲೆಕ್ಕಿಸದೆ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿಯು (Talikot Protest) ತಲೆ ಮೇಲೆ ಕಲ್ಲು ಹೊತ್ತು ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಿದೆ.
ಕಡಗಿನಾಳ, ಮೂಕಿಹಾಳ, ನಾಗೂರ, ಕಲ್ಲದೇವನಹಳ್ಳಿ, ಹರನಾಳ ಗ್ರಾಮಗಳಿಗೆ ಸಂಪರ್ಕಿಸುವ ಡೋಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯನ್ನು ನೇರವಾಗಿ ತಾಳಿಕೋಟೆ ಪಟ್ಟಣದ ಬಸ್ ನಿಲ್ದಾಣವರೆಗೆ ಕೂಡಿಸುವಂತೆ ಒತ್ತಾಯಿಸಿದ್ದಾರೆ.
ಜತೆಗೆ ತಾಳಿಕೋಟೆ ಪುರಸಭೆಯಲ್ಲಿನ ಭ್ರಷ್ಟಾಚಾರ ತನಿಖೆ, ಜಿ ಪ್ಲಸ್ ಒನ್ ಮಾದರಿ ಆಶ್ರಯ ಮನೆ ವಿತರಣೆಗೆ ಆಗ್ರಹಿಸಿ ತಲೆ ಮೇಲೆ ಕಲ್ಲು ಹೊತ್ತು ವಿಜಯಪುರದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನ್ನವರ ಆಗಸ್ಟ್ 23ಕ್ಕೆ ತಾಳಿಕೋಟೆಗೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆಗೆ ಮಾಜಿ ಸಚಿವ ಸಿ.ಎಸ್.ನಾಡಗೌಡ, ತಾಳಿಕೋಟೆಯ ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮುಖಂಡ ನದೀಮ್ ಕಡೂರ್ ಭಾಗಿಯಾಗಿದರು.
ಇದನ್ನೂ ಓದಿ | 16ರ ಬಾಲಕನನ್ನು 2 ದಿನ ಠಾಣೆಯಲ್ಲಿಟ್ಟು ವಿಚಾರಣೆ: ಮನೆಗೆ ಬಂದ ಹುಡುಗ ಆತ್ಮಹತ್ಯೆ, ಶವವಿಟ್ಟು ಪ್ರತಿಭಟನೆ