Site icon Vistara News

ತಮಿಳುನಾಡಿನಲ್ಲಿ ರೈಲು ಹರಿದು ಕರ್ನಾಟಕದ ಮೂವರು ಮಕ್ಕಳ ಸಾವು; ಶ್ರವಣ ದೋಷ ಕಾರಣ

Train

Tamil Nadu: 3 children hit by train while crossing track, killed

ಚೆನ್ನೈ: ತಮಿಳುನಾಡಿನ ಚೆಂಗಲ್‌ಪಟ್ಟು ಜಿಲ್ಲೆಯಲ್ಲಿ (Chengalpattu District) ರೈಲು ಹರಿದು ಕರ್ನಾಟಕದ (Karnataka) ಮೂವರು ಬಾಲಕರು ಮೃತಪಟ್ಟಿದ್ದಾರೆ. ಜಿಲ್ಲೆಯ ಹೊರವಲಯದ ಊರಪಕ್ಕಂ ಬಳಿ ಮೂವರು ಬಾಲಕರು ರೈಲು ಹಳಿ ದಾಟುವಾಗ ವೇಗವಾಗಿ ಬಂದ ರೈಲು (Train) ಅವರ ಮೇಲೆ ಹರಿದಿದೆ. ಮೂವರು ಬಾಲಕರು ಕೂಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೂವರು ಬಾಲಕರು ಕೂಡ ವಿಶೇಷ ಚೇತನರಾಗಿದ್ದಾರೆ. ಸುರೇಶ್‌ಗೆ (15) ಕಿವಿ ಕೇಳಿಸುತ್ತಿರಲಿಲ್ಲ. ರವಿಗೆ (10) ಮಾತು ಬರುತ್ತಿರಲಿಲ್ಲ. ಹಾಗೆಯೇ, 10 ವರ್ಷದ ಮಂಜುನಾಥ್‌ಗೂ ಕಿವಿ ಕೇಳಿಸುತ್ತಿರಲಿಲ್ಲ. ಇವರಿಗೆ ಕಿವಿ ಕೇಳಿಸದಿರುವುದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಮೂವರು ಬಾಲಕರು ರೈಲು ಬರುತ್ತಿದೆ ಎಂಬುದನ್ನೂ ಗಮನಿಸಿದೆ, ರೈಲಿನ ಶಬ್ದ ಕೇಳಿಸದೆ ಹಾಗೆಯೇ ಹಳಿ ದಾಟಲು ಮುಂದಾಗಿದ್ದಾರೆ. ಆಗ ರೈಲು ಸಂಚರಿಸಿದೆ ಎಂದು ಮೂಲಗಳು ತಿಳಿಸಿವೆ.

ಹೊಟ್ಟೆಪಾಡಿಗಾಗಿ ವಲಸೆ

ಮೂವರು ಬಾಲಕರಲ್ಲಿ ಇಬ್ಬರು ಬಾಲಕರು ಸಹೋದರರಾಗಿದ್ದಾರೆ. ಬಾಲಕರ ಪೋಷಕರು ಹೊಟ್ಟೆಪಾಡಿಗಾಗಿ ಚೆನ್ನೈಗೆ ವಲಸೆ ಹೋಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಹಬ್ಬದ ರಜೆಯ ಹಿನ್ನೆಲೆಯಲ್ಲಿ ಪೋಷಕರು ಬಾಲಕರನ್ನು ಸುತ್ತಾಡಲು ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಆಟವಾಡುತ್ತ, ಸುತ್ತಾಡುತ್ತಿದ್ದ ಬಾಲಕರು ಹಳಿ ದಾಟಲು ಮುಂದಾದಾಗ ದುರಂತ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: Courageous woman : ಹಳಿ ದಾಟುತ್ತಿದ್ದಾಗಲೇ ಹೊರಟೇಬಿಟ್ಟಿತು ರೈಲು; ಅಡಿಯಲ್ಲಿ ಸಿಕ್ಕಿಬಿದ್ದ ಮಹಿಳೆ ಮಾಡಿದ್ದೇನು?

ತುಂಬ ಹೊತ್ತಿನಿಂದ ಮೂವರು ಬಾಲಕರು ಕೂಡ ರೈಲು ಹಳಿಯ ಪಕ್ಕದಲ್ಲೇ ಆಟವಾಡುತ್ತಿದ್ದರು. ರೈಲು ಬರುತ್ತಿರುವುದನ್ನು ಗಮನಿಸದೆ ಅವರು ಹಳಿ ದಾಟಲು ಹೋದಾಗ ರೈಲು ಅವರ ಮೇಲೆ ಹರಿದಿದೆ. ಬೀಚ್‌ ಸ್ಟೇಷನ್‌ ಹಾಗೂ ಚೆಂಗಲ್‌ಪಟ್ಟು ಉಪ ನಗರ ರೈಲು ಅವರ ಮೇಲೆ ಹರಿದಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂವರ ಶವಗಳನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version