Site icon Vistara News

Karnataka Election 2023: ಶಿವಮೊಗ್ಗ ಬಿಜೆಪಿ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆ! ಅರ್ಧಕ್ಕೆ ನಿಲ್ಲಿಸಿದ ಈಶ್ವರಪ್ಪ

Tamil Nadu Anthem played at bjp program in shimoga

ಶಿವಮೊಗ್ಗ, ಕರ್ನಾಟಕ: ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಪರವಾಗಿ ಆಯೋಜಿಸಲಾಗಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಕನ್ನಡ ನಾಡಗೀತೆ ಕುರಿತು ಅಚಾತುರ್ಯ ನಡೆದಿದೆ. ಕನ್ನಡ ನಾಡ ಗೀತಿಗೆ ಅವಮಾನ ಮಾಡಲಾಗಿದೆ. ಈ ವೇಳೆ, ರಾಜ್ಯ ಸಹ ಉಸ್ತುವಾರಿಯಾಗಿರುವ ಅಣ್ಣಾಮಲೈ (K annamalai) ಹಾಗೂ ಬಿಜೆಪಿಯ ನಾಯಕ ಕೆ ಎಸ್ ಈಶ್ವರಪ್ಪ (K S Eshwarappa) ಅವರು ಹಾಜರಿದ್ದರು. ಅಲ್ಲದೇ, ಈಶ್ವಪ್ಪ ಅವರ ಮಧ್ಯ ಪ್ರವೇಶಿಸಿ ಹೆಚ್ಚಿನ ಮುಜುಗರವನ್ನು ತಪ್ಪಿಸಿದರು(Karnataka Election 2023).

ಶಿವಮೊಗ್ಗ ನಗರದ ಎನ್‌ಇಎಸ್ ಕ್ರೀಡಾಗಂಣ ಆವರಣದಲ್ಲಿ ಬಿಜೆಪಿ ಪ್ರಚಾರ ಸಭೆಯನ್ನು ಆಯೋಜಿಸಲಾಗಿದೆ. ವಿಶೇಷವಾಗಿ ತಮಿಳು ಮತದಾರರನ್ನು ತಮಿಳು ಬಾಂಧವರ ಸಮಾವೇಶವನ್ನು ನಡೆಸಲಾಗುತ್ತಿತ್ತು. ಈ ವೇಳೆ, ಕನ್ನಡ ನಾಡಗೀತೆ ಪ್ಲೇ ಮಾಡಿ ಎಂದಾಗ, ಆಯೋಜಕರು ಕನ್ನಡ ನಾಡಗೀತೆ ಬದಲಿಗೆ ತಮಿಳು ನಾಡಗೀತೆಯನ್ನು ಪ್ಲೇ ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಈಶ್ವರಪ್ಪ ಅವರಿಗೆ ಗೊತ್ತಾಗಿದೆ, ಬೇರೆ ನಾಡಗೀತೆ ಪ್ಲೇ ಮಾಡುತ್ತಿರುವುದು. ಕೂಡಲೇ ಅವರು ಮಧ್ಯ ಪ್ರವೇಶಿಸಿ, ತಮಿಳು ನಾಡಗೀತೆ ಪ್ಲೇ ಮಾಡುವುದನ್ನು ನಿಲ್ಲಿಸಿದ್ದಾರೆ. ಅಲ್ಲದೇ, ನಾಡಗೀತೆ ಹಾಡುವುದಕ್ಕೆ ಬರುವುದಿಲ್ವವೇ ಎಂದು ಪ್ರಶ್ನಿಸಿದ್ದಾರೆ. ನಾಡಗೀತೆ ಹಾಕುವುದಕ್ಕೆ ಬರುತ್ತೇನಪ್ಪ ಕೇಳಿದ್ದಾರೆ. ಆಗ ಆಯೋಜಕರು ಮತ್ತೆ ಕನ್ನಡ ನಾಡಗೀತೆಯನ್ನು ಹಾಕಿದ್ದಾರೆ. ಒಂದು ವೇಳೆ ಈಶ್ವರಪ್ಪ ಮಧ್ಯ ಪ್ರವೇಶಿಸದೇ ಹೋಗಿದ್ದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆ ಪ್ಲೇ ಆಗುತ್ತಿತ್ತು!

ಬಿಜೆಪಿ ಬೆಳವಣಿಗೆಗೆ ಈಶ್ವರಪ್ಪ 50 ವರ್ಷ ದುಡಿಮೆ ಎಂದ ಅಣ್ಣಾಮಲೈ

ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಈಶ್ವರಪ್ಪ 50 ವರ್ಷ ಕೆಲಸ ಮಾಡಿದ್ದಾರೆ. ನನಗೆ ಅಂತಹ ಜವಾಬ್ದಾರಿ ನನಗೆ ತಮಿಳುನಾಡಿನಲ್ಲಿ ಸಿಕ್ಕಿದೆ. ಹೀಗಾಗಿ ಅವರ ಮೇಲೆ ನನಗೆ ಪ್ರೀತಿ. ಅವರೊಬ್ಬ ಎಲ್ಲರಿಗೂ ಮಾದರಿಯಾಗಿ ಪಕ್ಷದ ಭೀಷ್ಮ ಪಿತಾಮಹ ಆಗಿದ್ದಾರೆ ಎಂದು ಅಣ್ಣಾಮಲೈ ಅವರು ಹೇಳಿದರು.

ಈಶ್ವರಪ್ಪ ಸದಾ ಮಧುರೈ ದೇಗುಲಕ್ಕೆ ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಓಂಶಕ್ತಿ ದೇಗುಲಕ್ಕೆ ಭಕ್ತರನ್ನು ಕಳಿಸುವ ಕೆಲಸ ಮಾಡ್ತಿದ್ದಾರೆ. ನಿವೃತ್ತಿ ಪತ್ರ ಬರೆಯುವ ಮೂಲಕ ಈಶ್ವರಪ್ಪ ಮಾದರಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಕೊಡುವ ಮತ ಈಶ್ವರಪ್ಪ ಅವರಿಗೆ ಕೊಟ್ಟಂತೆ, ಈಶ್ವರಪ್ಪ ಅವರಿಗೆ ಗೌರವ ಕೊಟ್ಟಂತೆ ಎಂದು ಅಣ್ಣಾಮಲೈ ಅವರು ಹೇಳಿದರು.

ಇದನ್ನೂ ಓದಿ: Karnataka Election 2023: ಸವದಿಗೆ ಜಾರಕಿಹೊಳಿ ಖೆಡ್ಡಾ; ಕೈ ನಾಯಕರನ್ನು ಬಿಜೆಪಿಗೆ ಸೆಳೆಯುತ್ತಿರುವ ರಮೇಶ್

ಈಶ್ವರಪ್ಪ ಯಡಿಯೂರಪ್ಪ ಜೋಡೆತ್ತು ಇದ್ದಂತೆ. ಇದೇ ಮೊದಲ ಬಾರಿಗೆ ಅವರಿಬ್ಬರೂ ಸ್ಪರ್ಧಿಸುತ್ತಿಲ್ಲ. ಬಿಜೆಪಿಗೆ ಪೂರ್ಣ ಬಹುಮತ ತರಲು ಅವರಿಬ್ಬರೂ ಹೋರಾಡುತ್ತಿದ್ದಾರೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರವಾದ್ರೆ, ಕಾಂಗ್ರೆದ್ ರಿವರ್ಸ್ ಇಂಜಿನ್ ಸರ್ಕಾರವಾಗಿದೆ ಎಂದು ಅವರು ಆರೋಪಿಸಿದರು.

Exit mobile version