Site icon Vistara News

Karnataka Cabinet: ರಾಜ್ಯ ಕಾಂಗ್ರೆಸ್‌ ನಾಯಕರ ಜತೆಗೆ ಮಾತುಕತೆ ಕಟ್‌: ಸದನದಲ್ಲಿ ನೋಡ್ಕೊತೀನಿ ಎಂದ ಜಯಚಂದ್ರ

TB Jayachandra speaking with media

#image_title

ಬೆಂಗಳೂರು: ಇನ್ನುಮುಂದೆ ತಮಗೂ ರಾಜ್ಯ ಕಾಂಗ್ರೆಸ್‌ ನಾಯಕರೊಂದಿಗೆ ಮಾತನಾಡುವುದಿಲ್ಲ ಎಂದಿರುವ ಹಿರಿಯ ಕಾಂಗ್ರೆಸಿಗ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಸದನ ಕರೆಯಲ್ಲಿ ಅಲ್ಲಿ ಮಾತಾಡುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಅನೇಕ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದ ಪ್ರಭಾವಿ ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಅವರು ಈ ಬಾರಿಯೂ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಸಚಿವರ ಪಟ್ಟಿಯಲ್ಲಿ ಕೊನೆಯವರೆಗೂ ಹೋಗಿ ತಮ್ಮ ಹೆಸರು ಕೈಬಿಡಲಾಗಿದೆ ಎಂದು ಅಸಮಾಧಾನಗೊಂಡಿರುವ ಟಿ.ಬಿ. ಜಯಚಂದ್ರ, ಮಾಧ್ಯಮಗಳ ಎದುರು ಕೋಪ ಹೊರಹಾಕಿದ್ದಾರೆ.

ನನಗೆ ಮಂತ್ರಿ ಪದವಿ ಸಿಗಬೇಕಿತ್ತು. ಕೊನೆಯ ಕ್ಷಣದವರೆಗೂ ನನ್ನ ಹೆಸರು ಪಟ್ಟಿಯಲ್ಲಿತ್ತು. ನನಗೆ ಸಚಿವ ಸ್ಥಾನ ತಪ್ಪಲು ನಮ್ಮ ಜಿಲ್ಲೆಯ ನಾಯಕರು ಕಾರಣರಲ್ಲ. ಪರಮೇಶ್ವರ್ ಕೋಟಾ ಬೇರೆ, ರಾಜಣ್ಣ ಖೋಟಾ ಬೇರೆ. ನನ್ನದು ನನ್ನ ಸಮುದಾಯದ ಕೋಟ. ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಮ್ಮ ಕಾರ್ಯಕರ್ತರು ಹೋರಾಟಕ್ಕೆ ಮುಂದಾದರು. ಆದರೆ ನಾನು ಪಕ್ಷದ ಶಿಸ್ತಿನ ಸಿಪಾಯಿ. ನಾನು ಶಾಸಕನಾದಾಗ ಈಗ ವಿಧಾನ ಸಭೆಯಲ್ಲಿ ಇರೋರು ಯಾರೂ ಶಾಸಕರಾಗಿರಲಿಲ್ಲ. ನನ್ನ ಸಚಿವ ಸ್ಥಾನ ತಪ್ಪಲು ಕೆಲ ರಿಯಲ್ ಎಸ್ಟೇಟ್ ಹಾಗೂ ಎಜುಕೇಷನ್ ಮಾಫಿಯಾ ಕೆಲಸ ಮಾಡಿದೆ. ನಾನು ನೀರು ಬೇಕು ಜನರಿಗೆ ಅಂತ ಲಾಭಿ ಮಾಡಿದೆ, ಅವರು ಎಜುಕೇಷನ್ ಸಂಸ್ಥೆಗಳು ಬೇಕು ಅಂತ ಲಾಭಿ ಮಾಡಿದರು. ಇವರೇ ನನಗೆ ಸಚಿವ ಸ್ಥಾನ ತಪ್ಪಿಸುವಲ್ಲಿ ಕಾರಣರಾಗಿದ್ದಾರೆ.

ನಾನು ಮಿನಿಸ್ಟರ್ ಆಗದಿದ್ದರೂ ಶಾಸಕ ಸ್ಥಾನದಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಬಳಿ ದಾಖಲೆ ಇದೆ, ಮಾತನಾಡುವ ಶಕ್ತಿ ಇದೆ. ಸದನದಲ್ಲಿ ಎಲ್ಲವನ್ನೂ ಮಾತನಾಡ್ತೀನಿ. ನಾನು ಯಾವನಿಗೂ ಹೆದರಲ್ಲ. ಮುಂದೆ ಸದನ ಕರೆಯಲಿ ಎಲ್ಲವನ್ನೂ ಮಾತನಾಡ್ತೀನಿ. ಇನ್ನು ಏನಿದ್ದರೂ ಹೈಕಮಾಂಡ್ ಜತೆ ಮಾತ್ರ ನನ್ನ ಮಾತುಕತೆ. ರಾಜ್ಯದ ನಾಯಕರ ಜತೆ ಮಾತುಕತೆ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: ‌Electricity Bill: ಇವತ್ತಿಂದ ಕರೆಂಟ್‌ ಬಿಲ್‌ ಕಟ್ಟಂಗಿಲ್ಲ; ಇದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಆರ್ಡರ್!

Exit mobile version