Site icon Vistara News

Suicide Case: ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ; ಹೆಡ್‌ ಮಾಸ್ಟರ್‌ ಕಿರುಕುಳ ಕಾರಣವೇ?

Teacher commits suicide by hanging herself from train Harassment by the Head Master Suicide Case updates

ಚಿಕ್ಕೋಡಿ: ರಾಯಬಾಗ ರೈಲು ನಿಲ್ದಾಣ ಸಮೀಪ ರೈಲ್ವೆ ಹಳಿಯಲ್ಲಿ ಶಿಕ್ಷಕಿಯೊಬ್ಬರು ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನ್ನಪೂರ್ಣ ರಾಜು ಬಸಾಪೂರೆ (55) ಆತ್ಮಹತ್ಯೆ (Suicide Case) ಮಾಡಿಕೊಂಡ ದುರ್ದೈವಿ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ನಿವಾಸಿಯಾಗಿರುವ ಇವರು, ಖಾಸಗಿ ಅನುದಾನಿತ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಖಾಸಗಿ ಶಿಕ್ಷಣ ಸಂಸ್ಥೆಯ ಹೆಡ್ ಮಾಸ್ಟರ್ ಕಿರುಕುಳದ ಆರೋಪ ಈಗ ಕೇಳಿಬಂದಿದೆ.

ಇದನ್ನೂ ಓದಿ: Sumalatha Ambareesh: ಬಿಜೆಪಿ ಸೇರಲು ಸುಮಲತಾ ಮೂರು ಕಂಡೀಷನ್;‌ ಪಕ್ಷ ಸೇರ್ಪಡೆ ಬಹುತೇಕ ಪಕ್ಕಾ?

ಈ ಬಗ್ಗೆ ಡೆತ್‌ ನೋಟ್‌ ಬರೆದಿರುವ ಅನ್ನಪೂರ್ಣ, ನನ್ನ ಸಾವಿಗೆ ಶಾಲೆ ಮುಖ್ಯ ಶಿಕ್ಷಕರೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಅವರ ಕಿರುಕುಳದಿಂದಲೇ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Exit mobile version