ಬೆಂಗಳೂರು: ರಾಜಧಾನಿಯಲ್ಲಿ ಟೆಕ್ಕಿಯೊಬ್ಬರ ಮೇಲೆ ಉದ್ಯಮಿಯೊಬ್ಬ ಅತ್ಯಾಚಾರ ನಡೆಸಿದ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಮೊದಲು ಕಬ್ಬನ್ ಪಾರ್ಕ್‌ಗೆ ಕರೆಸಿಕೊಂಡು ಬಳಿಕ ಹೋಟೆಲ್‌ಗೆ ಕರೆದೊಯ್ದು ದುಷ್ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಮಿಳುನಾಡು ಮೂಲದ ಉದ್ಯಮಿಯೊಬ್ಬ ತನಗೆ ಪರಿಚಿತಳೂ ಮತ್ತು ದೂರ ಸಂಬಂಧಿಯೂ ಆಗಿರುವ ಟೆಕ್ಕಿ ಮೇಲೆಯೇ ಅತ್ಯಾಚಾರ ಮಾಡಿದ್ದಾಗಿ ಹೇಳಲಾಗಿದೆ. ರಮೇಶ್ ಎಂಬಾತನೇ ಆರೋಪಿ.
ತಮಿಳುನಾಡಿನಲ್ಲಿ ಉದ್ಯಮ ನಡೆಸುತ್ತಿದ್ದಾನೆ ಎಂದು ಹೇಳಲಾದ ರಮೇಶ್ ತನ್ನ ಸಂಬಂಧಿಕಳೂ ಆಗಿರುವ ಈ ಟೆಕ್ಕಿಯನ್ನು ಬಿಸಿನೆಸ್ ವಿಚಾರದಲ್ಲಿ ಮಾತುಕತೆ ನಡೆಸಲೆಂದು ಮೀಟ್ ಮಾಡೋಣ ಎಂದು ಕರೆಸಿಕೊಂಡಿದ್ದ. ದೂರದ ಸಂಬಂಧಿಯೂ ಆಗಿರುವುದರಿಂದ ಯುವತಿಯೂ ಕಬ್ಬನ್ ಪಾರ್ಕ್‌ಗೆ ಬಂದಿದ್ದಳು ಎನ್ನಲಾಗಿದೆ.
ಈ ನಡುವೆ, ಕಬ್ಬನ್ ಪಾರ್ಕ್‌ನಲ್ಲಿ ಸ್ವಲ್ಪ ಹೊತ್ತು ಮಾತನಾಡಿದ ಅವರಿಬ್ಬರೂ ಹೋಟೆಲ್ ಒಂದರಲ್ಲಿ ಊಟ ಮಾಡಿದ್ದಾರೆ. ಬಳಿಕ ರಮೇಶ್ ಇನ್ನೊಂದು ಸುತ್ತಿನ ಮಾತುಕತೆಗಾಗಿ ತಾನು ಉಳಿದುಕೊಂಡಿರುವ ಹೋಟೆಲ್‌ಗೆ ಹೋಗೋಣ ಎಂದು ಹೇಳಿದ್ದಾನೆ. ಇದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಿಷ್ಠಿತ ಹೋಟೆಲ್ ಆಗಿದ್ದು, ಯುವತಿ ಆತನನ್ನು ನಂಬಿ ಅಲ್ಲಿಗೆ ಹೋಗಿದ್ದಾಳೆ. ಅಲ್ಲಿ ಆತ ಆಕೆಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ದೂರಲಾಗಿದೆ.
ಆಗಸ್ಟ್ ಆರನೇ ತಾರೀಖಿನಂದೇ ಈ ಘಟನೆ ನಡೆದಿದೆ. ಆದರೆ, ಅತ್ಯಾಚಾರದಿಂದ, ತನಗಾದ ಮೋಸದಿಂದ ಘಾಸಿಗೊಳಗಾಗಿದ್ದ ಯುವತಿ ಮೂರು ದಿನಗಳ ಬಳಿಕ ಅಂದರೆ ಆಗಸ್ಟ್ ೯ರಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಅತ್ಯಾಚಾರದ ದೂರನ್ನು ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ತಮಿಳುನಾಡಿಗೆ ಪರಾರಿಯಾಗಿರುವ ಆರೋಪಿ ರಮೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ| ಪರಸ್ಪರ ಒಪ್ಪಿಗೆಯಿಂದ ಜತೆಗಿದ್ದು ಕೊನೆಗೆ ಅತ್ಯಾಚಾರ ಆಯ್ತು ಅಂತ ಆರೋಪ ಮಾಡುವಂತಿಲ್ಲ ಎಂದ ಸುಪ್ರೀಂ