Site icon Vistara News

PM Narendra Modi: ರೋಜ್‌ಗಾರ್‌ ಮೇಳದಲ್ಲಿ ಮೋದಿ ಭಾಷಣ; ನಿದ್ದೆಗೆ ಜಾರಿದ ತೇಜಸ್ವಿ ಸೂರ್ಯ!

Tejasvi Surya sleeps during PM Narendra Modi address at Rozgar Mela

ಬೆಂಗಳೂರು: ಕೇಂದ್ರ ಸರ್ಕಾರದಿಂದ ಆಯೋಜನೆ ಮಾಡಲಾಗಿರುವ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಅತ್ತ ಪ್ರಧಾನಿ ನರೇಂದ್ರ ಮೋದಿ (PM Narendra Mod) ಅವರು ಭಾಷಣ ಮಾಡುತ್ತಿದ್ದರೆ, ಇತ್ತ ಸಂಸದ ತೇಜಸ್ವಿ ಸೂರ್ಯ (Tejasvi Surya) ನಿದ್ದೆಗೆ ಜಾರಿರುವ ಪ್ರಸಂಗ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಮೂಲಕ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದರು. ಇದರ ಅಂಗವಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ರೋಜ್‌ಗಾರ್‌ (ಉದ್ಯೋಗ) ಮೇಳ ನಡೆಯುತ್ತಲಿತ್ತು. ಇಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೇಳದ ಅಧ್ಯಕ್ಷತೆಯನ್ನು ವಹಿಸಿದ್ದರು.

ಇದನ್ನೂ ಓದಿ: ನನ್ನ ಕುಟುಂಬದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದರೆ ನಿಮ್ಮ ಮನೆಗೇ ಬರುತ್ತೇನೆ ಎಚ್ಚರ: ಬಾಲಚಂದ್ರ ಜಾರಕಿಹೊಳಿ

ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ನಿದ್ದೆಗೆ ಜಾರಿದ ಸಂಸದ ತೇಜಸ್ವಿ ಸೂರ್ಯ

ರಾಜ್ಯದಲ್ಲಿ ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಈ ಮೇಳದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. 71 ಸಾವಿರ ನೇಮಕಾತಿ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಿದ್ದಾರೆ. ವರ್ಚುವಲ್ ಮೂಲಕ ಮೋದಿ ಅವರು ಪತ್ರ ವಿತರಿಸಿದ್ದು, ದೇಶದ 45 ಸ್ಥಳಗಳಲ್ಲಿ ರೋಜ್‌ಗಾರ್ ಮೇಳವನ್ನು ಆಯೋಜನೆ ಮಾಡಲಾಗಿತ್ತು.

ಯಾವ ಯಾವ ಹುದ್ದೆಗಳ ನೇಮಕಾತಿ ಪತ್ರ ವಿತರಣೆ

ಅಂಚೆ ಇಲಾಖೆ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪತ್ರವು ಈ ವೇಳೆ ವಿತರಣೆಗೊಳ್ಳಲಿದೆ. ಗ್ರಾಮೀಣ ಡಾಕ್ ಸೇವಕ್, ಅಂಚೆ ನೀರಿಕ್ಷಕರು, ತೆರಿಗೆ ಸಹಾಯಕರು, ಇನ್‌ಸ್ಪೆಕ್ಟರ್‌ಗಳು, ನರ್ಸಿಂಗ್, ಸಹಾಯಕ ಲೆಕ್ಕಪರಿಶೋಧಕ, ಜೂನಿಯರ್ ಅಕೌಂಟ್ ಕ್ಲರ್ಕ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪ್ರಾಂಶುಪಾಲರು ಸೇರಿದಂತೆ ಹಲವು ಹುದ್ದೆಗಳ ನೇಮಕಾತಿ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿತರಣೆ ಮಾಡಿದ್ದಾರೆ.

ಎಲ್ಲ ಪ್ರಕ್ರಿಯೆಗಳು ಆನ್‌ಲೈನ್‌: ನರೇಂದ್ರ ಮೋದಿ

ಉದ್ಯೋಗ ಮೇಳದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು 71 ಸಾವಿರ ಯುವಜನರಿಗೆ ನೇಮಕಾತಿ ಪತ್ರವನ್ನು ನೀಡಲಾಗುತ್ತಿದೆ. ಸ್ವಲ್ಪ ದಿನಗಳ ಹಿಂದೆ ಗುಜರಾತ್‌ನಲ್ಲಿ ರೋಜ್‌ಗಾರ್ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಬಿಜೆಪಿ ನೇತೃತ್ವದ ಭಾರತ ಸರ್ಕಾರ ಈ ರೀತಿಯ ಮೇಳಗಳನ್ನು ಮಾಡುತ್ತಿದೆ. ಎಲ್ಲ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡಿದೆ. ಯುವಜನರಿಗೆ ಆಗುತ್ತಿದ್ದ ಎಲ್ಲ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಗ್ರಾಮೀಣ ಅಭಿವೃದ್ಧಿ, ಜೀವನದ ವಿಸ್ತಾರಕ್ಕೆ ಭಾರತ ಸರ್ಕಾರವು ಯೋಜನೆಗಳನ್ನು ಮಾಡಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದ ಮೂಲಕ ಭಾರತ ಸರ್ಕಾರ ಮುನ್ನಡೆಯುತ್ತಿದೆ ಎಂದು ಬಣ್ಣಿಸಿದರು.

ಇದನ್ನೂ ಓದಿ: Weather Report : ರಾಮನಗರ, ಮೈಸೂರು ಸೇರಿ ಹಲವೆಡೆ ಗುಡುಗು ಮಳೆ; ಯಾವ ಜಿಲ್ಲೆಗಳಲ್ಲಿ ಉರಿ ಬಿಸಿಲು?

ನಿದ್ದೆಗೆ ಜಾರಿದ ತೇಜಸ್ವಿ ಸೂರ್ಯ; ಇಲ್ಲಿದೆ ನೋಡಿ ವಿಡಿಯೊ

ಈ ವೇಳೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಭಾಗಿಯಾಗಿದ್ದ ಸಂಸದ ತೇಜಸ್ವಿ ಸೂರ್ಯ ಅವರು ನಿದ್ದೆಗೆ ಜಾರಿದ್ದರು. ಸಂಸದ ಪಿ.ಸಿ. ಮೋಹನ್‌ ಮೋಹನ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Exit mobile version