Site icon Vistara News

Temple desecration | ಮಾಲೂರು ಬಳಿ ಮುನೇಶ್ವರ ದೇವಾಲಯದ ವಿಗ್ರಹ ಭಗ್ನ, ಶಿಲುಬೆ ಆಕಾರ ನಿರ್ಮಾಣ

temple desecration

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕು ದ್ಯಾಪಸಂದ್ರ ಗ್ರಾಮದಲ್ಲಿರುವ ಮುನೇಶ್ವರ ಸ್ವಾಮಿ ದೇವಾಲಯವನ್ನು ಅಪವಿತ್ರಗೊಳಿಸಲಾಗಿದೆ. ದೇವಾಲಯದ ವಿಗ್ರಹವನ್ನು ಹೊರಗೆ ಎಸೆದಿರುವ ದುಷ್ಕರ್ಮಿಗಳು ವಿಗ್ರಹವಿದ್ದ ಜಾಗದಲ್ಲಿ ಕೋಲಿನಿಂದ ಶಿಲುಬೆಯಾಕೃತಿಯನ್ನು ರಚಿಸಿ ವಿಕೃತಿ ಮೆರೆದಿದ್ದಾರೆ.

ದ್ಯಾಪಸಂದ್ರದ ಉದ್ದೇಕಲ್ಲುಗುಟ್ಟದ ಬಳಿ ಇರುವ ಮುನೇಶ್ವರಸ್ವಾಮಿ ದೇವಾಲಯ ಇದಾಗಿದ್ದು, ಸೋಮವಾರ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ಸಾಧ್ಯತೆಗಳು ಇವೆ.

ಕಿಡಿಗೇಡಿಗಳು ಮುನೇಶ್ವರಸ್ವಾಮಿ ವಿಗ್ರಹವನ್ನು ಗುಡಿಯಿಂದ ಹೊರಗೆ ತಂದು ಹುಲ್ಲಿನಲ್ಲಿ ಎಸೆದಿದ್ದಾರೆ. ಮೂರ್ತಿ ಸ್ವಲ್ಪ ಒಡೆದಿದೆ. ಜತೆಗೆ ದೇವಾಲಯದ ಒಳಗೆ ಹಲವು ವಿಕೃತಿಗಳನ್ನು ಮಾಡಿರುವ ದುಷ್ಕರ್ಮಿಗಳು ದೇವರ ವಿಗ್ರಹವಿರುವ ಜಾಗದಲ್ಲಿ ಶಿಲುಬೆಯ ಆಕಾರವನ್ನು ಸೃಷ್ಟಿಸಿದ್ದಾರೆ. ಈ ಭಾಗದಲ್ಲಿ ರಾತ್ರಿ ಹೊತ್ತು ಜನ ಸಂಚಾರ ಕಡಿಮೆ ಇರುತ್ತದೆ. ಈ ಇದನ್ನು ಬಳಸಿಕೊಂಡು ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ.

ಕಿಡಿಗೇಡಿಗಳ ಕೃತ್ಯಕ್ಕೆ ದ್ಯಾಪಸಂದ್ರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಮಾಲೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಮಾಲೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ. ದುಷ್ಕರ್ಮಿಗಳು ಯಾರು ಮತ್ತು ಅವರ ಉದ್ದೇಶವೇನು ಎನ್ನುವ ಬಗ್ಗೆ ಅವರು ಪತ್ತೆಯಾದ ಬಳಿಕವಷ್ಟೇ ತಿಳಿಯಲಿದೆ.

Exit mobile version