ಬೆಂಗಳೂರು: ರಾಜ್ಯದ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಮತ್ತು ಎನ್‌ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಶನಿವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಒಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿದೆ (Terrorist arrested in Bangalore). ಬೆಂಗಳೂರಿನ ಅವಿತು ಕುಳಿತಿದ್ದ ಉಗ್ರನನ್ನು ಆರಿಫ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಥಣಿಸಂದ್ರದಲ್ಲಿ ಈತ ವಾಸವಾಗಿರುವ ಬಗ್ಗೆ ಮಾಹಿತಿ ಪಡೆದ ಎರಡೂ ವಿಭಾಗಗಳ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದರು. ಈಗ ಅಲ್ ಖೈದಾ ಸಂಘಟನೆ ಜತೆಗೆ ನೇರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಆರಿಫ್ ಕಳೆದ ಸದ್ಯ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಈತ ಕಳೆದ ಎರಡು ವರ್ಷಗಳಿಂದ ಅಲ್ ಖೈದಾ ಜತೆ ಸಂಪರ್ಕದಲ್ಲಿದ್ದು, ಮಾರ್ಚ್‌ನಲ್ಲಿ ಇರಾಕ್ ಮೂಲಕ ಸಿರಿಯಾಗೆ ಹೊರಟಿದ್ದ ಎಂದು ಹೇಳಲಾಗಿದೆ.
ಎನ್‌ಐಎ ಮತ್ತು ಎಎಸ್‌ಡಿ ಅಧಿಕಾರಿಗಳು ಆರಿಫ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತನ ಕುಕೃತ್ಯಗಳ ಬಗ್ಗೆ ತನಿಖೆ ನಡೆಯಲಿದೆ.
ಇದನ್ನೂ ಓದಿ : Terror Politics : ಉಗ್ರರಿಗೆ ಬೆಂಬಲ ನೀಡುವ ಕಾಂಗ್ರೆಸ್ಸೇ ಒಂದು ಭಯೋತ್ಪಾದಕ ಸಂಘಟನೆ ಎಂದ ನಳಿನ್ ಕುಮಾರ್ ಕಟೀಲ್