Site icon Vistara News

Terrorists in Bengaluru: 2024ರ ಚುನಾವಣೆ ಉಗ್ರರ ಟಾರ್ಗೆಟ್;‌ ಒಂದು ಕೋಮಿನ ಜನ ಕಡಿಮೆ ಇರುವೆಡೆ ಸ್ಫೋಟಕ್ಕೆ ಪ್ಲ್ಯಾನ್‌!

Arrested terrorists

ಬೆಂಗಳೂರು: ನಗರದಲ್ಲಿ ಐವರು ಶಂಕಿತ ಉಗ್ರರ ಬಂಧನದ ಆರಂಭದಲ್ಲಿ ಸಿಸಿಬಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯಗಳು ಹೊರ ಬಂದಿರಲಿಲ್ಲ. ಆದರೆ, ಯಾವಾಗ ಏಳು ದಿನಗಳ ಕಾಲ ಕಸ್ಟಡಿಗೆ ಪಡೆದು ಸಿಸಿಬಿ ವಿಚಾರಣೆ ನಡೆಸಿತೋ ಆಗ ಒಂದೊಂದಾಗಿ ಅಸಲಿ ಸತ್ಯಗಳು ಹೊರ ಬೀಳುತ್ತಿವೆ. ಇದರಲ್ಲಿ ಪ್ರಮುಖವಾಗಿ 2024 ಚುನಾವಣೆಯೇ ಉಗ್ರರ ಟಾರ್ಗೆಟ್‌ ಎನ್ನಲಾಗಿದ್ದು, ಚುನಾವಣೆ ವೇಳೆ ವಿಧ್ವಂಸಕ ಕೃತ್ಯಗಳಿಗೆ ಶಂಕಿತ ಉಗ್ರರು ಪ್ಲ್ಯಾನ್‌ ಮಾಡಿದ್ದರು ಎಂಬ ವಿಷಯ ತಿಳಿದುಬಂದಿದೆ.

ಸಿಸಿಬಿ ಬಂಧನದ ಬಳಿಕ ಸದ್ಯ ರಾಷ್ಟ್ರೀಯ ತನಿಖಾ ಸಂಸ್ಥೆಗಳು ಈಗ ಶಂಕಿತರ ಹಿಂದೆ ಬಿದ್ದಿವೆ. ದೇಶದ ಭದ್ರತೆಯ ವಿಚಾರವಾದ ಕಾರಣ ಎನ್‌ಐಎ, ನಗರದ ಐಎಸ್‌ಡಿ ಕೂಡ ಶಂಕಿತ ಉಗ್ರರಾದ ಸೈಯ್ಯದ್ ಸುಹೇಲ್‌ ಖಾನ್‌, ಮಹಮ್ಮದ್ ಉಮ್ಮರ್, ಜಾಹಿದ್ ತಬ್ರೈಜ್‌, ಸೈಯ್ಯದ್ ಮುದಾಸ್ಸಿರ್‌ ಪಾಷಾ, ಮಹಮ್ಮದ್‌ ಫೈಜಲ್‌ನ ವಿಚಾರಣೆ ನಡೆಸಿವೆ. ಅಷ್ಟೇ ಅಲ್ಲದೆ ಉಗ್ರರ ಬಳಿ 15 ಜೀವಂತ ಗುಂಡುಗಳು ಅದೂ ಕೂಡ ಮಿಲಿಟರಿ ಹಾಗೂ ಉಗ್ರರು ಉಪಯೋಗಿಸುವ ಗುಂಡುಗಳಾದ್ದರಿಂದ ಮಿಲಿಟಿರಿ ಅಧಿಕಾರಿಗಳು ಕೂಡ ಶಂಕಿತರನ್ನು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ | Terrorists in Bengaluru: ಹಿಂದೂ- ಮುಸ್ಲಿಂ ಗಲಭೆ ಸೃಷ್ಟಿಗೆ ಉಗ್ರರ ಸ್ಕೆಚ್‌, ಇಡೀ ಕರ್ನಾಟಕವೇ ಇವರ ಟಾರ್ಗೆಟ್!

ಉಗ್ರರು ಒಂದು ಕೃತ್ಯದ ಬಗ್ಗೆ ಪ್ಲ್ಯಾನಿಂಗ್‌ ಮಾಡಿದರೆ ಅದಕ್ಕೊಂದು ನೆಪ ಮಾತ್ರದ ಉದ್ದೇಶ ಇರುತ್ತವೆ. ಈ ಬಾರಿಯ ಉದ್ದೇಶ ಕಳೆದ ವರ್ಷ ನಡೆದ ಮುಸ್ಲಿಂ ವಿರೋಧಿ ನಡವಳಿಕೆಗಳು. ಇದರ ದ್ವೇಷವನ್ನು ತೀರಿಸಿಕೊಳ್ಳಲು 2024ರಲ್ಲಿ ನಡೆಯಲಿರುವ ಚುನಾವಣೆಯನ್ನು ಶಂಕಿತರು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಚುನಾವಣೆ ವೇಳೆ ಪಕ್ಷದ ಮುಖಂಡರು, ಹಿಂದು ಕಾರ್ಯಕರ್ತರು ಪ್ರಚಾರಕ್ಕೆ ಹೋದಂತಹ ಸಂದರ್ಭದಲ್ಲಿ ದುಷ್ಕೃತ್ಯ ಎಸಗಬಹುದು ಹಾಗೂ ಎಲ್ಲೆಲ್ಲಿ ಎರಡು ಕೋಮಿನ ನಡುವೆ ಸಮಸ್ಯೆಗಳಿತ್ತೋ ಆ ಜಿಲ್ಲೆಯನ್ನು ಆಯ್ಕೆ ಮಾಡಿ, ಅಲ್ಲಿ ಪ್ರತಿಭಟನೆ ವೇಳೆ ಕೃತ್ಯ ಎಸಗಿದರೆ ಸಹಜವಾಗಿ ಯಾರು ಕೃತ್ಯ ನಡೆಸಿದ್ದಾರೆಂಬುದು ಗೊತ್ತಾಗುವುದಿಲ್ಲ. ತಮಗೂ ತೊಂದರೆಯಾಗುವುದಿಲ್ಲ ಎಂಬ ಕಾರಣ ಕೂಡ ಶಂಕಿತ ಉಗ್ರರ ಪ್ಲ್ಯಾನಿಂಗ್‌ ಆಗಿತ್ತು ಎನ್ನಲಾಗಿದೆ.

ಎರಡು ಬಾರಿ ಸ್ಫೋಟಕ್ಕೆ ಸಿದ್ಧತೆ?

ಲಷ್ಕರ್‌ ಎ ತೈಬಾ, ನಿಷೇಧಿತ ಸಿಮಿ, ಜಮಾತ್ ಎ ಇಸ್ಲಾಮಿದಂತಹ ಸಂಘಟನೆಗಳಿಗೆ ಕರ್ನಾಟಕ ಒಂದು ರೀತಿಯಲ್ಲಿ ಫೇವರಿಟ್‌ ಎನಿಸಿಕೊಂಡಿದೆ. ಅದರಲ್ಲೂ ರಾಜಧಾನಿಯಲ್ಲಿ ಸದ್ದು ಮಾಡಿದರೆ ಅದು ಇಡೀ ವಿಶ್ವಕ್ಕೆ ಸುದ್ದಿಯಾಗುತ್ತದೆ ಎಂಬುವುದು ಉಗ್ರರಿಗೆ ತಿಳಿದಿದೆ. ಅಷ್ಟೆ ಅಲ್ಲದೆ ಬೆಂಗಳೂರು ವಿಶ್ವ ಮಾನ್ಯತೆ ಹೊಂದಿದೆ. ಇನ್ನು ಅದಕ್ಕೆ ಪೂರಕ ಎಂಬಂತೆ ಕಳೆದ 8 ತಿಂಗಳಿನಿಂದ ಎರಡು ಬಾರಿ ಸ್ಫೋಟದಿಂದ ತಪ್ಪಿಸಿಕೊಂಡಿದೆ. ಮಂಗಳೂರು ಕುಕ್ಕರ್‌ ಬಾಂಬ್‌ ಪ್ರಕರಣದಲ್ಲಿ ಶಾರಿಕ್‌ ಎಡವಟ್ಟಿನಿಂದ ತಪ್ಪಿದ್ದರೆ, ನಗರದಲ್ಲಿ ಐಬಿ ನೀಡಿರುವ ಮಾಹಿತಿ ಅನ್ವಯ ದಾಳಿ ನಡೆಸಿ ಶಂಕಿತರ ಬಂಧನದ ಬಳಿಕ ಮತ್ತೊಂದು ದೊಡ್ಡ ದುರಂತ ನನೆಗುದಿಗೆ ಬಿದ್ದಿದೆ.

ಇದನ್ನೂ ಓದಿ | Drugs Mafia : ಪಿಸ್ತೂಲು, ಸಜೀವ ಗುಂಡು ಸಹಿತ 3 ಡ್ರಗ್‌ ಪೆಡ್ಲರ್‌ಗಳು ಅರೆಸ್ಟ್‌, 9 ಲಕ್ಷ ಮೌಲ್ಯದ MDMA ವಶ

ವಾಕಿಟಾಕಿ‌ ಅಲ್ಲ ಮಾಡಿಫೈ ಟ್ರಿಗರ್

ಶಂಕಿತ ಉಗ್ರಿಂದ ವಶಕ್ಕೆ ಪಡೆದು ತಂದಾಗ ಮೊದಲಿಗೆ ಪೊಲೀಸರು ವಾಕಿ ಟಾಕಿಗಳು ಎಂದುಕೊಂಡಿದ್ದರು. ಆದರೆ, ಇಲಾಖೆಯಲ್ಲಿ ವಾಕಿಟಾಕಿ ರಿಪೇರಿ ಮಾಡುವ ವಿಭಾಗದ ಅಧಿಕಾರಿಗಳು ಮೂಲಕ ಪರಿಶೀಲನೆ ಮಾಡಿದಾಗ ಇವುಗಳ ಅಸಲಿಯತ್ತು ಬಯಲಾಗಿದೆ. ನೋಡಲು ವಾಕಿಟಾಕಿಗಳು, ಆದರೆ ಇವು ಬಾಂಬ್ ಸ್ಫೋಟ ಮಾಡಲು ವೈರ್‌ಲೆಸ್ ಆಗಿ ಬಳಕೆ ಮಾಡಲು ತಯಾರು ಮಾಡಿಕೊಂಡಿರುವ ಮಾಡಿಫೈಡ್ ಟ್ರಿಗರ್‌ಗಳು ಎಂಬುವುದು ಗೊತ್ತಾಗಿದೆ.. ಇದರ ಜತೆಗೆ ಮುಂದಿನ ದಿನಗಳಲ್ಲಿ ಈ ಐವರ ಕಡೆಗೆ ಐಇಡಿ ಬಂದು ಸೇರುವ ಸಾಧ್ಯತೆ ಇತ್ತು. ಅವರು ಅಂದು ಕೊಂಡಂತೆ ಆಗಿದ್ದರೆ ಬೆಂಗಳೂರು 2008ರಲ್ಲಿ ಕಂಡಿದ್ದ ಸರಣಿ ಬಾಂಬ್ ಸ್ಫೋಟ ಘಟನೆಯನ್ನು ಮತ್ತೊಮ್ಮೆ ನೋಡುತ್ತಿತ್ತು.

ಇನ್ನು ಉಗ್ರ ಚಟುವಟಿಕೆಗೆ ಜೈಲಿನಲ್ಲಿರುವ ನಾಸೀರ್‌ ಪ್ರಮುಖ ಕಾರಣ ಎಂದು ತಿಳಿದು ನಾಸೀರ್‌ ಮೇಲೆ ಮಣಿ ಎಂಬ ಕೈದಿಯೊಬ್ಬ ಹಲ್ಲೆ ನಡೆಸಿದ್ದಾನೆ. ದೇಶದ್ರೋಹಿ ಎಂದು ಕರೆದು ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.

Exit mobile version