ಬೆಂಗಳೂರು: ರಾಜಧಾನಿಯ ಕನಕ ನಗರದ ಸುಲ್ತಾನಾ ಪಾಳ್ಯದ ಮಸೀದಿ (Sultanapalya Mosque) ಬಳಿ ಟೆರರ್ ಮೀಟಿಂಗ್ (Terror Meeting) ನಡೆಯುತ್ತಿದ್ದ ಸಂದರ್ಭದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ ಐವರು ಶಂಕಿತ ಉಗ್ರರನ್ನು (Terrorists in Bengaluru) ಏಳು ದಿನಗಳ ಕಸ್ಟಡಿಗೆ (Seven days Custody) ಒಪ್ಪಿಸಲಾಗಿದೆ.
ಸುಲ್ತಾನಾ ಪಾಳ್ಯದ ಪದ್ಮಾವತಿ ಎಂಬವರ ಮನೆಯಲ್ಲಿ ಬಾಡಿಗೆ ಮನೆ ಮಾಡಿ ವಾಸವಾಗಿದ್ದ ಸೈಯ್ಯದ್ ಸುಹೇಲ್ ಖಾನ್ ಮತ್ತು ಅವನ ಜತೆಗಾರರಾದ ಮಹಮ್ಮದ್ ಉಮ್ಮರ್, ಜಾಹಿದ್ ತಬ್ರೈಜ್, ಸೈಯ್ಯದ್ ಮುದಾಸ್ಸಿರ್ ಪಾಷಾ, ಮಹಮ್ಮದ್ ಫೈಜಲ್ ಎಂಬವರೇ ಈ ಶಂಕಿತ ಉಗ್ರರಾಗಿದ್ದು, ಅವರನ್ನು ಸಿಸಿಬಿ ನಡೆಸಿದ ದಾಳಿಯಲ್ಲಿ ಬಂಧಿಸಲಾಗಿತ್ತು.
2017ರಲ್ಲಿ ನಡೆದ ನೂರ್ ಅಹಮದ್ ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಈ ವ್ಯಕ್ತಿಗಳು ಅಲ್ಲಿ 2008ರ ಬೆಂಗಳೂರು ಸರಣಿ ಸ್ಫೋಟಕದ ರೂವಾರಿ ಟಿ. ನಜೀರ್ ಎಂಬಾತನ ಸಂಪರ್ಕಕ್ಕೆ ಬಂದು ಈ ಧರ್ಮದ್ವೇಷದ ವಿಷವೃತ್ತ ಪ್ರವೇಶಿಸಿದ್ದರು. ಇವರೆಲ್ಲರಿಗೆ ಹಣಕಾಸು ಮತ್ತು ಬಾಂಬ್ ಮತ್ತಿತರ ಸಾಧನಗಳನ್ನು ಪೂರೈಸುತ್ತಿದ್ದವನು ಈ ಹಿಂದೆ ಇವರ ಜೈಲಿನಲ್ಲಿದ್ದು ಬಳಿಕ ಜಾಮೀನು ಪಡೆದು ವಿದೇಶಕ್ಕೆ ಹಾರಿ ಈಗ ಲಷ್ಕರ್ ತಯ್ಬಾ ಸಂಘಟನೆ ಜತೆ ಸೇರಿಕೊಂಡ ಜುನೈದ್ ಆಗಿದ್ದಾನೆ. ಈಗ ಬಂಧಿತರಾಗಿರುವ ಶಂಕಿತರು ಜುನೈದ್‌ನ ಜತೆ ಸಂಪರ್ಕ ಹೊಂದಿದ್ದು, ಇನ್ನೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ದೊಡ್ಡದೊಂದು ಸ್ಫೋಟಕ್ಕೆ ಸಜ್ಜಾಗಿದ್ದರು ಎಂದು ಸ್ವತಃ ರಾಜ್ಯದ ಗುಪ್ತಚರ ಇಲಾಖೆಯೇ ಮಾಹಿತಿ ನೀಡಿದೆ.
ಕೇಂದ್ರ ಗುಪ್ತಚರ ಇಲಾಖೆ ಸುಲ್ತಾನಾ ಪಾಳ್ಯದಲ್ಲಿ ನಡೆಯುತ್ತಿರುವ ನಿಗೂಢ ಹಣಕಾಸು ವ್ಯವಹಾರ ಮತ್ತು ನಿಗೂಢ ಪಾರ್ಸೆಲ್‌ಗಳ ಮೇಲೆ ಕಣ್ಣಿಟ್ಟಿತ್ತು. ಇದೊಂದು ಉಗ್ರರ ಸ್ಕೆಚ್ ಎಂದು ತಿಳಿಯುತ್ತಲೇ ರಾಜ್ಯದ ಪೊಲೀಸ್ ಇಲಾಖೆಗೆ ತಿಳಿಸಿತ್ತು. ಅದರನುಸಾರ ಸಿಸಿಬಿ ಪೊಲೀಸರು ಕಳೆದ ಕೆಲವು ದಿನಗಳಿಂದ ಇವರ ಚಟುವಟಿಕೆಗಳ ಮೇಲೆ ಕಣ್ಣಿಟ್ಟು ಕೆಲವು ದಿನಗಳ ಹಿಂದೆ ಒಬ್ಬೊಬ್ಬರನ್ನೇ ಬಂಧಿಸಿತ್ತು. ಈ ಮೂಲಕ ಬೆಂಗಳೂರಿನಲ್ಲಿ ನಡೆಯಬಹುದಾಗಿದ್ದ ದೊಡ್ಡ ದುಷ್ಕರ್ಮಿ ಕೃತ್ಯವೊಂದನ್ನು ವಿಫಲಗೊಳಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಟ್ರೇನಿಂಗ್ ಪಡೆದ ಈ ರಕ್ಕಸರು, ಹಿಂದುಗಳ ಮನೆಯಲ್ಲಿ ವಾಸ ಮಾಡಿ ಬೆಂಗಳೂರನ್ನೇ ನಡುಗಿಸಲು ಸಂಚು ಹೂಡಿದ್ದನ್ನು ಪೊಲೀಸರ ಸಕಾಲಿಕ ಕಾರ್ಯಾಚರಣೆ ವಿಫಲಗೊಳಿಸಿದೆ.
ನರಮೇಧಕ್ಕೆ ಸಂಚು ಹೂಡಿದ್ದ ರಕ್ಕಸರು ಇವರು
ಆರೋಪಿ ನಂ. 1 : ಟಿ-ನಜೀರ್, ಬೆಂಗಳೂರು ಸರಣಿ ಸ್ಫೋಟ ರೂವಾರಿ (10 ವರ್ಷದಿಂದ ಪರಪ್ಪನ ಅಗ್ರಹಾರದಲ್ಲಿದ್ದಾನೆ)
ಆರೋಪಿ ನಂ. 2 : ಜುನೈದ್, 2017ರ ನೂರ್ ಅಹಮದ್ ಕೊಲೆ ಆರೋಪಿ, ಜಾಮೀನು ಪಡೆದು ವಿದೇಶದಲ್ಲಿದ್ದಾನೆ. ಶಂಕಿತ ಉಗ್ರರಿಗೆ ಫಂಡಿಂಗ್ ಮಾಡುತ್ತಿದ್ದಾನೆ.
ಬಂಧಿತ ಶಂಕಿತ ಉಗ್ರರು ಇವರು
ಆರೋಪಿ ನಂ. 3: ಸೈಯ್ಯದ್ ಸುಹೇಲ್ ಖಾನ್, ಬಂಧಿತ ಶಂಕಿತ ಉಗ್ರ, ವಿಳಾಸ: #428, ಎರಡನೇ ಫ್ಲೋರ್, 2ನೇ ಕ್ರಾಸ್, ಮುಕ್ರಮ್ ಮಸೀದಿ ಸಮೀಪ, ಸುಲ್ತಾನ ಪಾಳ್ಯ ಮುಖ್ಯ ರಸ್ತೆ, ಆರ್‌ಟಿ ನಗರ
ಆರೋಪಿ ನಂ. 4: ಮಹಮ್ಮದ್ ಉಮ್ಮರ್, ಬಂಧಿತ ಶಂಕಿತ ಉಗ್ರ, ವಿಳಾಸ: # 141, 12ನೇ ಕ್ರಾಸ್ದೇ ದೇವಿ ನಗರ, ಕೊಡಿಗೆಹಳ್ಳಿ
ಆರೋಪಿ ನಂ. 5: ಜಾಹಿದ್ ತಬ್ರೈಜ್, ಬಂಧಿತ ಶಂಕಿತ ಉಗ್ರ, ವಿಳಾಸ: #30,4ನೇ ಮುಖ್ಯರಸ್ತೆ, ಭದ್ರಪ್ಪ ಲೇ ಔಟ್, ಕೊಡಿಗೆಹಳ್ಳಿ
ಆರೋಪಿ ನಂ. 6: ಸೈಯ್ಯದ್ ಮುದಾಸ್ಸಿರ್ ಪಾಷಾ, ಬಂಧಿತ ಶಂಕಿತ ಉಗ್ರ, ಫ್ಲ್ಯಾಟ್ ನಂಬರ್ 1, ಆಮ್ರನ್ ಎನ್‌ಕ್ಲೋವ್ ಆಪಾರ್ಟ್‌ಮೆಂಟ್, ಮೂರನೇ ಕ್ರಾಸ್, ದಿಣ್ಣೂರ್ ಮೈನ್ ರೋಡ್ ಆರ್‌ಟಿ ನಗರ
ಆರೋಪಿ ನಂ. 7: ಮಹಮ್ಮದ್ ಫೈಜಲ್, ಬಂಧಿತ ಶಂಕಿತ ಉಗ್ರ, ವಿಳಾಸ: # 208, ಅಜಿಜಿಯಾ ಎನ್‌ಕ್ಲೇವ್, ಪುಲಕೇಶಿ ನಗರ ಬೆಂಗಳೂರು
ಆರೋಪಿಗಳ ಮೇಲೆ ಹಾಕಿರುವ ಸೆಕ್ಷನ್‌ಗಳು ಯಾವುದು..?
ಐವರು ಬಂಧಿತ ಶಂಕಿತ ಉಗ್ರರ ಮೇಲೆ ಯುಎಪಿಎ ಅಡಿ ಪ್ರಕರಣ ದಾಖಲು
ಶಸ್ತಾಸ್ತ್ರ ಕಾಯ್ದೆ, ಐಪಿಸಿ 121 ಎ, 120 ಬಿ, 121-112 ಅಡಿ ಪ್ರಕರಣ ದಾಖಲು
ನಿಷೇಧಿತ ಸಂಘಟನೆಯ ಸದಸ್ಯರ ಜೊತೆ ಸಂಪರ್ಕ, ವಿದ್ವಂಸಕ ಕೃತ್ಯ ಎಸಗಲು ಒಳಸಂಚು ಮತ್ತು ದುಷ್ಕೃತ್ಯಕ್ಕೆ ಬೇಕಾಗುವ ಸ್ಫೋಟಕ ಹಾಗು ಶಸ್ತ್ರಾಸ್ತ್ರ ಸಂಗ್ರಹದ ಆರೋಪವನ್ನು ಹೊರಿಸಲಾಗಿದೆ. ಹಾಗು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ, ಯುಎಪಿಎ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Terrorists in Bengaluru : 2 ದಿನ ತಡವಾಗಿದ್ದರೂ ಬೆಂಗಳೂರಿನಲ್ಲಿ ನಡೀತಿತ್ತು BIG BLAST; ಪರಮೇಶ್ವರ್ ಹೇಳಿದ್ದೇನು?
ಆರೋಪಿಗಳನ್ನು ಎನ್‌ಐಎಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಲಯ ಏಳು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಿದೆ. ಶಂಕಿತ ಉಗ್ರರು ಇನ್ನು ಜುಲೈ 26ನೇ ತಾರೀಖಿನ ತನಕ ಕಸ್ಡಡಿಯಲ್ಲಿರಲಿದ್ದು, ಎಲ್ಲ ರೀತಿಯ ವಿಚಾರಣೆಗೆ ಒಳಪಡಿಸಲಿದ್ದಾರೆ.
ಬಂಧಿತ ಉಗ್ರರನ್ನು ಜಯನಗರದ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಿಸಲಾಯಿತು. ಬಳಿಕ ಮಡಿವಾಳ ಟೆಕ್ನಿಕಲ್ ಸೆಂಟರ್‌ಗೆ ಕರೆದುಕೊಂಡು ಹೋಗಲಾಗಿದೆ.