Site icon Vistara News

VISTARA TOP 10 NEWS : ಶಾಲೆಗಳಿಗೆ ಉಗ್ರರ ಬೆದರಿಕೆ, ರೆಸಾರ್ಟ್​ ಪಾಲಿಟಿಕ್ಸ್​ಗೆ ರೆಡಿ ಎಂದ ಡಿಕೆಶಿ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Top 10 news

1.ಮುಸ್ಲಿಮರಾಗಿ, ಇಲ್ಲವೇ ನಿಮ್ಮ ಮಕ್ಕಳನ್ನು ಕೊಲ್ತೇವೆ; ಶಾಲೆಗಳಿಗೆ ಬಂದ ಬೆದರಿಕೆ
ಬೆಂಗಳೂರು: ಬೆಂಗಳೂರಿನ (Bangalore News) ಮೂವತ್ತಕ್ಕೂ ಅಧಿಕ ಶಾಲೆಗಳಿಗೆ ಏಕಕಾಲದಲ್ಲಿ ಬಂದಿರುವ ಬೆದರಿಕೆ ಪತ್ರ (Bomb threat) ಈ ಹಿಂದಿನಂತೆ ಯಾವುದೋ ಸಣ್ಣ ಪುಟ್ಟ ಕಾರಣಕ್ಕಾಗಿ ಬಂದಿದ್ದಲ್ಲ. ಇದು ಪಕ್ಕಾ ಉಗ್ರವಾದಿಗಳಿಂದಲೇ ಬಂದಿರುವ ಪತ್ರದಂತೆ (Terrorists letters to schools) ಕಾಣುತ್ತಿದೆ. ನೀವು ಮುಸ್ಲಿಮರಾಗಬೇಕು, ಇಲ್ಲವಾದರೆ ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಕೊಂದು ಹಾಕುತ್ತೇವೆ (Become muslim or will kill you) ಎಂದು ಈ ಮೇಲ್‌ ಮಾಡಿರುವ ಬೆದರಿಕೆ ಪತ್ರದಲ್ಲಿ ಹೇಳಿರುವುದು ಆತಂಕ ಮೂಡಿಸಿದೆ. ಪೂರ್ಣ ಸುದ್ದಿಗೆ ಓದಲು ಈ ಲಿಂಕ್ ಕ್ಲಿಕ್​ ಮಾಡಿ.
ಈ ಸುದ್ದಿಯನ್ನೂ ಓದಿ : Bomb Threat : 48 ಶಾಲೆಗಳಿಗೆ ಬಂದ ಬೆದರಿಕೆ EMail ಮೂಲ ಪತ್ತೆ, ಏನಿದು ಜರ್ಮನಿ ಕನೆಕ್ಷನ್?‌

2. ಪಂಚರಾಜ್ಯ Result ಬಳಿಕ ರೆಸಾರ್ಟ್‌ ಪಾಲಿಟಿಕ್ಸ್?‌ ರೆಡಿ ಎಂದ ಡಿಕೆಶಿ
ಬೆಂಗಳೂರು: ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆಯ (Assembly Elections 2023) ಮತ ಎಣಿಕೆ (Election Counting) ಡಿಸೆಂಬರ್‌ 3ರಂದು ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ (Madhya pradesh) ಕಾಂಗ್ರೆಸ್‌ ಮತ್ತು ರಾಜಸ್ಥಾನದಲ್ಲಿ (Rajasthan Elections) ಬಿಜೆಪಿ ಮುನ್ನಡೆ ಸಾಧಿಸಲಿದೆ ಎನ್ನುವುದು ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯ ಸಾರಾಂಶವಾಗಿತ್ತು. ಆದರೆ, ಎರಡೂ ಪಕ್ಷಗಳಿಗೆ ತಾವು ಎರಡರಲ್ಲೂ ಗೆಲ್ಲುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇದೆ. ಇದರ ನಡುವೆಯೇ ಒಂದು ವೇಳೆ ಬಿಜೆಪಿಗೆ ಸ್ವಲ್ಪ ಸ್ಥಾನ ಕಡಿಮೆ ಬಂದರೆ ಅದು ತಮ್ಮ ಶಾಸಕರನ್ನು ಸೆಳೆದುಕೊಳ್ಳುವ ಅಪಾಯವಿದೆ ಎನ್ನುವ ಸಂಶಯ ಕಾಂಗ್ರೆಸ್‌ಗೆ ಇದೆ. ಹೀಗಾಗಿ ಅಂಥ ಪರಿಸ್ಥಿತಿಯೊಂದು ನಿರ್ಮಾಣಗೊಂಡರೆ ಶಾಸಕರನ್ನು ಬೇರೆ ಕಡೆಗೆ ಸಾಗಿಸುವ ಪ್ಲ್ಯಾನ್‌ನ್ನು (Resort Politics) ಅದು ಮಾಡಿಕೊಂಡಿದೆ ಎನ್ನಲಾಗಿದೆ. ಪೂರ್ಣ ಸುದ್ದಿಗೆ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

3. ಇನ್ಫೋಸಿಸ್ ನಾರಾಯಣ ಮೂರ್ತಿಗೆ ಬಡವರ ಕಷ್ಟ ಗೊತ್ತಿಲ್ಲ: ಎಚ್‌.ಸಿ. ಮಹದೇವಪ್ಪ
ಮೈಸೂರು: ಬಡವರ ಕಷ್ಟ ನಿವಾರಣೆಗಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ನಾರಾಯಣ ಮೂರ್ತಿಗೆ ಬಡವರ ಕಷ್ಟ ಗೊತ್ತಿಲ್ಲ. ಹಾಗಾಗಿ ಉಚಿತ ಕೊಡುಗೆಗಳನ್ನು (Congress Guarantee) ನೀಡದಂತೆ ಹೇಳಿದ್ದಾರೆ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

4. ಸಿಬಿಎಸ್‌ಇ 10, 12 ತರಗತಿ ಪರೀಕ್ಷೆಗೆ ಡಿವಿಷನ್, ಡಿಸ್ಟಿಂಕ್ಷನ್ ಘೋಷಣೆ ಇಲ್ಲ!
ನವದೆಹಲಿ: ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು (CBSE Board Exams) ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ಡಿವಿಷನ್/ಡಿಸ್ಟಿಂಕ್ಷನ್/ಅಗ್ರೇಗೇಟ್ (division/distinction/aggregate) ನೀಡಲಾಗುವುದಿಲ್ಲ ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(The Central Board of Secondary Education – CBSE) ಹೇಳಿದೆ. ಮಂಡಳಿ ಕೈಗೊಂಡ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಪೂರ್ಣ ಸುದ್ದಿಗೆ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

5. ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ
ಬೆಂಗಳೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿಯನ್ನು (Exam Time Table) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಬಿಡುಗಡೆ ಮಾಡಿದೆ. ಈ ವೇಳಾಪಟ್ಟಿಯಂತೆ ದ್ವಿತೀಯ ಪಿಯುಸಿ‌ ಪರೀಕ್ಷೆ ಮಾರ್ಚ್‌ 2‌ ರಿಂದ ಮಾರ್ಚ್ 22 ರವರೆಗೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್‌ 25 ರಿಂದ ಏಪ್ರಿಲ್‌ 6ರವರೆಗೆ ನಡೆಯಲಿದೆ. ಪೂರ್ಣ ಸುದ್ದಿಗೆ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

6. ಪ್ಯಾಲೆಸ್ತೀನ್‌ ಪರ ನಾಟಕ ತಡೆದ ಪೊಲೀಸರು; ಸಿಎಂ ಸಿದ್ದರಾಮಯ್ಯ ಗರಂ!
ಬೆಂಗಳೂರು: ರಂಗಶಂಕರದಲ್ಲಿ ಬುಧವಾರ (ನ. 29) ಆಯೋಜನೆಯಾಗಿದ್ದ ಪ್ಯಾಲೆಸ್ತೀನ್‌ ಪರವಾದ ಕಿರು ನಾಟಕ, ಕವನ ವಾಚನ ಕಾರ್ಯಕ್ರಮಕ್ಕೆ ಪೊಲೀಸರು ನಿರಾಕರಣೆ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ತಾವು ಯಾವುದೇ ರೀತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದಿಲ್ಲ. ರಾಜ್ಯ ಸರ್ಕಾರವು ಸಂವಿಧಾನದ ಮೂಲ ಆಶಯಗಳಡಿ ನಡೆಸುವ ಚಟುವಟಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಈ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Home Minister Dr G Parameshwara) ಅವರನ್ನೂ ಸಹ ಕರೆದು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಕಾರ್ಯಕ್ರಮಕ್ಕೆ ಎಂ.ಡಿ. ಪಲ್ಲವಿ (MD Pallavi) ಸೇರಿ ಹಲವು ಕಲಾವಿದರು ಭಾಗಿಯಾಗಬೇಕಿತ್ತು. ಪೂರ್ಣ ಸುದ್ದಿಗೆ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

7. ಮೊಗಸಾಲೆ ಅಂಕಣ: ಲೋಕಸಭೆ ಚುನಾವಣೆಗೆ ತಯಾರಿ ಮತ್ತು ರಾಜ್ಯ ಬಿಜೆಪಿಯ ತಳಮಳ
ಪಂಚರಾಜ್ಯ ಚುನಾವಣೆ ಮುಕ್ತಾಯವಾಗಿದೆ. ಮತದಾನೋತ್ತರ ಸಮೀಕ್ಷಾ ವರದಿಗಳ ರೀತ್ಯ ಭಾರತೀಯ ಜನತಾ ಪಾರ್ಟಿ ತನ್ನ ಕೈಯಲ್ಲಿರುವ ಒಂದು ರಾಜ್ಯ ಉಳಿಸಿಕೊಂಡು ಮತ್ತೊಂದನ್ನು ಗೆಲ್ಲಲಿದೆ. ಕಾಂಗ್ರೆಸ್ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕೈಯಲ್ಲಿರುವ ಎರಡರಲ್ಲಿ ಒಂದು ರಾಜ್ಯ ಉಳಿಸಿಕೊಂಡು ಇನ್ನೊಂದನ್ನು ವಶಕ್ಕೆ ಪಡೆಯಲಿದೆ. ಸಮೀಕ್ಷಾ ವರದಿಗಳು ಹೇಳುವಂತೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಪ್ರಬಲ ಸೆಣೆಸಾಟ ಪೈಪೋಟಿ ನಡೆದಿದೆ. ವರದಿಗಳು ನುಡಿದಿರುವ ಭವಿಷ್ಯದ ಚಿಪ್ಪು ಬರುವ ಸೋಮವಾರ ಬೆಳಗ್ಗೆ ಒಡೆಯಲಿದೆ. ಅಲ್ಲೀವರೆಗೂ “ಆದರೆ ಹೋದರೆ” ಎಂಬ ರೆ ಸಾಮ್ರಾಜ್ಯದಲ್ಲಿ ನಾವಿರುವುದು ಅನಿವಾರ್ಯವಾಗಿದೆ. ಪೂರ್ಣ ಸುದ್ದಿಗೆ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

8. ಬ್ಯಾಂಕಿಗೆ ನುಗ್ಗಿ 18 ಕೋಟಿ ರೂ. ದೋಚಿದ ಕಳ್ಳರು; ಇದು ರಿಯಲ್‌ ಮನಿ ಹೈಸ್ಟ್! ವಿಡಿಯೊ ನೋಡಿ
ಇಂಫಾಲ: ಸ್ಪೇನ್ ಬ್ಯಾಂಕ್‌ಗೆ ನುಗ್ಗಿ, ವಾರಗಟ್ಟಲೆ ಅಲ್ಲೇ ಇದ್ದು, ಮೂಟೆಗಟ್ಟಲೆ ದುಡ್ಡು ದೋಚಿಕೊಂಡು ಹೋಗುವ ಮನಿ ಹೈಸ್ಟ್‌ ವೆಬ್‌ ಸಿರೀಸ್‌ಅನ್ನು (Money Heist Web Series) ನೋಡದವರೇ ಇರಲಿಕ್ಕಿಲ್ಲ. ಆದರೆ, ಇದೇ ರೀತಿ ಮಣಿಪುರದಲ್ಲಿ ಬ್ಯಾಂಕ್‌ಗೆ ನುಗ್ಗಿದ ಕಳ್ಳರು ಬರೋಬ್ಬರಿ 18.18 ಕೋಟಿ ರೂ. ದೋಚಿದ್ದಾರೆ. ಇವರು ಬ್ಯಾಂಕ್‌ಗೆ ನುಗ್ಗಿ, ಹಣ ದರೋಡೆ ಮಾಡುವ (Bank Loot) ವಿಡಿಯೊ (Viral Video) ಕೂಡ ಹರಿದಾಡಿದೆ. ಇದು ಮನಿ ಹೈಸ್ಟ್‌ ವೆಬ್‌ ಸಿರೀಸ್‌ಅನ್ನು ನೆನಪಿಸುತ್ತಿದೆ ಎಂದು ಜನ ಕಮೆಂಟ್‌ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಓದಲು ಈ ಲಿಂಕ್ ಕ್ಲಿಕ್​ ಮಾಡಿ

9. .10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ಗೆ ಅದ್ಧೂರಿ ಚಾಲನೆ
ಅಹಮದಾಬಾದ್ : ಕಬಡ್ಡಿ ಮತ್ತು ಭಾರತದ ಜನರ ನಡುವೆ ಹಲವಾರು ವರ್ಷಗಳಿಂದ ಬಲವಾದ ಸಂಬಂಧವಿದೆ. ಆದಾಗ್ಯೂ, 2014 ರಲ್ಲಿ ಪ್ರೊ ಕಬಡ್ಡಿ ಲೀಗ್ ನ (Pro Kabaddi League) ಆಗಮನದ ನಂತರ ಈ ಕ್ರೀಡೆಯು ಪ್ರಾಮುಖ್ಯತೆ ಮತ್ತು ಜನಪ್ರಿಯತೆಯನ್ನು ಗಳಿಸಿತು. ಇದೀಗ 10ನೇ ಆವೃತ್ತಿಯ ಟೂರ್ನಿಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಬಡ್ಡಿ ಟೂರ್ನಿಗೆ ಚಾಲನೆ ನೀಡಲಾಗಿದೆ. ಪೂರ್ಣ ಸುದ್ದಿಗೆ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

9. ಪಾಕ್​ ಆಟಗಾರರಿಂದಲೇ ಲಾರಿಗೆ ಲಗೇಜ್ ಲೋಡ್ ಮಾಡಿಸಿದ ಅಧಿಕಾರಿಗಳು!
ಕ್ಯಾನ್​ಬೆರಾ: ನೂತನ ನಾಯಕ ಶಾನ್ ಮಸೂದ್ ನೇತೃತ್ವದಲ್ಲಿ ಪಾಕಿಸ್ತಾನ ತಂಡ (Pakistan Cricket Team) ವಿಶ್ವ ಟೆಸ್ಟ್ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎದುರಿಸಲಿದೆ. ಅದಕ್ಕಾಗಿ ತಂಡ ಆಸ್ಟ್ರೇಲಿಯಾ ತಲುಪಿದೆ. ಪೂರ್ಣ ಸುದ್ದಿಗೆ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version