ಬೆಂಗಳೂರು: ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಖಾಡವನ್ನು ನಾಯಕ ಅಮಿತ್ ಶಾ ಮಾರ್ಗದರ್ಶನದಲ್ಲಿ (Amit Shah) ಸಜ್ಜುಗೊಳಿಸುತ್ತಿದೆ. ಸಕಲ ರೀತಿಯಲ್ಲಿ ಕಾರ್ಯಕರ್ತರ ಪಡೆ ಸಿದ್ಧವಾಗುತ್ತಿದೆ. ಚುನಾವಣೆಗೆ ತಳಮಟ್ಟದ ಕಾರ್ಯಕರ್ತರನ್ನು ಗಟ್ಟಿಗೊಳಿಸಲು ಬಿಜೆಪಿ ಪ್ಲಾನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು (ಶನಿವಾರ) ಮಧ್ಯಾಹ್ನ 2.30 ಕ್ಕೆ ಅರಮನೆ ಮೈದಾನದಲ್ಲಿ ಬಿಜೆಪಿಯ ಮೆಗಾ ಸಂಕಲ್ಪ ಸಮಾವೇಶ ನಡೆಯಲಿದೆ.
ಬೂತ್ ಮಟ್ಟದ ನಾಯಕರ ಜೊತೆ ಬಿಜೆಪಿ ವರಿಷ್ಠ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಬೂತ್ ವಿಜಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಮಲಪಡೆಯ ಘಟಾನುಘಟಿಗಳು ಭಾಗಿಯಾಗಲಿದ್ದಾರೆ. ಬೂತ್ ಮಟ್ಟದ ಅಧ್ಯಕ್ಷರು,ಪೇಜ್ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಜನವರಿ 2 ರಿಂದ 12 ರವರೆಗೆ ಬೂತ್ ವಿಜಯ ಕಾರ್ಯಕ್ರಮ ನಡೆಯಲಿದೆ. ಬಿಜೆಪಿಯ ರಾಜಕೀಯ ವಿಭಾಗೀಯ ಘಟಕಗಳು, 39 ಜಿಲ್ಲೆಗಳ ಘಟಕಗಳು, 312 ಮಂಡಳಗಳು,11,540 ಶಕ್ತಿ ಕೇಂದ್ರಗಳು, 58,186 ಮತಗಟ್ಟೆಯಲ್ಲಿ ಬೂತ್ ವಿಜಯ ಕಾರ್ಯಕ್ರಮ ನಡೆಯಲಿದೆ. ರಾಜ್ಯದ 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಉದ್ದೇಶ ಇದೆ. ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಚುನಾವಣಾ ಸಂದೇಶವನ್ನು ಅಮಿತ್ ಶಾ ನೀಡಲಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಬಿಜೆಪಿ ಕಾರ್ಯಕರ್ತರಿಗೆ ಟಾಸ್ಕ್ ಕೊಡಲಿದ್ದಾರೆ.
ಬೂತ್ ವಿಜಯ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ನೀಡುವ ಟಾಸ್ಕ್‌ಗಳೇನು !?
- ರಾಜ್ಯಾದ್ಯಂತ 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಗುರಿ
- ಪಕ್ಷದ ಪ್ರಚಾರಕರಾಗಿ ಬಿಜೆಪಿ ಚಿಂತನೆಗಳನ್ನು ತಲುಪಿಸುವುದು
- ಮನೆಮನೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ತಲುಪಿಸುವುದು
- ಬೂತ್ ಮಟ್ಟದಲ್ಲಿ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳುವುದು
- ಸ್ಥಳೀಯ ಶಾಸಕರ ಪರವಾಗಿ ಬೆಂಬಲವಾಗಿ ನಿಲ್ಲುವುದು
- ಪಕ್ಷದ ರಾಜ್ಯವಾರು ಕಾರ್ಯಕ್ರಮಗಳನ್ನು ಯಶಸ್ವಿಗಳಿಸುವುದು
- ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿ ಮತ್ತಷ್ಟು ರೀಚ್ ಮಾಡಿಸುವುದು
ಬೂತ್ ವಿಜಯ ಕಾರ್ಯಕ್ರಮದ ಹಿಂದಿನ ಲೆಕ್ಕಾಚಾರಗಳೇನು ?
- ಅಮಿತ್ ಶಾ ಆಗಮನದಿಂದ ಕಾರ್ಯಕರ್ತರಿಗೆ ಮತ್ತಷ್ಟು ಹೆಚ್ಚಲಿಸುವ ಹುಮ್ಮಸ್ಸು
- ಗುಜರಾತ್ ಚುನಾವಣಾ ಫಲಿತಾಂಶದ ಪರಿಣಾಮವನ್ನು ಕರ್ನಾಟಕದಲ್ಲಿ ಬಳಸಿಕೊಳ್ಳಲು ಪ್ಲಾನ್
- ಹಳೇ ಮೈಸೂರು ಭಾಗದಲ್ಲಿ ಕೇಂದ್ರಿಕರಿಸುವ ಮೂಲಕ ಬಲ ಹೆಚ್ಚಿಸುವುದು.
- ಕಾರ್ಯಕರ್ತರಿಗೆ ಜವಾಬ್ದಾರಿ ನೀಡುವುದರಿಂದ ಮತಗಳ ಪರಿವರ್ತನಾ ಪ್ರಮಾಣ ಹೆಚ್ಚಳ ಸಾಧ್ಯತೆ
- ಗುಜರಾತ್ ಚುನಾವಣಾ ಮಾದರಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ, ಪೇಜ್ ಪ್ರಮುಖರನ್ನು ಪ್ರಮುಖವಾಗಿ ಬಳಸಿಕೊಳ್ಳುವ ಲೆಕ್ಕಾಚಾರ.