Site icon Vistara News

Koppal News: ಸಾವಿನಲ್ಲೂ ಅಕ್ಕನ ಹಿಂಬಾಲಿಸಿದ ತಮ್ಮ;‌ ಒಂದೇ ದಿನ ಇಬ್ಬರೂ ಕೊನೆಯುಸಿರು

Syed Shaheeda Begum and Syed safdar ali

ಕೊಪ್ಪಳ: ಒಂದೇ ದಿನ ಅಕ್ಕ- ತಮ್ಮ ಇಬ್ಬರೂ ಕೊನೆಯುಸಿರೆಳೆದಿರುವ ಮನ ಕಲಕುವ ಘಟನೆ ನಗರದ (Koppal News) ದಿವಟರ ವೃತ್ತದ ಬಳಿ ನಡೆದಿದೆ. ಅಕ್ಕನ ಸಾವಿನ ಸುದ್ದಿ ತಿಳಿದು ಹೃದಯಾಘಾತದಿಂದ ತಮ್ಮ ಮೃತಪಟ್ಟಿದ್ದು, ಸಾವಿನಲ್ಲೂ ಸಹೋದರಿಯನ್ನು ಹಿಂಬಾಲಿಸಿದ್ದಾರೆ.

ಸಯ್ಯದ್ ಶಾಹೀದ ಬೇಗಂ ಹಾಗೂ ಸೈಯದ್ ಸಪ್ದರ್ ಅಲಿ‌ ಮೃತರು. ಶುಕ್ರವಾರ ಸಂಜೆ ಸಯ್ಯದ ಶಾಹೀದ ಬೇಗಂ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಆ ದುಃಖದಲ್ಲಿ ಮಧ್ಯರಾತ್ರಿ ಸಹೋದರ ಸೈಯದ್ ಸಪ್ದರ್‌ ಅಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕೊಪ್ಪಳದ ಮೆಹಬೂಬನಗರದವರಾದ ಅಕ್ಕ ಸೈಯದ್ ಶಾಹೀದ ಬೇಗಂ (70), ತವರು ಮನೆಗೆ ಬಂದಿದ್ದರು. ಈ ವೇಳೆ ಅಕಾಲಿಕವಾಗಿ ನಿಧನರಾಗಿದ್ದಾರೆ. ನಂತರ ಸೈಯದ್ ಸಪ್ದರ್ ಅಲಿ(60) ಹೃದಯಾಘಾತದಿಂದ ಹೃದಯಾಘಾತದಿಂದ ನಿಧನರಾಗಿದ್ದರಿಂದ ಕುಟುಂಬಸ್ಥರು ಇಬ್ಬರ ಅಂತ್ಯಕ್ರಿಯೆ ನಡೆಸಿದ್ದಾರೆ.

ಇದನ್ನೂ ಓದಿ | Family Dispute : ದಿನ ಬೆಳಗಾದರೆ ಜಗಳ; ಪೆಟ್ರೋಲ್‌ ಸುರಿದುಕೊಂಡ ದಂಪತಿ!

ತಿಂಡಿಯಲ್ಲಿ ಮತ್ತು ಬರುವ ಔಷಧ ಬೆರಸಿ ವೃದ್ಧೆ ಬಳಿ ಕಳ್ಳತನ

ಚಾಮರಾಜನಗರ: ತಿಂಡಿಯಲ್ಲಿ ಮತ್ತು ಬರುವ ಔಷಧ ಬೆರೆಸಿ ವೃದ್ಧೆ ಹತ್ತಿರ ಕಳ್ಳತನ ಮಾಡಿರುವ ಘಟನೆ ಜಿಲ್ಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪೊಂಗಲ್‌ನಲ್ಲಿ ಮತ್ತು ಬರುವ ಔಷಧ ಬೆರಸಿ ಪ್ರಜ್ಞೆ ತಪ್ಪಿಸಿದ ಬಳಿಕ 10 ಸಾವಿರ ರೂ. ಹಣ ಹಾಗೂ ಮೊಬೈಲ್ ಕದ್ದು ಖದೀಮರು ಪರಾರಿಯಾಗಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರಿನ ರತ್ನಮ್ಮ (70) ಮೋಸಕ್ಕೆ ಒಳಗಾದವರು. ಇವರು ಒಬ್ಬರೇ ಮಲೆ ಮಹದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನ ಪಡೆಯಲು ಬಂದಿದ್ದನ್ನು ತಿಳಿದ ಕಿರಾತಕರು, ದೇವರ ದರ್ಶನ ಪಡೆದ ಬಳಿಕ ವೃದ್ಧೆಯನ್ನು ಹಿಂಬಾಲಿಸಿದ್ದರು.

ಇದನ್ನೂ ಓದಿ | Road Accident: ಬಸ್-ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ, ಮಗ ಸ್ಥಳದಲ್ಲೇ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ನಂತರ ಮಹಿಳೆ ಹಾಗೂ ಮೂವರು ಖದೀಮರು ವೃದ್ಧೆ ಬಲಿ ಹೋಗಿ, ಒಬ್ಬರೇ ಇದ್ದೀರಾ? ತೆಗೆದೊಕೊಳ್ಳಿ ಪ್ರಸಾದ ಎಂದು ಹೇಳಿ ಮತ್ತು ಬರುವ ಔಷಧ ತಿನ್ನಿಸಿದ್ದಾರೆ. ಇದರಿಂದ ವೃದ್ಧೆ ಪ್ರಜ್ಞೆ ತಪ್ಪಿದ್ದರಿಂದ ಆಕೆ ಬಳಿ ಇದ್ದ 10 ಸಾವಿರ ರೂ. ಹಾಗೂ ಮೊಬೈಲ್ ಕದ್ದು ಕಳ್ಳರು ಎಸ್ಕೇಪ್‌ ಅಗಿದ್ದಾರೆ. ಮಲೈಮಹದೇಶ್ವರ ಬೆಟ್ಟದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Exit mobile version