ಚಿಕ್ಕೋಡಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರಶಂಸನಾ ಪತ್ರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕುಡಚಿ ಪಟ್ಟಣದ ನೂತನ ಪೊಲೀಸ್ ಠಾಣೆ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ರಾಮದುರ್ಗ ಠಾಣೆಯ 23 ಸಿಬ್ಬಂದಿ, ಪಿಎಸ್‌ಐ ಶಿವಾನಂದ ಕಾರಜೋಳ ಹಾಗೂ ಡಿವೈಎಸ್‌ಪಿ ರಾಮಗೌಡ ಹಟ್ಟಿ ಅವರನ್ನು ಸನ್ಮಾನಿಸಿದ್ದಾರೆ.
ಚಂದ್ರಶೇಖರ ಗುರೂಜಿ ಅವರ ಕೊಲೆ ನಡೆದ 4 ಗಂಟೆ ಅವಧಿಯಲ್ಲೇ ಪ್ರಕರಣದ ಇಬ್ಬರು ಆರೋಪಿಗಳನ್ನು ರಾಮದುರ್ಗ ಪೊಲೀಸರ ತಂಡ ಬಂಧಿಸಿತ್ತು. ರಾಮದುರ್ಗದ ಮುಳ್ಳೂರು ಗುಡ್ಡದ ಬಳಿ ಆರೋಪಿಗಳನ್ನು ಬಂದಿಸಿದ್ದ ಪೊಲೀಸರು, ಆರೋಪಿಗಳು ತೆರಳುತ್ತಿದ್ದ ವಾಹನವನ್ನು ಜೆಸಿಬಿಯಿಂದ ತಡೆದು ಬಂಧಿಸಿದ್ದರು. ಹೀಗಾಗಿ ಜೆಸಿಬಿ ಚಾಲಕ ಸಂಜು ಮೋಹಿತೆ ಸೇರಿ ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಸಚಿವ ಆರಗ ಜ್ಞಾನೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ | ಆಸ್ತಿ ಘೋಷಣೆ ಮಾಡಲು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಬಿಡುವೇ ಇಲ್ಲವಂತೆ!