ಬೆಂಗಳೂರು: ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಮುನ್ನುಡಿ ಬರೆದಿದ್ದ ರಮೇಶ್ ಜಾರಕಿಹೊಳಿ ಮುಂಬಯಿಗೆ ತೆರಳಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ರಮೇಶ್ ಜಾರಕಿಹೊಳಿ ಅವರ ಮುಂಬಯಿ ಪ್ರವಾಸ ಕುತೂಹಲಕ್ಕೀಡಾಗಿದೆ. ಮಹಾರಾಷ್ಟ್ರ ‘ಮಹಾ ವಿಕಾಸ್ ಅಘಾಡಿ’ ಸರ್ಕಾರ ಪತನದ ಅಂಚಿನಲ್ಲಿದ್ದು, ಫಡ್ನವೀಸ್ ಜತೆ ಸಹಕರಿಸಲು ರಮೇಶ್ ಜಾರಕಿಹೊಳಿ ತೆರಳಿದ್ದಾರೆ ಎನ್ನಲಾಗಿದೆ. ಕಳೆದ ಮೂರು ದಿನಗಳಿಂದ ರಮೇಶ್ ಜಾರಕಿಹೊಳಿ ಮುಂಬಯಿನಲ್ಲಿ ಇದ್ದಾರೆ.
ಆಪರೇಷನ್ ಕಮಲದಲ್ಲಿ ಭಾಗಿ?
ಮಹಾರಾಷ್ಟ್ರದಲ್ಲಿ ‘ಆಪರೇಷನ್ ಕಮಲ’ ಕಾರ್ಯಾಚರಣೆಯಲ್ಲಿ ರಮೇಶ್ ಜಾರಕಿಹೊಳಿ ಭಾಗಿಯಾಗಿರುವ ಶಂಕೆ ಇದೆ. ನಿನ್ನೆ ಮಧ್ಯಾಹ್ನವರೆಗೂ ದೇವೇಂದ್ರ ಫಡ್ನವಿಸ್ ಜತೆ ರಮೇಶ್ ಜಾರಕಿಹೊಳಿ ಸಕ್ರಿಯವಾಗಿದ್ದರು. ದೇವೇಂದ್ರ ಫಡ್ನವಿಸ್ ದೆಹಲಿಗೆ ತೆರಳಿದ ಬಳಿಕ ರಮೇಶ್ ಜಾರಕಿಹೊಳಿ ಮುಂಬಯಿನಲ್ಲೇ ಉಳಿದಿದ್ದಾರೆ. ಮಹಾರಾಷ್ಟ್ರ ರಾಜಕಾರಣಿಗಳ ಜತೆ ರಮೇಶ್ ಜಾರಕಿಹೊಳಿ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಂಡಾಯವೆದ್ದಿರುವ ಸಚಿವ ಶಿಂಧೆ, ಶಿವಸೇನಾ ಶಾಸಕರು ಗುಜರಾತ್‌ನಿಂದ ಅಸ್ಸಾಂಗೆ ಶಿಫ್ಟ್