Site icon Vistara News

Road Rage Case: ಕಾರಿನ ಬಾನೆಟ್‌ ಮೇಲೆ ಕ್ಯಾಬ್‌ ಡ್ರೈವರ್‌ನ 400 ಮೀ. ಎಳೆದೊಯ್ದ ವ್ಯಕ್ತಿ!

Car accident

ಬೆಂಗಳೂರು: ಅಪಘಾತ ಎಸಗಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬ ಕ್ಯಾಬ್ ಚಾಲಕನನ್ನು ತನ್ನ ಕಾರಿನ ಬಾನೆಟ್ ಮೇಲೆ ಸುಮಾರು 400 ಮೀಟರ್‌ ಎಳೆದೊಯ್ದ ಘಟನೆ (Road Rage Case) ನಗರದಲ್ಲಿ ನಡೆದಿದೆ. ಮಲ್ಲೇಶ್ವರದ 18ನೇ ಕ್ರಾಸ್​ನಲ್ಲಿ ಜ.15ರಂದು ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕ್ಯಾಬ್‌ ಚಾಲಕ ಅಶ್ವತ್ಥ್ ಎಂಬಾತನನ್ನು ಮೊಹಮ್ಮದ್ ಮುನೀರ್ ಎಂಬ ಕಾರು ಚಾಲಕ ಸುಮಾರು 400 ಮೀಟರುಗಳಷ್ಟು ದೂರ ಎಳೆದೊಯ್ದಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜನವರಿ 15ರಂದು ರಾತ್ರಿ 8 ಗಂಟೆಗೆ ಸ್ಯಾಂಕಿ ಕೆರೆ ಕಡೆಯಿಂದ ವಾಹನಗಳು ಬರುತ್ತಿದ್ದವು. ಮತ್ತೊಂದೆಡೆ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ವಾಹನಗಳು ತಿರುವು ಪಡೆದುಕೊಳ್ಳುತ್ತಿದ್ದವು. ಈ ವೇಳೆ ನಾ ಮುಂದು ತಾ ಮುಂದು ಅಂತ ಬಂದ ಬಂದ ವೇಳೆ ಎರಡು ಕಾರುಗಳ ನಡುವೆ ಸಣ್ಣ ಅಪಘಾತ ಸಂಭವಿಸಿದೆ.

ಆ ವೇಳೆ ಅಪಘಾತವೆಸಗಿದ ಇನ್ನೋವಾ ಕ್ರಿಸ್ಟಾ ಚಾಲಕ ಮೊಹಮ್ಮದ್ ಮುನೀರ್‌ನನ್ನು ಪ್ರಶ್ನೆ ಮಾಡಲು ಕ್ಯಾಬ್ ಚಾಲಕ ಅಶ್ವತ್ಥ್‌ ಕೆಳಗಿಳಿದು ಇನ್ನೋವಾಗೆ ಅಡ್ಡಲಾಗಿ ನಿಂತಿದ್ದಾನೆ. ಆಗಲೂ ಕಾರಿನಿಂದ ಕೆಳಗಿಳಿಯದ ಇನ್ನೋವಾ ಚಾಲಕ ಮೊಹಮ್ಮದ್ ಮುನೀರ್, ಕ್ಯಾಬ್ ಚಾಲಕನ ಮೇಲೆ ಕಾರು ಹರಿಸಲು ಮುಂದಾಗಿದ್ದಾನೆ. ಹೀಗಾಗಿ ಅಶ್ವತ್ಥ್ ಕಾರಿನ ಬಾನೆಟ್ ಮೇಲೆ ಜಂಪ್ ಮಾಡಿದ್ದಾನೆ. ಆದರೆ, ಆತನನ್ನು ಕಾರು ಚಾಲಕ ಸುಮಾರು 400 ಮೀಟರ್ ದೂರ ಎಳೆದೊಯ್ದಿದ್ದಾನೆ.

ಇದನ್ನೂ ಓದಿ | Murder Case : ದೀಪಿಕಾ ಕೊಲೆ ಕೇಸ್‌; ದುಡ್ಡು ಕೊಟ್ಟರೂ ಪೊಲೀಸರು ಕೆಲ್ಸ ಮಾಡಲಿಲ್ಲ!

ಬಾನೆಟ್ ಮೇಲೆ‌ ಮಲಗಿದ್ದ ಅಶ್ವತ್ಥ್‌ನನ್ನು ಕೆಳಗೆ ಬೀಳಿಸಿ, ಅಲ್ಲಿಂದ ಪರಾರಿಯಾಗಲು ಕಾರು ಚಾಲಕ ಯತ್ನಿಸಿದ್ದಾನೆ. ಆದರೆ, ಸಾರ್ವಜನಿಕರು ಕಾರಿನ್ನು ಬೆನ್ನಟ್ಟಿ ತಡೆದಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಮತ್ತು ಮಲ್ಲೇಶ್ವರ ಪೊಲೀಸರು, ಕಾರು ಚಾಲಕನನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಎನ್‌ಸಿಆರ್ ದಾಖಲಿಸಿಕೊಂಡಿರುವ ಮಲ್ಲೇಶ್ವರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಂಡೆ ಬ್ಲಾಸ್ಟ್‌ ವೇಳೆ ಅವಘಡ; ಸಿಡಿದು ಚೂರಾದ ಇಬ್ಬರು ಕಾರ್ಮಿಕರು

Stone Crusher Blast

ತುಮಕೂರು: ಕಲ್ಲು ಕ್ವಾರಿಯೊಂದರಲ್ಲಿ (Stone Crusher) ಭಾರಿ ಅವಘಡ ಸಂಭವಿಸಿ ಇಬ್ಬರು ಕಾರ್ಮಿಕರು ದಾರುಣವಾಗಿ ಮೃತಪಟ್ಟ (Two Labourers death) ಘಟನೆ ತುಮಕೂರು ತಾಲೂಕಿನ (Tumkur News) ಕೌತಮಾರನಹಳ್ಳಿಯ ಸಮೀಪ ನಡೆದಿದೆ. ಕೌತಮಾರನಹಳ್ಳಿ ಬಳಿಯಿರುವ ಕರ್ನಾಟಕ ಸ್ಟೋನ್ ಕ್ರಷರ್‌ನಲ್ಲಿ ಬಂಡೆ ಸ್ಫೋಟದ ವೇಳೆ (Blast in Stone Crusher) ಇಬ್ಬರು ಕಾರ್ಮಿಕರು ಮೃತಪಟ್ಟರೆ ಇನ್ನೊಬ್ಬನಿಗೆ ಗಂಭೀರವಾಗಿ ಗಾಯಗಳಾಗಿವೆ.

ಬಿಹಾರ ಮೂಲದ ಮೊಹಮ್ಮದ್ ಅಬೂಲ್ (29) ಹಾಗೂ ಛತ್ತೀಸ್‌ಗಢ ಮೂಲದ ಮೋನು (24) ಮೃತ ದುರ್ದೈವಿಗಳು. ತುಮಕೂರು ಮೂಲದ ಕೆ.ಎ.ಎಂ ಹನೀಫ್ ಎಂಬುವವರಿಗೆ ಸೇರಿದ ಕರ್ನಾಟಕ ಸ್ಟೋನ್ ಕ್ರಷರ್‌ನಲ್ಲಿ ಈ ದುರಂತ ನಡೆದಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಬಂಡೆ ಸ್ಫೋಟ ಮಾಡುವಾಗ ಅದು ಕಾರ್ಮಿಕರ ಬಳಿಯೇ ಸಿಡಿದು ದೇಹಗಳು ಛಿದ್ರ ಛಿದ್ರವಾಗಿವೆ.

ಕ್ರಷರ್ ಮಾಲೀಕನ ಬೇಜವಾಬ್ದಾರಿತನದಿಂದ ನಡೆದಿರುವ ಘಟನೆ ಇದಾಗಿದ್ದು, ಕಾರ್ಮಿಕರಿಗೆ ಯಾವುದೇ ಸುರಕ್ಷಿತ ಕ್ರಮಗಳನ್ನ ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ.

ಇದನ್ನೂ ಓದಿ | Drunk Driving Case: ಕುಡಿದು ಶಾಲಾ ವಾಹನ ಚಾಲನೆ; ಬೆಂಗಳೂರಲ್ಲಿ 16 ಚಾಲಕರ ವಿರುದ್ಧ ಕೇಸ್

ಗಾಯಾಳುವನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.

Exit mobile version