Site icon Vistara News

Theft Case: ರೈತನ ಎತ್ತಿನ ಗಾಡಿಗಳನ್ನೂ ಬಿಡಲಿಲ್ಲ ದುರುಳರು

bullock carts

ಗದಗ: ಬರಗಾಲದ‌ ಹಿನ್ನೆಲೆಯಲ್ಲಿ ಮಳೆಯಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಈ ನಡುವೆ ರೈತನ ಎರಡು ಎತ್ತಿನ ಗಾಡಿಗಳನ್ನು ಖದೀಮರು ಕಳ್ಳತನ ಮಾಡಿರುವ ಘಟನೆ (Theft Case) ಜಿಲ್ಲೆ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ ನಡೆದಿದೆ. ಮನೆ ಪಕ್ಕದಲ್ಲಿ ನಿಲ್ಲಿಸಿದ್ದ ಎತ್ತಿನ ಗಾಡಿಗಳನ್ನು ರಾತ್ರಿ ವೇಳೆ ಕಳ್ಳರು ಕಳ್ಳತನ ಮಾಡಿದ್ದು, ಘಟನೆಯು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಗ್ರಾಮದ ರುದ್ರಯ್ಯ ಹಾಗೂ ಅಡಿವೆಯ್ಯ ಕುರವತ್ತಿಮಠ ಎಂಬ ರೈತರಿ ಎತ್ತಿನ ಚಕ್ಕಡಿಗಳು ಕಳವಾಗಿವೆ. ಎರಡು ಬೈಕ್‌ನಲ್ಲಿ ಬಂದಿದ್ದ ನಾಲ್ವರು ಖದೀಮರು ಎತ್ತಿನಗಾಡಿಗಳನ್ನು ಎಳೆದೊಯ್ದಿದ್ದಾರೆ. ಬೈಕ್‌ನ ಹಿಂಬದಿ ಸವಾರ ಎತ್ತಿನ ಬಂಡಿ ನೊಗ ಹಿಡಿದು ಎಳೆದೊಯ್ಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಕ್ಕಡಿಗಳನ್ನು ಕದ್ದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ

ಇದನ್ನೂ ಓದಿ | Road Accident : ತ್ರಿಬಲ್‌ ರೈಡಿಂಗ್‌ ಬಂದು ಇನ್ನೋವಾಗೆ ಗುದ್ದಿದ ಬೈಕ್;‌ ಇಬ್ಬರು ಸ್ಪಾಟ್‌ ಡೆತ್‌

ಅಡುಗೆ ಎಣ್ಣೆ ತುಂಬಿದ ಲಾರಿ ಪಲ್ಟಿ; ಕ್ಯಾನ್‌ ಹಿಡಿದು ಮುಗಿಬಿದ್ದ ಜನರು

ವಿಜಯನಗರ: ಅಡುಗೆ ಎಣ್ಣೆ ತುಂಬಿದ ಲಾರಿ ಪಲ್ಟಿಯಾಗಿದ್ದು, ಎಣ್ಣೆ ತೆಗೆದುಕೊಂಡು ಹೋಗಲು ಜನ ಮುಗಿಬಿದ್ದಿದ್ದರು. ವಿಜಯನಗರದ ಕೂಡ್ಲಿಗಿಯ ಬಣವಿಕಲ್ಲು ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಘಟನೆ ಸಂಭವಿಸಿದೆ.

ಕೂಡ್ಲಿಗಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದಾಗ ರಾ.ಹೆ 50ರಲ್ಲಿ ಚಾಲಕ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದಿತ್ತು. ಅಪಘಾತವಾಗುತ್ತಿದ್ದ ಜಮಾಯಿಸಿ ಜನರು ಮನೆಗೆ ಓಡಿ ಹೋಗಿದ್ದರು. ಇವರ‍್ಯಾರು ಭಯಪಟ್ಟು ಹೋಗಿರಲಿಲ್ಲ ಬದಲಿಗೆ ಮನೆ ಮಂದಿಯೆಲ್ಲ ಕೊಡ, ಕ್ಯಾನ್‌ಗಳನ್ನು ಹಿಡಿದು ಬಂದಿದ್ದರು.

ಹೆದ್ದಾರಿ ಪಕ್ಕದಲ್ಲಿ ಹರಿದ ಅಪಾರ ಪ್ರಮಾಣದ ಅಡುಗೆ ಎಣ್ಣೆಯನ್ನು ತುಂಬಿಸಿಕೊಂಡು ಒಯ್ಯಲು ಮುಂದಾದರು. ಅದೃಷ್ಟವಶಾತ್ ಲಾರಿ ಚಾಲಕ, ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿದರು. ಈ ವೇಳೆ ಅಡುಗೆ ಎಣ್ಣೆ ತುಂಬಲು ಮುಂದಾಗಿದ್ದ ಜನರನ್ನು ಚದುರಿಸಲು ಹರಸಾಹಸ ಪಟ್ಟರು.

Exit mobile version