Site icon Vistara News

ಪತ್ನಿಯ ಸಹೋದರನಿಂದ ʼಲಗೋರಿʼ ಚಿತ್ರದ ನಟ ಸತೀಶ್ ಬರ್ಬರ ಹತ್ಯೆ

ಲಗೋರಿ ಚಿತ್ರದ ನಟ ಸತೀಶ್‌ ವಜ್ರ

ಬೆಂಗಳೂರು: ಸ್ಯಾಂಡಲ್‌ವುಡ್‌ನ ʼಲಗೋರಿʼ ಚಿತ್ರದ ನಟ ಮಂಡ್ಯ ಬಳಿಯ ಪಾಂಡವಪುರ ನಿವಾಸಿ ಸತೀಶ್‌ (30) ಬರ್ಬರವಾಗಿ ಹತ್ಯೆಯಾಗಿದ್ದಾರೆ. ಆರ್‌ ಆರ್‌ ನಗರ ಪಟ್ಟಣಕೆರೆಯಲ್ಲಿ ಹೆಂಡತಿಯ ಸಹೋದರನಿಂದಲೇ ಅವರು ಕೊಲೆಯಾಗಿದ್ದಾರೆ.

ಇದನ್ನೂ ಓದಿ | ಸ್ನಾನ ಮಾಡಲು, ಶೇವಿಂಗ್ ಮಾಡಲು ಮನಸ್ಸಾಗ್ತಿಲ್ಲ: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್‌

ಕೆಲ ದಿನಗಳ ಹಿಂದೆ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಇವರು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಇದೀಗ ಹೆಂಡತಿಯ ಸಹೋದರ ಮನೆಯಲ್ಲೇ ಸತೀಶ್‌ರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಸಹೋದರಿಯ ಆತ್ಮಹತ್ಯೆಗೆ ಸತೀಶನೇ ಕಾರಣ ಎಂಬ ಕಾರಣಕ್ಕೆ ಹತ್ಯೆ ನಡೆದಿರುವ ಸಾಧ್ಯತೆ ಇದೆ. ಘಟನಾ ಸ್ಥಳಕ್ಕೆ ಆರ್‌.ಆರ್‌ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಟನೆಯ ಜತೆ ಸತೀಶ್‌ ಸಲೂನ್ ನಡೆಸುತ್ತಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪತ್ನಿ ಐದು ದಿನಗಳ ಹಿಂದೆಯಷ್ಟೆ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ | ಪಂಡಿತರ ಹತ್ಯೆಯೂ ಗೋಸಾಗಾಟ ಗಾರರ ಮೇಲಿನ ಹಲ್ಲೆಯೂ ಒಂದೇ: ಸಾಯಿ ಪಲ್ಲವಿ ಹೇಳಿಕೆ ಸಮರ್ಥಿಸಿದ ರಮ್ಯಾ  

Exit mobile version