ಮಡಿಕೇರಿ: ವಾಹನವನ್ನು ಅಪಹರಿಸಿ 50 ಲಕ್ಷ ರೂ. ದರೋಡೆ (Robbery Case ) ಮಾಡಿದಲ್ಲದೆ ಇಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಪ್ರಕರಣ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ದೇವರಪುರದಲ್ಲಿ ಶನಿವಾರ ಮುಂಜಾನೆ 3 ಗಂಟೆಗೆ ವೇಳೆಗೆ ಘಟನೆ ನಡೆದಿದ್ದು. ಕೇರಳ ಮೂಲದ ಗುತ್ತಿಗೆದಾರ ಶಂಜ್ಜಾದ್ ಕೆ ಮತ್ತು ಅಫ್ನು ಎಂಬುವುರ ಹಲ್ಲೆಗೊಳಲಾಗಿದ್ದಾರೆ. ಅವರು ಮೈಸೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ವೇಳೆಯಲ್ಲಿ ದರೋಡೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದರೋಡೆಗೆ ಒಳಗಾದವರು ಕೇರಳದಿಂದ ಚಿನ್ನ ತಂದು ಮೈಸೂರಲ್ಲಿ ಮಾರಿ ಹಣದ ಸಮೇತ ಹಿಂತಿರುಗುತ್ತಿದ್ದರು. ಅವರು ಐಷಾರಾಮಿ ಮಿನಿ ಕೂಪರ್ ಕಾರಿನಲ್ಲಿ ವಾಪಸ್ ಹೋಗುತ್ತಿದ್ದರು. ದೇವರಪುರ ಬಳಿ ಅವರ ಕಾರಿಗೆ ಲಾರಿಯನ್ನು ಅಡ್ಡ ಇರಿಸಿ ನಿಲ್ಲಿಸಿದ್ದಾರೆ. ಬಳಿಕ ಅವರನ್ನು ಬೇರೆ ಕಾರಿಗೆ ಹತ್ತಿಸಿಕೊಂಡು ಅಪಹರಣ ಮಾಡಿದ್ದಾರೆ.
ಬೇರೆ ದರೋಡೆಕೋರರು ಅವರ ಮಿನಿ ಕೂಪರ್ ಕಾರನ್ನೂ ಜತೆಗೆ ತೆಗೆದುಕೊಂಡ ಹೋಗಿದ್ದಾರೆ. ಅರ್ಧದಲ್ಲಿ ತೋಟವೊಂದರ ಬಳಿ ಶಂಜ್ಜಾದ್ ಮತ್ತು ಅಫ್ನು ಬಿಟ್ಟು ದರೋಡೆಕೋರರು ಅಲ್ಲಿಂದ ತೆರಳಿದ್ದಾರೆ. ಅವರು ಆ ಬಳಿಕ ಮುಖ್ಯ ರಸ್ತೆ ಸೇರಿ ಪೊಲೀಸ್ ಠಾಣೆ ತಲುಪಿ ದೂರು ನೀಡಿದ್ದಾರೆ.
ಇದನ್ನೂ ಓದಿ : ವಾಟ್ಸಾಪ್ ಗ್ರೂಪಿನಿಂದ ತೆಗೆದಿದ್ದಕ್ಕೆ ಬಾಸ್ ಮೇಲೆ ಹಲ್ಲೆ ಮಾಡಿ, ಐಫೋನ್ ಒಡೆದ ನೌಕರ!
ಪೋಲಿಸರು ಹುಟುಕಾಟ ನಡೆಸಿದಾಗ ತೋಟಳ ನಡುವೆ ಅವರು ಕಾರು ಪತ್ತೆಯಾಗಿದೆ. ಆರೋಪಿಗಳು ಕಾರನ್ನು ಜಖಂಗೊಳಿಸಿ ಅದರಲ್ಲಿದ್ದ 50 ಲಕ್ಷ ರೂಪಾಯಿ ಕೊಂಡೊಯ್ದಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಐಜಿ ಡಾ.ಬೋರಲಿಂಗಯ್ಯ, ಎಸ್ಪಿ ಕೆ.ರಾಮರಾಜನ್ ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ. ಸಂಚಲನ ಸೃಷ್ಟಿಸಿದ ದರೋಡೆ ಪ್ರಕರಣ ಬೇಧಿಸಲು ವಿಶೇಷ ಮೂರು ತಂಡ ರಚನೆ ಮಾಡಲಾಗಿದೆ. ಕೊಡಗು ಜಿಲ್ಲೆಯ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ
ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಗುಂಡಿಗೆ ಬಿದ್ದು ನಾಲ್ವರು ದುರ್ಮರಣ ಹೊಂದಿದ ಘಟನೆ (Car Accident) ನಗರದ ಬೈಪಾಸ್ ಬಳಿಯ ಅಂಜನೇಯ ಸ್ವಾಮಿ ದೇವಾಲಯದ ಬಳಿ ನಡೆದಿದೆ. ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಅಂಡರ್ ಪಾಸ್‌ನಲ್ಲಿ ವೇಗವಾಗಿ ಬಂದು ಗುಂಡಿಯೊಳಗೆ ಬಿದ್ದಿದ್ದರಿಂದ ಕಾರಿನೊಳಗಿದ್ದ ನಾಲ್ವರು ಜಲಸಮಾಧಿಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಕಾರನ್ನು ಗುಂಡಿಯಿಂದ ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಮೃತರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಾರು ಹರಿದು ಅಯ್ಯಪ್ಪ ಮಾಲಾಧಾರಿ ಸಾವು, ಇಬ್ಬರಿಗೆ ಗಂಭೀರ ಗಾಯ
ಚಿಕ್ಕಬಳಾಪುರ: ಕಾರು ಹರಿದ ಪರಿಣಾಮ ಅಯ್ಯಪ್ಪಸ್ವಾಮಿ ಮಾಲಾಧಾರಿಯೊಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಬಳಿ ನಡೆದಿದೆ.
ಹಿಂದೂಪುರ ಮೂಲದ ಪ್ರಹ್ಲಾದ (36) ಮೃತರು. ಗಾಯಗೊಂಡ ಮಣಿಕಂಠ ಹಾಗು ವೆಂಕಟೇಶ್ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಹಿಂದೂಪುರದಿಂದ ಶಬರಿಮಲೆಗೆ ಪಾದಯಾತ್ರೆ ಮಾಡುತಿದ್ದ ವೇಳೆ ಕಾರು ಹರಿದಿದ್ದರಿಂದ ದುರಂತ ಸಂಭವಿಸಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.