ಧಾರವಾಡ: ನಗರದ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಕಳ್ಳತನ ಪ್ರಕರಣದಲ್ಲಿ (Theft Case) ಇಬ್ಬರು ಆರೋಪಿಗಳನ್ನು ಶಹರ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 31 ರಂದು ಸೊಸೈಟಿಯಲ್ಲಿ ಒಟ್ಟು 40 ಲಕ್ಷ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನ ಕಳ್ಳತನವಾಗಿತ್ತು.
ಸೊಸೈಟಿಯ ಹಳೇ ನೌಕರ ಯುವರಾಜ್ ರಾಮಪೂರ ಹಾಗೂ ವೈಷ್ಣವಿ ಬಂಧಿತರು. ಧಾರವಾಡ ಕೋರ್ಟ್ ವೃತ್ತದ ಬಳಿಯ ಬೀರೇಶ್ವರ ಕೋ ಆಪ್ ಕ್ರೆಡಿಟ್ ಬ್ಯಾಂಕ್‌ನಲ್ಲಿ ಡಿಸೆಂಬರ್ 31 ರಂದು ಕಳ್ಳನತವಾಗಿತ್ತು. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ.
ಇದನ್ನೂ ಓದಿ | Lokayukta Raid: 25 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಸಿಸ್ಟೆಂಟ್ ಎಂಜಿನಿಯರ್
ಯೂಟ್ಯೂಬ್ ವಿಡಿಯೊ ನೋಡಿ ಆರೋಪಿಗಳು ಕಳ್ಳತನ ಮಾಡಿದ್ದರು. ಕಳ್ಳತನ ಮಾಡಿ ಯಾವುದೇ ಸುಳಿವು ಬಿಟ್ಟಿರಲಿಲ್ಲ. ಆದರೂ ತನಿಖೆ ಮಾಡಿ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಯುವರಾಜ್ ಬೆಳಗಾವಿ ಮೂಲದವನಾಗಿದ್ದು, ಯಾವ ಕಾರಣಕ್ಕೆ ಕಳ್ಳತನ ಮಾಡಿದ್ದ ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಶಹರ ಪೊಲೀಸ್ ತಂಡದ ಜತೆ ವಿವಿಧ ಠಾಣೆ ಪೊಲೀಸರು ಇನ್ನು ಹಲವು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಸಿಬ್ಬಂದಿಗೆ 25 ಸಾವಿರ ರೂಪಾಯಿ ಬಹುಮಾನವನ್ನು ಹು-ಧಾ ನಗರ ಪೊಲೀಸ್ ಆಯುಕ್ತ ರಮಣ್ ಗುಪ್ತ ಘೋಷಣೆ ಮಾಡಿದ್ದಾರೆ.