Site icon Vistara News

Theft Case: ಸರ್ಕಾರಿ ಶಾಲೆಗೆ ಕನ್ನ ಹಾಕಿದ ಖದೀಮರು; ಅಂಗನವಾಡಿಯಲ್ಲಿದ್ದ ಸಿಲಿಂಡರ್‌, ದಿನಸಿ ಪದಾರ್ಥ ಕಳ್ಳತನ

Cylinders, groceries stolen from anganwadi in govt school

Cylinders, groceries stolen from anganwadi in govt school

ಮಂಡ್ಯ: ರಾತ್ರೋರಾತ್ರಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿಯಲ್ಲಿ ಖದೀಮರು ಕೈ ಚಳಕ (Theft Case) ತೋರಿದ್ದಾರೆ. ಕೃಷ್ಣರಾಜಪೇಟೆ ತಾಲೂಕಿನ ಚುಜ್ಜಲಕ್ಯಾತನಹಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಯ ಬೀಗ ಮುರಿದು ಗ್ಯಾಸ್ ಸಿಲಿಂಡರ್ ಹಾಗೂ ದಿನಸಿ ಪದಾರ್ಥಗಳನ್ನು ಕಳ್ಳತನ ಮಾಡಿದ್ದಾರೆ.

ಶಾಲೆಗೆ ಬಂದ ಶಿಕ್ಷಕರಿಗೆ ಶಾಕ್‌ ಕೊಟ್ಟ ಕಳ್ಳರು

ಕಳೆದ ಎಂಟು ತಿಂಗಳ ಹಿಂದೆಯೂ ಇದೇ ಅಂಗನವಾಡಿಯಲ್ಲಿ ಸಿಲಿಂಡರ್ ಕಳ್ಳತನವಾಗಿತ್ತು. ಇದೀಗ ಮತ್ತೆ ಅಂಗನವಾಡಿಯ ಬೀಗ ಮುರಿದು ಅಲ್ಲಿದ್ದ ಗ್ಯಾಸ್‌ ಸಿಲಿಂಡರ್‌ ಅನ್ನು ಮತ್ತೊಮ್ಮೆ ಕಳ್ಳತನ ಮಾಡಿದ್ದಾರೆ. ಯಾರೋ ತಿಳಿದವರಿಂದಲೇ ಈ ಕಳ್ಳತನ ಆಗಿರಬಹುದೆಂದು ಪೊಲೀಸರು ಅನುಮಾನಿಸಿದ್ದಾರೆ.

ಸಿಲಿಂಡರ್‌ ಕದ್ದು ಪರಾರಿ

ಇದನ್ನೂ ಓದಿ: Murder Case: ಜಾತ್ರೆಗಾಗಿ ಬಂದವಳನ್ನು ಚಾಕುವಿನಿಂದ ಇರಿದು ಕೊಂದ ಭಗ್ನ ಪ್ರೇಮಿ

ಗ್ಯಾಸ್‌, ದಿನಸಿ ಪದಾರ್ಥ ಕಳ್ಳತನವಾದ ಹಿನ್ನೆಲೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟಕ್ಕೆ ಯಾವುದೇ ತೊಂದರೆ ಆಗದಂತೆ ಬೇರೆ ವ್ಯವಸ್ಯೆಗೆ ಕ್ರಮವಹಿಸಲಾಗಿದೆ. ಈ ಸಂಬಂಧ ಕಿಕ್ಕೇರಿ ಪೋಲೀಸ್ ಠಾಣೆಗೆ ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ್ ದೂರು ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version