ಬೆಳಗಾವಿ: ಇಲ್ಲಿನ ಗೋಕಾಕ ನಗರದ ಲೋಕೋಪಯೋಗಿ ಇಲಾಖೆಯ ವಸತಿ ಪ್ರದೇಶದಲ್ಲಿರುವ ತಹಸೀಲ್ದಾರ್ ಮನೆಗೆ ಕಳ್ಳರು ಕನ್ನ (Theft Case) ಹಾಕಿದ್ದಾರೆ. ಗೋಕಾಕ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರ ಮನೆಯಲ್ಲಿ ಕಳ್ಳತನ ಆಗಿದ್ದು, ಸುಮಾರು 40 ತೊಲ ಚಿನ್ನ, 20 ಗ್ರಾಂ ಬೆಳ್ಳಿ, 5 ಸಾವಿರ ನಗದು ಎಗರಿಸಿ ಪರಾರಿ ಆಗಿದ್ದಾರೆ.
ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರು ಕೆಲಸದ ನಿಮಿತ್ತ ಮೈಸೂರಿಗೆ ಹೋಗಿದ್ದರು ಮನೆಯಲ್ಲಿ ಯಾರು ಇಲ್ಲದ್ದನ್ನು ಖಚಿತಪಡಿಸಿಕೊಂಡ ಖದೀಮರು ರಾತ್ರಿ ಮನೆ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನ ಕ್ಲೀನರ್ ಬಂದು ನೋಡಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆರಳಚ್ಚು ತಜ್ಞರು, ಗೋಕಾಕ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕನ ಜನತೆ ಆಗಾಗ ನಡೆಯುವ ಕಳ್ಳತನ ಪ್ರಕರಣಗಳಿಂದ ರೋಸಿ ಹೋಗಿದ್ದು, ಲೋಕೊಪಯೋಗಿ ವಸತಿ ಗೃಹದಲ್ಲಿ ಇರುವ ಗೋಕಾಕ ತಹಸೀಲ್ದಾರ್ ಮನೆಗೂ ಕಳ್ಳರು ಕನ್ನ ಹಾಕಿರುವುದು ಆತಂಕ ಹೆಚ್ಚಿಸಿದೆ..
ಇದನ್ನೂ ಓದಿ | Criminal politics | RTI ಕಾರ್ಯಕರ್ತನ ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದ ವ್ಯಕ್ತಿ ಜೆಡಿಎಸ್‌ಗೆ ಸೇರ್ಪಡೆ! ಜಮೀರ್ ವಿರುದ್ಧ ಕಣಕ್ಕೆ?