Site icon Vistara News

Theft Case | ಮಡ್ಲಕ್ಕಿ ಸೇವೆ ಅಂತಾ ಬರ್ತಾನೆ ಚಿನ್ನಾಭರಣ ಕದ್ದೊಯ್ತಾನೆ; ಟೆಂಪಲ್ ಕಳ್ಳ ಅರೆಸ್ಟ್!

Theft Case

ಬೆಂಗಳೂರು: ಇಲ್ಲೊಬ್ಬ ದೇವಸ್ಥಾನದಲ್ಲಿ ಕೈ-ಮುಗಿದು ಗಂಟೆ ಬಾರಿಸ್ದ ಅಂದ್ರೆ ಮುಗೀತು, ಆ ದೇವಸ್ಥಾನಕ್ಕೆ ಕಂಟಕ ಎದುರಾಯ್ತು ಅಂತಲೇ ಲೆಕ್ಕ. ಖತರ್ನಾಕ್‌ ಕಳ್ಳನೊಬ್ಬ (Theft Case) ಮಂಡಕ್ಕಿ ಸೇವೆ ಎಂದು ಬಂದು ದೇವಸ್ಥಾನದಲ್ಲಿ ಚಿನ್ನಾಭರಣ ದೋಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶ್ರೀರಾಂಪುರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಯಡೆಯೂರಿನ ಕಲ್ಲೇಶ ಎಂಬ ಆರೋಪಿ ಪೂಜೆಯ ನೆಪದಲ್ಲಿ ಬಂದು ಪೂಜಾರಿಗೆ ಗೊತ್ತಿಲ್ಲದ ಹಾಗೆ ದೇವರ ಆಭರಣ ಹೊತ್ತೊಯ್ದಿದ್ದಾನೆ. ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಷ್ಟೇ ಅಲ್ಲದೇ ಮಾಗಡಿಯ ಕನ್ನಿಕಾ ಪರಮೇಶ್ವರಿ, ಹೆಣ್ಣೂರು, ಕೆಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲೂ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಭಕ್ತಾದಿಗಳು ಕಡಿಮೆ ಇರುವ ಸಮಯದಲ್ಲಿ ಪೂಜಾರಿಗೆ ಅರ್ಚನೆ, ಮಡ್ಲಕ್ಕಿ ಸೇವೆ ಎಂದು ನಂಬಿಸಿ ಕಳ್ಳ ತನ್ನ ಕೈ ಚಳಕ ತೋರಿಸುತ್ತಿದ್ದ.

ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ, ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಇದೀಗ ಆರೋಪಿ ಕಲ್ಲೇಶನನ್ನು ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಬಂಧಿತನಿಂದ ಪೊಲೀಸರು 130 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ | ಕನ್ನ ಹಾಕುವುದು ಹೇಗೆಂದು ಯೂಟ್ಯೂಬ್‌ನಲ್ಲಿ ಕಲಿತು ಕಳವು ಮಾಡಿದವ ಅರೆಸ್ಟ್‌ !

Exit mobile version