Site icon Vistara News

Theft Case: ಕಳ್ಳನ ಜತೆ ಗಿರವಿ ಮಾಲೀಕನ ಗೆಳೆತನ; ಕಿರಿಕ್‌ ಮಾಡಿದವನನ್ನು ಹೊತ್ತೊಯ್ದ ಪೊಲೀಸರು

#image_title

ಬೆಂಗಳೂರು: ಇಲ್ಲಿನ ಡಿಜೆ ಹಳ್ಳಿಯ ಪಿಳ್ಳಪ್ಪ ಗಾರ್ಡನ್‌ನಲ್ಲಿರುವ ಪೂಜಾ ಬ್ಯಾಂಕರ್ಸ್‌ನಲ್ಲಿ (Theft Case) ಹೈ ಡ್ರಾಮಾ ನಡೆಯಿತು. ಗಿರವಿ ಅಂಗಡಿ ಮಾಲೀಕನನ್ನು ಪೊಲೀಸರು ಹೊತ್ತೊಯ್ಯುತ್ತಿದ್ದರೆ, ಕಾಪಾಡಿ ಎಂದು ಸಂಬಂಧಿಕರು ಬೊಬ್ಬೆ ಹೊಡೆದಿದ್ದರು. ಇದೆಲ್ಲವನ್ನೂ ದೂರದಿಂದ ನೋಡುತ್ತಿದ್ದವರಿಗೆ ಏನಿದು ಪೊಲೀಸರ ದೌರ್ಜನ್ಯವೆಂದು ಅನ್ನಿಸಬಹುದು. ಆದರೆ, ಅಸಲಿ ಕಥೆ ಬೇರೆಯೇ ನಡೆದಿತ್ತು.

ಇತ್ತೀಚೆಗೆ ವಿವೇಕ್ ನಗರ ಪೊಲೀಸರು ಶ್ರೀನಿವಾಸ ಅಲಿಯಾಸ್ ಅಪ್ಪು ಎಂಬಾತನನ್ನು ಮನೆಗಳ್ಳತನ ಕೇಸ್‌ನಲ್ಲಿ ಬಂಧಿಸಿದ್ದರು. ಈ ವೇಳೆ ಆರೋಪಿ ಐದು ಮನೆಗೆ ಕನ್ನ ಹಾಕಿದ್ದಾಗಿ ಒಪ್ಪಿಕೊಂಡಿದ್ದ. ಜತೆಗೆ ಕದ್ದ ಆಭರಣಗಳನ್ನು ಹತ್ತಾರು ಕಡೆ ಅಡವಿಟ್ಟಿರುವುದಾಗಿ ಹೇಳಿದ್ದ.

ಅದರಂತೆ ತನಿಖೆ ಆರಂಭಿಸಿದ ಪೊಲೀಸರಿಗೆ ಬವರ್ ಲಾಲ್‌ ಎಂಬಾತನ ಗಿರವಿ ಅಂಗಡಿಯಲ್ಲೂ ಆರೋಪಿ 54 ಗ್ರಾಂನಷ್ಟು ಚಿನ್ನವನ್ನು ಅಡವಿಟ್ಟಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ಬವರ್‌ ಲಾಲ್‌ಗೆ ಎರಡು ಬಾರಿ ನೋಟಿಸ್ ನೀಡಿದ್ದರೂ ಕ್ಯಾರೆ ಎಂದಿರಲಿಲ್ಲ.

ಇದನ್ನೂ ಓದಿ: Actress Bhanupriya: ‘ಸಿಂಹಾದ್ರಿಯ ಸಿಂಹ’ ಖ್ಯಾತಿಯ ನಟಿ ಭಾನುಪ್ರಿಯಾಗೆ ಮರೆವಿನ ಕಾಯಿಲೆ, ಪತಿ ಅಗಲಿಕೆ ಬಳಿಕ ಏನಾಯ್ತು?

ಹೀಗಾಗಿ ಭಾನುವಾರ ನೇರವಾಗಿ ಗಿರವಿ ಅಂಗಡಿಗೆ ಬಂದ ಪೊಲೀಸರು ಅಡವಿಟ್ಟಿರುವ ಬಗ್ಗೆ ಕೇಳಿದ್ದರೆ, ಈ ವೇಳೆ ʻಮೇರೆ ಕೋ ಮಾಲುಮ್ ನಹೀʼ ಎಂದು ಉಡಾಫೆ ಉತ್ತರವನ್ನು ಕೊಟ್ಟು ಕೂತಿದ್ದ. ವಿವೇಕನಗರ ಪೊಲೀಸರು ಮಹಜರು ಕಾಪಿ ಹಿಡಿದು ಬವರ್ ಲಾಲ್ ಬಳಿ ಬಂದು ಚಿನ್ನಾಭರಣ ರಿಕವರಿ ಮಾಡಲು ಬಂದಾಗ ಕಿರಿಕ್ ತೆಗೆಯಲಾಗಿದೆ. ಪರಿ ಪರಿಯಾಗಿ ಕೇಳಿಕೊಂಡರೂ, ಆಭರಣ ನೀಡಲು ಹಠ ಮಾಡಿ ಮೊಂಡಾಟ ಮಾಡುತ್ತಿದ್ದಾಗ, ಬವರ್ ಲಾಲ್‌ನನ್ನು ಕುಳಿತಲ್ಲಿಂದಲೇ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬಂಧಿಸಲಾಗಿದೆ. ಜತೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಪೊಲೀಸರು ಜೈಲಿಗೆ ಕಳಿಸಿದ್ದಾರೆ.

Exit mobile version