Theft Case: ಕಳ್ಳನ ಜತೆ ಗಿರವಿ ಮಾಲೀಕನ ಗೆಳೆತನ; ಕಿರಿಕ್‌ ಮಾಡಿದವನನ್ನು ಹೊತ್ತೊಯ್ದ ಪೊಲೀಸರು - Vistara News

ಕರ್ನಾಟಕ

Theft Case: ಕಳ್ಳನ ಜತೆ ಗಿರವಿ ಮಾಲೀಕನ ಗೆಳೆತನ; ಕಿರಿಕ್‌ ಮಾಡಿದವನನ್ನು ಹೊತ್ತೊಯ್ದ ಪೊಲೀಸರು

Theft Case: ಕಳವು ಮಾಡಿದ ಬಂಗಾರ ಕಡಿಮೆ ಹಣಕ್ಕೆ ಸಿಕ್ಕಿತೆಂದು ಗಿರವಿ ಅಂಗಡಿ ಮಾಲೀಕ ಚಿನ್ನ ಖರೀದಿ ಮಾಡಿದ್ದ. ಆದರೆ ಖಾಕಿ ಖೆಡ್ಡಾಕ್ಕೆ ಬಿದ್ದ ಕಳ್ಳ ಅಡವಿಟ್ಟಿದ್ದನ್ನು ಬಾಯಿಬಿಟ್ಟಿದ್ದ. ಕಳವು ಮಾಲು ವಾಪಸ್‌ ನೀಡುವಂತೆ ಕೇಳಿಕೊಂಡರೂ ಸ್ಪಂದಿಸದಿದ್ದರಿಂದ ಪೊಲೀಸರು ಆತನನ್ನು ಹೊತ್ತೊಯ್ದ ಘಟನೆ ನಡೆದಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇಲ್ಲಿನ ಡಿಜೆ ಹಳ್ಳಿಯ ಪಿಳ್ಳಪ್ಪ ಗಾರ್ಡನ್‌ನಲ್ಲಿರುವ ಪೂಜಾ ಬ್ಯಾಂಕರ್ಸ್‌ನಲ್ಲಿ (Theft Case) ಹೈ ಡ್ರಾಮಾ ನಡೆಯಿತು. ಗಿರವಿ ಅಂಗಡಿ ಮಾಲೀಕನನ್ನು ಪೊಲೀಸರು ಹೊತ್ತೊಯ್ಯುತ್ತಿದ್ದರೆ, ಕಾಪಾಡಿ ಎಂದು ಸಂಬಂಧಿಕರು ಬೊಬ್ಬೆ ಹೊಡೆದಿದ್ದರು. ಇದೆಲ್ಲವನ್ನೂ ದೂರದಿಂದ ನೋಡುತ್ತಿದ್ದವರಿಗೆ ಏನಿದು ಪೊಲೀಸರ ದೌರ್ಜನ್ಯವೆಂದು ಅನ್ನಿಸಬಹುದು. ಆದರೆ, ಅಸಲಿ ಕಥೆ ಬೇರೆಯೇ ನಡೆದಿತ್ತು.

ಇತ್ತೀಚೆಗೆ ವಿವೇಕ್ ನಗರ ಪೊಲೀಸರು ಶ್ರೀನಿವಾಸ ಅಲಿಯಾಸ್ ಅಪ್ಪು ಎಂಬಾತನನ್ನು ಮನೆಗಳ್ಳತನ ಕೇಸ್‌ನಲ್ಲಿ ಬಂಧಿಸಿದ್ದರು. ಈ ವೇಳೆ ಆರೋಪಿ ಐದು ಮನೆಗೆ ಕನ್ನ ಹಾಕಿದ್ದಾಗಿ ಒಪ್ಪಿಕೊಂಡಿದ್ದ. ಜತೆಗೆ ಕದ್ದ ಆಭರಣಗಳನ್ನು ಹತ್ತಾರು ಕಡೆ ಅಡವಿಟ್ಟಿರುವುದಾಗಿ ಹೇಳಿದ್ದ.

ಅದರಂತೆ ತನಿಖೆ ಆರಂಭಿಸಿದ ಪೊಲೀಸರಿಗೆ ಬವರ್ ಲಾಲ್‌ ಎಂಬಾತನ ಗಿರವಿ ಅಂಗಡಿಯಲ್ಲೂ ಆರೋಪಿ 54 ಗ್ರಾಂನಷ್ಟು ಚಿನ್ನವನ್ನು ಅಡವಿಟ್ಟಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ಬವರ್‌ ಲಾಲ್‌ಗೆ ಎರಡು ಬಾರಿ ನೋಟಿಸ್ ನೀಡಿದ್ದರೂ ಕ್ಯಾರೆ ಎಂದಿರಲಿಲ್ಲ.

ಇದನ್ನೂ ಓದಿ: Actress Bhanupriya: ‘ಸಿಂಹಾದ್ರಿಯ ಸಿಂಹ’ ಖ್ಯಾತಿಯ ನಟಿ ಭಾನುಪ್ರಿಯಾಗೆ ಮರೆವಿನ ಕಾಯಿಲೆ, ಪತಿ ಅಗಲಿಕೆ ಬಳಿಕ ಏನಾಯ್ತು?

ಹೀಗಾಗಿ ಭಾನುವಾರ ನೇರವಾಗಿ ಗಿರವಿ ಅಂಗಡಿಗೆ ಬಂದ ಪೊಲೀಸರು ಅಡವಿಟ್ಟಿರುವ ಬಗ್ಗೆ ಕೇಳಿದ್ದರೆ, ಈ ವೇಳೆ ʻಮೇರೆ ಕೋ ಮಾಲುಮ್ ನಹೀʼ ಎಂದು ಉಡಾಫೆ ಉತ್ತರವನ್ನು ಕೊಟ್ಟು ಕೂತಿದ್ದ. ವಿವೇಕನಗರ ಪೊಲೀಸರು ಮಹಜರು ಕಾಪಿ ಹಿಡಿದು ಬವರ್ ಲಾಲ್ ಬಳಿ ಬಂದು ಚಿನ್ನಾಭರಣ ರಿಕವರಿ ಮಾಡಲು ಬಂದಾಗ ಕಿರಿಕ್ ತೆಗೆಯಲಾಗಿದೆ. ಪರಿ ಪರಿಯಾಗಿ ಕೇಳಿಕೊಂಡರೂ, ಆಭರಣ ನೀಡಲು ಹಠ ಮಾಡಿ ಮೊಂಡಾಟ ಮಾಡುತ್ತಿದ್ದಾಗ, ಬವರ್ ಲಾಲ್‌ನನ್ನು ಕುಳಿತಲ್ಲಿಂದಲೇ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬಂಧಿಸಲಾಗಿದೆ. ಜತೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಪೊಲೀಸರು ಜೈಲಿಗೆ ಕಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Namma Metro: ಮೆಟ್ರೋಗೆ ಕನೆಕ್ಟ್‌ ಆಗಲಿದೆ ನಮ್ಮ ಯಾತ್ರಿ; ಇನ್ಮುಂದೆ ಆಟೋ ಹಿಡಿಯೋ ಟೆನ್ಷನ್‌ ಇಲ್ಲ

Namma Yatri: ಬೆಂಗಳೂರಿನಲ್ಲಿ ಈಗಾಗಲೇ ಆಟೋ ಸೇವೆ ಮೂಲಕ ಜನಪ್ರಿಯವಾಗಿರುವ ನಮ್ಮ ಯಾತ್ರಿ ಸಂಸ್ಥೆ, ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ (Namma Metro) ಬಿಎಂಆರ್‌ಸಿಎಲ್ ( BMRCL) ಜತೆಗೆ ಕೈ ಜೋಡಿಸಲು ಮುಂದಾಗುತ್ತಿದೆ.

VISTARANEWS.COM


on

By

Namma Metro
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ (Namma Metro) ಇಳಿದು ಸ್ಟೇಷನ್‌ನಿಂದ (Metro Station) ಹೊರ ಬಂದ ಕೂಡಲೇ ಆಟೋ ಹಿಡಿಯೋದು ದೊಡ್ಡ ಸಮಸ್ಯೆ. ಯಾಕೆಂದರೆ ಕೆಲ ಚಾಲಕರು ಬರಲ್ಲ ಅನ್ನೋದು, ಕೆಲವರು ಜಾಸ್ತಿ ರೇಟು ಕೇಳೋದು ಮೊದಲಾದ ಸಮಸ್ಯೆಗಳನ್ನು ಮೆಟ್ರೋ ಪ್ರಯಾಣಿಕರು ಅನುಭವಿಸುತ್ತಲೇ ಇರುತ್ತಾರೆ. ಮೆಟ್ರೋ ಫೀಡರ್‌ ಬಸ್‌ಗಳು ಇದ್ದರೂ, ಪ್ರಯಾಣಿಕರು ತಾವು ತಲುಪಬೇಕಾದ ಜಾಗಕ್ಕೆ ಹೋಗಲು ಆಗದೆ ಹೆಚ್ಚು ಹಣ ಕೊಟ್ಟು ಆಟೋದಲ್ಲೇ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಮೆಟ್ರೋ ಮಿತ್ರ ಇದ್ದರೂ ಅದು ಹಲವು ದೋಷದಿಂದ ಸೈಡ್‌ಲೈನ್‌ ಆಗಿದೆ. ಸದ್ಯ ಈ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲೆ ಪರಿಹಾರ ಸಿಗಲಿದೆ. ಯಾಕೆಂದರೆ ಬೆಂಗಳೂರಿನಲ್ಲಿ ಈಗಾಗಲೇ ಹೆಸರು ಮಾಡಿರುವ ‘ನಮ್ಮ ಯಾತ್ರಿ’ (Namma yatri) ಸಂಸ್ಥೆ ಶೀಘ್ರದಲ್ಲೇ ನಮ್ಮ ಮೆಟ್ರೋ (BMRCL) ಜತೆಗೆ ಒಪ್ಪಂದಕ್ಕೆ ಸಹಿ ಹಾಕಲಿದೆ.

ಮೆಟ್ರೋ ಪ್ರಯಾಣಿಕರಿಗಾಗಿ ಪ್ರಾಯೋಗಿಕ ಅಪ್ಲಿಕೇಶನ್ ಆಧಾರಿತ ಆಟೋ ರಿಕ್ಷಾ ಸೇವೆಯನ್ನು ಪ್ರಾರಂಭಿಸಲಿದೆ. ಮೆಟ್ರೋ ರೈಲು ನಿಲ್ದಾಣಗಳಿಗೆ ಕೊನೆಯ ಮೈಲಿ ಸಂಪರ್ಕ ಸೌಲಭ್ಯ ಕಲ್ಪಿಸಲು ನಮ್ಮ ಯಾತ್ರಿಯಿಂದ ಆಟೋರಿಕ್ಷಾ ಸೇವೆಗಳನ್ನು ಒದಗಿಸಲಾಗುತ್ತದೆ. ಮೆಟ್ರೋ ಪ್ರಯಾಣಿಕರಿಗಾಗಿ ಪ್ರಾಯೋಗಿಕ ಅಪ್ಲಿಕೇಶನ್ ಆಧಾರಿತ ಆಟೋ-ರಿಕ್ಷಾ ಸೇವೆಯನ್ನು ಪ್ರಾರಂಭಿಸಲು ನಮ್ಮ ಯಾತ್ರಿ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಬಿಎಂಆರ್‌ಸಿಎಲ್ ಕೈಜೋಡಿಸಿದೆ. ಮೆಟ್ರೋ ಪ್ರಯಾಣಿಕರಿಗಾಗಿ ಸುರಕ್ಷಿತ, ಕೈಗೆಟುಕುವ ಬೆಲೆಯಲ್ಲಿ ಸೇವೆ ನೀಡಲು ಯೋಜನೆ ರೂಪಿಸುತ್ತಿದೆ.

ಮೂವಿಂಗ್ ಟೆಕ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿರುವ ನಮ್ಮ ಯಾತ್ರಿ, ಮೇ ಅಂತ್ಯದ ವೇಳೆಗೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಚಿಂತಿಸುತ್ತಿದೆ. ಈ ಸೇವೆಯು ಆಟೋ ರಿಕ್ಷಾ ಚಾಲಕರು ‘ಕ್ಯೂ’ ವ್ಯವಸ್ಥೆಯನ್ನು ಬಳಸಿಕೊಂಡು ಮೆಟ್ರೋ ನಿಲ್ದಾಣಗಳಿಂದ ಸೇವೆ ನೀಡುತ್ತಾರೆ. ಸರದಿಯಲ್ಲಿ ಯಾವುದೇ ಗ್ರಾಹಕರು ಇಲ್ಲದಿದ್ದರೆ, ಚಾಲಕರು ಸಾಮಾನ್ಯ ರೈಡ್ ಕೂಡ ತೆಗೆದುಕೊಳ್ಳಬಹುದು.

ಮೊದಲ ಪ್ರಯೋಗವನ್ನು ಇಂದಿರಾ ನಗರ ಮೆಟ್ರೋ ಸ್ಟೇಷನ್‌ನಲ್ಲಿ ನಡೆಯಲಿದೆ. ಇಂದಿರಾನಗರ ಮೆಟ್ರೊ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಮತ್ತು ಸೇವೆಯನ್ನು ಪ್ರಾರಂಭಿಸಲು ನಮ್ಮ ಯಾತ್ರಿ ಬಿಎಂಆರ್‌ಸಿಎಲ್‌ಗೆ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ. ಯಶಸ್ಸಿನ ಆಧಾರದ ಮೇಲೆ ಈ ಸೌಲಭ್ಯವನ್ನು ಇತರ ಮೆಟ್ರೋ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Road Accident : ಬಸ್ ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆ; ಚಕ್ರಕ್ಕೆ ಸಿಲುಕಿ ಸಾವು

ಕಳೆದ ವರ್ಷ, ಆಟೋ ರಿಕ್ಷಾ ಚಾಲಕರ ಒಕ್ಕೂಟವು ಲಾಸ್ಟ್ ಮೈಲಿ ಸಂಪರ್ಕ ಸಮಸ್ಯೆಗಳನ್ನು ಪರಿಹರಿಸಲು ಮೆಟ್ರೋ ಮಿತ್ರವನ್ನು ಪ್ರಾರಂಭಿಸಿತು. ಆದರೆ ಸಾಕಷ್ಟು ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸಿತು. ನಮ್ಮ ಯಾತ್ರಿ ಸೇವೆ ವಿಭಿನ್ನವಾಗಿದ್ದು ಯಶಸ್ವಿಯಾಗುವ ನಿರೀಕ್ಷೆ ಇದೆ ಎಂದರು.

ನಿತ್ಯಾ 40 ಲಕ್ಷ ಮಂದಿ ನಮ್ಮ ಮೆಟ್ರೋಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ, 134 ಮೆಟ್ರೋ ಫೀಡರ್ ಬಸ್‌ಗಳಲ್ಲಿ 76,000 ಪ್ರಯಾಣಿಕರು ಮಾತ್ರ ಬಳಸುತ್ತಾರೆ. ಸಾಮಾನ್ಯವಾಗಿ ಆಟೋ ರಿಕ್ಷಾ ಚಾಲಕರು ಕಡಿಮೆ ದೂರಕ್ಕೆ ಹೆಚ್ಚಿನ ದರ ವಿಧಿಸುವುದರಿಂದ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಾರೆ. ಹಿಂದಿನ ಪ್ರಿಪೇಯ್ಡ್ ಆಟೋ ಸೇವೆಗಳು ಹೆಚ್ಚು ಜನಪ್ರಿಯವಾಗದಿರಲು ಇದು ಕೂಡ ಒಂದು ಕಾರಣ. ಹೀಗಾಗಿ ‘ನಮ್ಮ ಯಾತ್ರಿ’ ಜತೆಗೆ ಮೆಟ್ರೋ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಮುಂದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆಹಾರ/ಅಡುಗೆ

Famous Food of Bangalore: ಬೆಂಗಳೂರಿಗೆ ಬಂದಾಗ ಈ ಖಾದ್ಯಗಳ ರುಚಿ ನೋಡಲು ಮರೆಯಬೇಡಿ!

Famous Food of bangalore: ಬೆಂಗಳೂರಿಗೆ ಹೋಗುವ ಪ್ಲ್ಯಾನ್ ಇದ್ದರೆ ಇಲ್ಲಿನ ಕೆಲವು ರುಚಿಕರವಾದ ಖಾದ್ಯವನ್ನು ಸವಿಯಲು ಮರೆಯದಿರಿ. ಹಾಗೆಯೇ ಈ ಖಾದ್ಯಗಳನ್ನು ಮನೆಯಲ್ಲೂ ತಯಾರಿಸಬಹುದು. ಆಹಾರ ಪ್ರಿಯರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

Famous Food of bangalore
Koo

ಇಡ್ಲಿ (Idli), ದೋಸೆ (dose), ವಿವಿಧ ಬಗೆಯ (Famous Food of Bangalore) ರೈಸ್, ಮೈಸೂರು ಪಾಕ್ (mysore pak) ಸೇರಿದಂತೆ ವಿವಿಧ ಸಿಹಿ ತಿನಿಸುಗಳು ಎಂಥವರ ಬಾಯಲ್ಲೂ ನೀರೂರುವಂತೆ ಮಾಡುತ್ತದೆ. ದಕ್ಷಿಣ ಭಾರತೀಯ (south india) ಪಾಕಪದ್ಧತಿಯು ಸುವಾಸನೆ ಮತ್ತು ವಿವಿಧ ರೆಸಿಪಿಗಳ ರುಚಿಕರ ಸವಿಯಿಂದ ತುಂಬಿರುತ್ತದೆ. ಕರಿಬೇವಿನ ಎಲೆಗಳು, ಹುಣಸೆಹಣ್ಣು, ಹಸಿರು ಮತ್ತು ಕೆಂಪು ಮೆಣಸಿನಕಾಯಿ, ತೆಂಗಿನ ಹಾಲು, ಕರಿಮೆಣಸು ಹೀಗೆ ಬಗೆಬಗೆಯ ಮಸಾಲೆಗಳು ಮತ್ತು ಗಿಡಮೂಲಿಕೆಗಳೊಂದಿಗೆ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತದೆ.

ಬೆಂಗಳೂರಿಗೆ (bengaluru) ಪ್ರಯಾಣ ಮಾಡುವ ಯೋಜನೆ ಇದ್ದರೆ ಇಲ್ಲಿನ ಕೆಲವೊಂದು ಖಾದ್ಯಗಳ (Best dish) ಸವಿಯನ್ನು ನೀವು ಪಡೆಯದೇ ಇದ್ದರೆ ಖಂಡಿತ ನಿಮ್ಮ ಪ್ರಯಾಣ ಪೂರ್ತಿ ಅಲ್ಲ. ಅಂತಹ ಖಾದ್ಯಗಳು ಯಾವುದು ಗೊತ್ತೇ? ಇಲ್ಲಿದೆ ಮಾಹಿತಿ.


ಮಂಗಳೂರು ಬಜ್ಜಿ

ಕರ್ನಾಟಕದ ಪ್ರಸಿದ್ಧ ಖಾದ್ಯಗಳು ಬೀದಿಯ ಮೂಲೆ ಮೂಲೆಯಲ್ಲಿ ಕಂಡುಬರುತ್ತದೆ. ಮಂಗಳೂರು ಬಜ್ಜಿಯನ್ನು ಅಧಿಕೃತ ಮಸಾಲೆಗಳು ಮತ್ತು ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ. ಈ ಜನಪ್ರಿಯ ಆಹಾರವನ್ನು ನೀವು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಬೆಂಗಳೂರಿನ ಮಂಗಳೂರು ಮೂಲದ ಹೋಟೆಲ್‌ಗಳಲ್ಲಿ ಈ ಬಜ್ಜಿ ಚೆನ್ನಾಗಿರುತ್ತದೆ.

ಹುಳಿ ಮೊಸರಿಗೆ ಅಕ್ಕಿ ಹಿಟ್ಟು ಮತ್ತು ಮೈದಾವನ್ನು ಬೆರೆಸುವ ಮೂಲಕ ಕರಿಬೇವು, ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ, ಸಕ್ಕರೆ, ನೀರು ಮತ್ತು ಬೇಕಿಂಗ್ ಪೌಡರ್ ಹಾಕಿ. 2 ಗಂಟೆಗಳ ಕಾಲ ಹಿಟ್ಟನ್ನು ಸಿದ್ಧಪಡಿಸಿ ಇಟ್ಟು ಬಳಿಕ ಗೋಲಿ ಬಜೆಯನ್ನು ಎಣ್ಣೆಯಲ್ಲಿ ಗರಿಗರಿಯಾಗಿ ಕೆಂಪು ಬಣ್ಣ ಬರುವವರೆಗೆ ಕರಿಯಿರಿ. ಸುವಾಸನೆಯ ರುಚಿಗಾಗಿ ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿ.


ಬಿಸಿ ಬೇಳೆ ಬಾತ್

ಈ ಜನಪ್ರಿಯ ದಕ್ಷಿಣ-ಭಾರತೀಯ ಖಾದ್ಯವು ಇತರ ಭಕ್ಷ್ಯಗಳಂತೆ ಅಲ್ಲ. ಹಲವಾರು ದಕ್ಷಿಣ-ಭಾರತೀಯ ರೆಸ್ಟೋರೆಂಟ್ ಗಳಲ್ಲಿ ಮತ್ತು ರಾಜ್ಯದ ಹೊರಗೂ ಲಭ್ಯವಿದೆ. ಈ ಅಧಿಕೃತ ರೆಸಿಪಿ ನಿಜವಾಗಿಯೂ ಕರ್ನಾಟಕದ ವಿಶೇಷತೆಯಾಗಿದೆ. ಕರ್ನಾಟಕ ಶೈಲಿಯ ಬಿಸಿ ಬೇಳೆ ಬಾತ್ ಅನ್ನು ನೀವು ಮನೆಯಲ್ಲಿಯೂ ಪ್ರಯತ್ನಿಸಬಹುದು. ಬೆಂಗಳೂರಿನ ಬಹುತೇಕ ಹೋಟೆಲ್‌ಗಳಲ್ಲಿ ಇದು ಮುಖ್ಯ ಆಹಾರ.

ಅಕ್ಕಿ ಮತ್ತು ಕಡಲೆಕಾಯಿಯನ್ನು 25 ನಿಮಿಷಗಳ ಕಾಲ ನೆನೆಸಿ ಅನಂತರ ಉಪ್ಪು ಸೇರಿಸಿ. ಅಕ್ಕಿ ಮತ್ತು ಕಡಲೆಕಾಯಿಯನ್ನು ಬೇಯಿಸಿ ಮತ್ತು ಅವುಗಳನ್ನು ಪಕ್ಕಕ್ಕೆ ಇರಿಸಿ. ಮುಂದೆ, ಹುಣಸೆಹಣ್ಣನ್ನು ನೆನೆಸಿ ಮತ್ತು ಅದರ ತಿರುಳನ್ನು ಹೊರತೆಗೆಯಿರಿ. ಪ್ರೆಶರ್ ಕುಕ್ ನಲ್ಲಿ ತೊಗರಿ ಬೆಳೆ, ಅರಿಶಿನ ಪುಡಿ ಮತ್ತು ನೀರು, ಎಲ್ಲಾ ಕತ್ತರಿಸಿದ ತರಕಾರಿಗಳು ಮತ್ತು ಉಪ್ಪನ್ನು ಬೆರೆಸಿ. ಈಗ, ಕುಕ್ಕರ್‌ನಲ್ಲಿ ನೆನೆಸಿದ ಅಕ್ಕಿ, ಕಡಲೆಕಾಳು, ಹಿಸುಕಿದ ದಾಲ್ ಮತ್ತು ಹುಣಸೆ ತಿರುಳನ್ನು ಸೇರಿಸಿ ಮತ್ತು ಮಸಾಲೆಯನ್ನು ತಯಾರಿಸಿ. ಬಿಸಿಬೇಳೆ ಬಾತ್ ಮಸಾಲ ಮತ್ತು ನೀರನ್ನು ಬಾಣಲೆಯಲ್ಲಿ ಹಾಕಿ ಬೇಯಿಸಿ ಕುಕ್ಕರ್‌ಗೆ ಸೇರಿಸಿ. ಅದಕ್ಕೆ ತಕ್ಕಂತೆ ಒಣಗಿದ ತೆಂಗಿನಕಾಯಿ ಮತ್ತು ಉಪ್ಪನ್ನು ಸೇರಿಸಿ ಮತ್ತು ಎಲ್ಲವನ್ನೂ ಮಿಶ್ರಣ ಮಾಡಲು ಮರೆಯಬೇಡಿ. ರುಚಿಕರವಾದ ತಡ್ಕಾಕ್ಕೆ ಕರಿಬೇವು, ಮರಾಠಿ ಮೊಗ್ಗು, ಇಂಗು, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಗೋಡಂಬಿ ಸೇರಿಸಿ. ಬಿಸಿಯಾಗಿ ಬಡಿಸಿ ಮತ್ತು ಹುರಿದ ಪಾಪಡ್‌ನೊಂದಿಗೆ ಸವಿಯಿರಿ.


ರಾಗಿ ಮುದ್ದೆ

ಇದು ಕರ್ನಾಟಕದ ‘ಪ್ರೋಟೀನ್ ಬೈಟ್ಸ್’ . ಇದು ಪ್ರಮುಖ ಆಹಾರವಾಗಿದೆ. ತಮಿಳುನಾಡಿನಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ. ಈ ʼಪೌಷ್ಟಿಕ ಚೆಂಡುʼಗಳು ರೈತರನ್ನು ಹಗಲಿನಲ್ಲಿ ಚುರುಕಾಗಿ ಇರಿಸಲು ಸಹಾಯ ಮಾಡುತ್ತದೆ. ನೀವು ಈ ಗರಿಗರಿಯಾದ ಮುದ್ದೆಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಬಹುದು. ಒಟ್ಟು 20 ನಿಮಿಷಗಳಲ್ಲಿ ತಯಾರಿಸಬಹುದು. ಬೆಂಗಳೂರಿನ ಮಿಲಿಟರಿ ಹೋಟೆಲ್‌ಗಳಲ್ಲಿ ರಾಗಿ ಮುದ್ದೆ ರುಚಿಕರವಾಗಿ ತಯಾರಿಸುತ್ತಾರೆ.

ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ಮತ್ತು ನೀರನ್ನು ಬೆರೆಸುವ ಮೂಲಕ ಪ್ರಾರಂಭಿಸಿ. ಮಿಶ್ರಣದಲ್ಲಿ ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಬಾಣಲೆಯಲ್ಲಿ ನೀರು, ತುಪ್ಪ ಮತ್ತು ಉಪ್ಪು ಸೇರಿಸಿ, ನೀರನ್ನು ಕುದಿಸಿ ಮತ್ತು ರಾಗಿ ಹಿಟ್ಟಿನ ಮಿಶ್ರಣವನ್ನು ಕುದಿಯುವ ನೀರಿಗೆ ಸುರಿಯಿರಿ. ದಪ್ಪವಾಗುವವರೆಗೆ ಬೇಯಿಸಿ. ಹಿಟ್ಟು ಸೇರಿಸಿ. ಅದರಲ್ಲಿ ಯಾವುದೇ ಹಿಟ್ಟಿನ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಇನ್ನೊಂದು 5 ನಿಮಿಷ ಬೇಯಿಸಿ. ಮಿಶ್ರಣವನ್ನು ಪ್ಲೇಟ್ ಗೆ ವರ್ಗಾಯಿಸಿ, ಬೆರಳುಗಳಲ್ಲಿ ರಾಗಿ ಹಿಟ್ಟಿನ ಚೆಂಡುಗಳನ್ನು ಮಾಡಿ. ಯಾವುದಾದರೂ ಸಾಂಬಾರಿನೊಂದಿಗೆ ಬಡಿಸಿ.


ನೀರ್ ದೋಸೆ

ಕರ್ನಾಟದ ಪ್ರಸಿದ್ಧ ನೀರ್ ದೋಸೆ ದೋಸೆಗಳಲ್ಲೇ ವಿಶಿಷ್ಟವಾಗಿದೆ. ತೆಳುವಾದ ಈ ದೋಸೆ ಕರ್ನಾಟಕದಾದ್ಯಂತ ಜನಪ್ರಿಯ ಉಪಾಹಾರವಾಗಿದೆ. ಮುಖ್ಯವಾಗಿ ಬೆಂಗಳೂರಿನ ಕರಾವಳಿ ರೆಸ್ಟೋರೆಂಟ್‌ಗಳಲ್ಲಿ ನೀರ್‌ ದೋಸೆ ಪ್ರಮುಖ ಆಕರ್ಷಣೆಯಾಗಿದೆ. ಹಿಟ್ಟಿಗೆ ಹುದುಗುವಿಕೆಯ ಅಗತ್ಯವಿಲ್ಲ. ಮನೆಯಲ್ಲೆ ಇದನ್ನು ಸುಲಭವಾಗಿ ಮಾಡಬಹುದು.

ಅಕ್ಕಿಯನ್ನು ರಾತ್ರಿಯಿಡೀ ನೆನೆಸಿ ಅನಂತರ ನಯವಾದ ಪೇಸ್ಟ್ ಆಗಿ ರುಬ್ಬಿ. ಹಿಟ್ಟಿಗೆ ನೀರಿನ ಉಪ್ಪು ಸೇರಿಸಿ ಮತ್ತು ಬಾಣಲೆಯಲ್ಲಿ ಕೆಲವು ಹನಿ ಎಣ್ಣೆಯನ್ನು ಹಾಕಿ,. ತೆಳುವಾಗಿ ಸುರಿಯಿರಿ. ಅದನ್ನು 2 ನಿಮಿಷಗಳ ಕಾಲ ಮುಚ್ಚಳದಿಂದ ಮುಚ್ಚಿ ಮತ್ತು ದೋಸೆಯ ಬದಿಗಳು ಸುಲಭವಾಗಿ ಹೊರಬರುವವರೆಗೆ ಕಾಯಿಸಿ. ತ್ರಿಕೋನದಲ್ಲಿ ಮಡಚಿ, ಚಟ್ನಿ ಅಥವಾ ಸಾಂಬಾರಿನೊಂದಿಗೆ ಸವಿಯಲು ರುಚಿಯಾಗಿರುತ್ತದೆ.


ತಟ್ಟೆ ಇಡ್ಲಿ

ಈ ಪ್ರಸಿದ್ಧ ಖಾದ್ಯವು ಸಾಮಾನ್ಯ ಇಡ್ಲಿಗಳಿಗಿಂತ ದೊಡ್ಡದಾಗಿದೆ ಮತ್ತು ದಪ್ಪವಾಗಿರುತ್ತದೆ. ಬೆಂಗಳೂರು ಮತ್ತು ಮೈಸೂರು ರಾಜ್ಯ ಹೆದ್ದಾರಿಗಳ ಬಳಿ ಜನಪ್ರಿಯವಾಗಿ ಕಂಡುಬರುವ ಈ ಖಾದ್ಯವನ್ನು ನೀವು ತಟ್ಟೆ ಇಡ್ಲಿ ರೆಸ್ಟೋರೆಂಟ್‌ಗಳಲ್ಲಿ ಸವಿಯಬಹುದು. ದಕ್ಷಿಣ ಕರ್ನಾಟಕದ ಪ್ರಮುಖ ತಿಂಡಿ ಇದು.

ಇಡ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಿಟ್ಟು ಖಾದ್ಯವನ್ನು ತಯಾರಿಸಿ. ನಯವಾದ ಹಿಟ್ಟನ್ನು ಪಡೆಯುವವರೆಗೆ ರಾತ್ರಿ ರುಬ್ಬಿಕೊಂಡು ಇಡಿ. ಬ್ಯಾಟರ್ ಅನ್ನು ಸ್ಟೀಮರ್ ನಲ್ಲಿ ಸುರಿಯಿರಿ ಮತ್ತು 15-20 ನಿಮಿಷಗಳ ಕಾಲ ಉಗಿ ಮಾಡಿ. ನಿಮ್ಮ ಇಡ್ಲಿಯನ್ನು ಸಾಂಬಾರ್, ತೆಂಗಿನಕಾಯಿ ಚಟ್ನಿ ಅಥವಾ ಒಂದು ಕಪ್ ಕಾಫಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.


ದೊನ್ನೆ ಬಿರಿಯಾನಿ

ಈ ಜನಪ್ರಿಯ ಖಾದ್ಯವನ್ನು ಬೆಂಗಳೂರು ನಗರದಲ್ಲಿ ವ್ಯಾಪಕವಾಗಿ ಸವಿಯಲಾಗುತ್ತದೆ. ಚಿಕನ್ ತುಂಡುಗಳನ್ನು ಸ್ವಚ್ಛಗೊಳಿಸಿ ದೊಡ್ಡ ಬಟ್ಟಲಿನಲ್ಲಿ ಅರಿಶಿನ, ಉಪ್ಪು, ನಿಂಬೆ ರಸ ಮತ್ತು ಮೊಸರು ಸೇರಿಸಿ 30 ನಿಮಿಷಗಳ ಕಾಲ ಮುಚ್ಚಿಡಿ. ಮಿಕ್ಸಿಂಗ್ ಜಾರ್‌ನಲ್ಲಿ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಪುದೀನಾ ಸೊಪ್ಪು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಬಾಣಲೆಯಲ್ಲಿ, ಎಣ್ಣೆಯನ್ನು ಬಿಸಿ ಮಾಡಿ, ಸಂಪೂರ್ಣ ಮಸಾಲೆಗಳು, ದಾಲ್ಚಿನ್ನಿ ಕಡ್ಡಿ, ಏಲಕ್ಕಿ ಹಾಕಿ ಕುದಿಯಲು ಬಿಡಿ. ಅನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರೈಸ್ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮುಚ್ಚಳದಿಂದ ಮುಚ್ಚಿ. ಬಾಣಲೆಯಲ್ಲಿ ನೀರನ್ನು ಕುದಿಸಿ ಮತ್ತು ಕಡಾಯಿಯ ಮುಚ್ಚಳದ ಮೇಲೆ ಇರಿಸಿ, ಮೇಲಿನಿಂದ ಶಾಖವನ್ನು ಒದಗಿಸಲು ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ನಿಮ್ಮ ದೊನ್ನೆ ಬಿರಿಯಾನಿ ಸಿದ್ಧವಾಗಿದೆ. ಹುರಿದ ಪಾಪಡ್ ಅಥವಾ ಧನಿಯಾ ರೈತಾದೊಂದಿಗೆ ಬಡಿಸಿ ಮತ್ತು ಆನಂದಿಸಿ.


ಮೈಸೂರು ಪಾಕ್

ದಕ್ಷಿಣ ಭಾರತೀಯ ಈ ಸಿಹಿತಿಂಡಿಯು ಅತ್ಯಂತ ಜನಪ್ರಿಯವಾಗಿದೆ. ಇದು ರುಚಿಕರವಾಗಿರುತ್ತದೆ. ಬೆಂಗಳೂರಿನ ಪ್ರಮುಖ ಬೇಕರಿಗಳಲ್ಲಿ ಉತ್ತಮ ದರ್ಜೆಯ ಮೈಸೂರ್‌ ಪಾಕ್‌ ಸಿಗುತ್ತದೆ. ನೀವು ಇದನ್ನು ಒಟ್ಟು 40 ನಿಮಿಷಗಳಲ್ಲಿ ಮಾಡಬಹುದು.

ಇದನ್ನೂ ಓದಿ: Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

ದೊಡ್ಡ ಬಟ್ಟಲಿಗೆ ಬೆಸನ್ ಸೇರಿಸುವ ಮೂಲಕ ಪ್ರಾರಂಭಿಸಿ. ಕಡಾಯಿಯಲ್ಲಿ ಎಣ್ಣೆ ಮತ್ತು ತುಪ್ಪವನ್ನು ಸುರಿಯಿರಿ, ಹಿಟ್ಟನ್ನು 3 ಭಾಗಗಳಾಗಿ ವಿಂಗಡಿಸಲು ಮರೆಯಬೇಡಿ. ನೀರಿಗೆ ಸಕ್ಕರೆಯನ್ನು ಸೇರಿಸುವ ಮೂಲಕ ಸಕ್ಕರೆ ಪಾಕವನ್ನು ತಯಾರಿಸಿ. ಸಕ್ಕರೆ ಪಾಕಕ್ಕೆ ಹಿಟ್ಟಿನ ಸ್ವಲ್ಪ ಭಾಗವನ್ನು ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ. ಹಿಟ್ಟಿನ ಇನ್ನೊಂದು ಭಾಗವನ್ನು ಸೇರಿಸಿ ಮತ್ತು ಪ್ರಕ್ರಿಯೆಯನ್ನು ಪುನರಾವರ್ತಿಸಿ. ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ ಮತ್ತು ಬಿಸಿ ಮಾಡಿದ ಎಣ್ಣೆ ಮತ್ತು ತುಪ್ಪವನ್ನು ಬಾಣಲೆಗೆ ಸೇರಿಸಿ. ಮಿಶ್ರಣವು ತುಪ್ಪವನ್ನು ಹೀರಿಕೊಂಡ ಬಳಿಕ ಮಿಶ್ರಣವು ದಪ್ಪವಾಗಲು ಪ್ರಾರಂಭಿಸುತ್ತದೆ. ಈ ಮೈಸೂರು ಪಾಕ್ ನ ಮಿಶ್ರಣವನ್ನು ತುಪ್ಪ ಸವರಿದ ಬಾಣಲೆಗೆ ವರ್ಗಾಯಿಸಿ ಐದು ನಿಮಿಷಗಳ ಬಳಿಕ ತುಂಡುಗಳಾಗಿ ಕತ್ತರಿಸಿ ಸವಿಯಿರಿ.

Continue Reading

ಶಿವಮೊಗ್ಗ

Road Accident : ಬಸ್ ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆ; ಚಕ್ರಕ್ಕೆ ಸಿಲುಕಿ ಸಾವು

Road Accident : ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬಸ್‌ ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

VISTARANEWS.COM


on

By

Road Accident
Koo

ಶಿವಮೊಗ್ಗ: ಬಸ್ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಶಿವಮೊಗ್ಗದ ಸಾಗರ ತಾಲೂಕಿನ ಅಂಬಾರಗೋಡ್ಲು-ಹೊಳೆಬಾಗಿಲು ಬಳಿ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿ ಮೂಲದ ಮಹಿಳೆ (37) ಎನ್ನಲಾಗಿದೆ.

ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬರುವಾಗ ಆತುರದಲ್ಲಿ ಕೆಎಸ್ಆರ್‌ಟಿಸಿ ಬಸ್ ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್‌ ಮುಂದೆ ಚಲಿಸಿದ್ದು, ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಹೆದ್ದಾರಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್; ಬೈಕ್‌ನಿಂದ ಎಗರಿ ಬಿದ್ದ ಬಾಲಕ ಸಾವು

ವಿಜಯನಗರದಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ; ಎಗರಿ ಬಿದ್ದ ಬಾಲಕ ಸಾವು

ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ಬೈಕ್ ಹಿಂದೆ ಕುಳಿತಿದ್ದ ಬಾಲಕ ಎಗರಿ ಬಿದ್ದು ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರಿಗೆ ಸಣ್ಣ-ಪುಟ್ಟ ಗಾಯವಾಗಿದೆ. ವಿಜಯನಗರದ ಹರಪನಹಳ್ಳಿ – ಕೂಡ್ಲಿಗಿ ರಸ್ತೆಯ ಹರಾಳು ಕ್ರಾಸ್ ಬಳಿ ಘಟನೆ ನಡೆದಿದೆ. ಕೂಡ್ಲಿಗಿ ತಾಲೂಕಿನ ನಿವಾಸಿ ಮಹಮದ್ (13) ಮೃತ ದುರ್ದೈವಿ.

ಮಹಮದ್‌ ತಂದೆ ಅಸ್ಲಾಂ ಭಾಷಾ ಅವರು ಕೆಎಸ್‌ಆರ್‌ಸಿಟಿ ಬಸ್‌ ಓವರ್ ಟೆಕ್ ಮಾಡಲು ಹೋಗಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಬರುತ್ತಿದ್ದ ರೇವಣಸಿದ್ದಪ್ಪ ಎಂಬುವವರ ಬೈಕ್‌ಗೆ ಗುದ್ದಿದ್ದಾರೆ. ಪರಿಣಾಮ ಡಿಕ್ಕಿ ರಭಸಕ್ಕೆ ಹಿಂಬದಿ ಕುಳಿತಿದ್ದ ಮಹಮದ್‌ ಹಾರಿ ಬಿದ್ದು ಮೃತಪಟ್ಟಿದ್ದಾನೆ. ಅಸ್ಲಾಂ ಭಾಷಾ, ಮತ್ತೊಬ್ಬ ಪುತ್ರ ಮಹಮದ್ ಫರಾನ್ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆದರೆ ಮಹಮದ್‌ ತಾಯಿ ಬಸ್ ಚಾಲಕನನ್ನು ದೂರಿದ್ದಾರೆ. ಬಸ್ ಸ್ಪೀಡ್ ಆಗಿ ಬಂದಾಗ ಬೈಕ್ ಬ್ಯಾಲೆನ್ಸ್ ತಪ್ಪಿ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಬಸ್‌ ಮಗನಿಗೂ ಡಿಕ್ಕಿ ಹೊಡೆದಿದೆ. ನನ್ನ ಮಗನ ಸಾವಿಗೆ ಬಸ್ ಚಾಲಕ ಶಿವಕುಮಾರ್ ಕೂಡಾ ಕಾರಣ ಎಂದು ದೂರು ದಾಖಲಿಸಿದ್ದಾರೆ. ಸದ್ಯ ಈ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಶಿವಮೊಗ್ಗ

Kannada stone inscription: ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆ; ಘಾಟ್ ನಲ್ಲಿ ಕಾಲು ಸಂಕವಾಗಿ ಬಳಕೆ!

Kannada stone inscription: ಕಾಶಿಯ ಕಪಿಲಾ ಘಾಟ್ ಬಳಿ ಶಾಸನ ಪತ್ತೆಯಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಶಾಸನ ಕಂಡುಬಂದಿದೆ. ಘಾಟ್‌ನಲ್ಲಿ ಪತ್ತೆಯಾದ ಈ ಶಾಸನಗಳಲ್ಲಿ ಕೆಲವು ಕಾಲು ಸಂಕವಾಗಿ ಬಳಕೆಯಾಗುತ್ತಿದೆ. ಮತ್ತೆ ಕೆಲವು ಬಟ್ಟೆ ತೊಳೆಯಲು ಬಳಕೆಯಾಗುತ್ತಿದೆ. ಈ ಮೂಲಕ ಅಪರೂಪದ ಶಿಲಾಶಾಸನವೊಂದು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಗೊತ್ತಾಗಿದೆ.

VISTARANEWS.COM


on

Kannada stone inscription found in Kashi Use as a foot bridge at the ghat
Koo

ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಶಿಯಲ್ಲಿ (Kashi Vishwanath Temple) ಕನ್ನಡದ ಶಿಲಾ ಶಾಸನ (Kannada stone inscription) ಪತ್ತೆಯಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಕೆಳದಿ ಅರಸರ ಕಾಲದ ಶಾಸನ ಎಂದು ಗೊತ್ತಾಗಿದೆ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಸ್ತಿತ್ವಕ್ಕೆ ಬಂದಿದ್ದ ಕೆಳದಿ ಸಂಸ್ಥಾನವು ಬರೆದಿದ್ದ ಶಿಲಾ ಶಾಸನ ಇದಾಗಿದೆ. ವಿಜಯನಗರದ ಸಾಮ್ರಾಜ್ಯಕ್ಕೆ ಕೆಳದಿಯ ಅರಸರು ಸಾಮಂತರಾಗಿದ್ದರು.

ಕಪಿಲಾ ಘಾಟ್ ಬಳಿ ಶಾಸನ ಪತ್ತೆ

ಕಾಶಿಯ ಕಪಿಲಾ ಘಾಟ್ ಬಳಿ ಶಾಸನ ಪತ್ತೆಯಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಶಾಸನ ಕಂಡುಬಂದಿದೆ. ಘಾಟ್‌ನಲ್ಲಿ ಪತ್ತೆಯಾದ ಈ ಶಾಸನಗಳಲ್ಲಿ ಕೆಲವು ಕಾಲು ಸಂಕವಾಗಿ ಬಳಕೆಯಾಗುತ್ತಿದೆ. ಮತ್ತೆ ಕೆಲವು ಬಟ್ಟೆ ತೊಳೆಯಲು ಬಳಕೆಯಾಗುತ್ತಿದೆ. ಈ ಮೂಲಕ ಅಪರೂಪದ ಶಿಲಾಶಾಸನವೊಂದು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಗೊತ್ತಾಗಿದೆ.

ಕನ್ನಡದಲ್ಲಿ ಕೆತ್ತಲಾಗಿರುವ ಶಾಸನ

ಶಾಸನದಲ್ಲಿ ಕೆಳದಿ ಅರಸ ಶಿವಪ್ಪ ನಾಯಕನ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಇದು 16ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾಗುತ್ತಿದೆ. ಶಾಸನ ಕಾಲುಸಂಕವಾಗಿ ಬಳಕೆಯಾಗುತ್ತಿರುವುದಕ್ಕೆ ಶಾಸನ ಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಾಗರದ ವಕೀಲ ಹಾಗೂ ಶಾಸನ ಪ್ರಿಯ ಪ್ರವೀಣ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಶಾಸನ ರಕ್ಷಣೆ ಆಗಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರವು ಈ ಶಾಸನ ರಕ್ಷಣೆಗೆ ಮುಂದಾಗಬೇಕು. ಉತ್ತರ ಪ್ರದೇಶ ಸರ್ಕಾರವನ್ನು ಸಂಪರ್ಕಿಸಿ ಶಾಸನವನ್ನು ರಕ್ಷಿಸಬೇಕು. ಕೇಂದ್ರ ಪುರಾತತ್ವ ಇಲಾಖೆಯು ತಕ್ಷಣವೇ ಶಾಸನ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: HD Deve Gowda: ದೇವೇಗೌಡರಿಗೆ ಜನ್ಮದಿನ ಶುಭ ಕೋರಿದ ಮೋದಿ; ಮಾಜಿ ಪ್ರಧಾನಿಗೆ ಹಲಸಿನ ಹಣ್ಣು ಗಿಫ್ಟ್‌

ಇನ್ನು ಈ ಶಾಸನವು ಕನ್ನಡ ಹಾಗೂ ಪರ್ಶಿಯನ್ ಭಾಷೆಯಲ್ಲಿದ್ದು, ಎರಡೂ ಶಾಸನವನ್ನು ರಕ್ಷಿಸಬೇಕು, ಇದು ಶಿವಮೊಗ್ಗದ ಹೆಮ್ಮೆಯ ಪ್ರತೀಕವಾಗಿದೆ. ಹೀಗಾಗಿ ಇದರ ರಕ್ಷಣೆಯ ಅವಶ್ಯಕತೆ ಇದೆ ಎಂದು ಪ್ರವೀಣ್ ಕುಮಾರ್ ಒತ್ತಾಯಿಸಿದ್ದಾರೆ.

Continue Reading
Advertisement
Namma Metro
ಬೆಂಗಳೂರು5 mins ago

Namma Metro: ಮೆಟ್ರೋಗೆ ಕನೆಕ್ಟ್‌ ಆಗಲಿದೆ ನಮ್ಮ ಯಾತ್ರಿ; ಇನ್ಮುಂದೆ ಆಟೋ ಹಿಡಿಯೋ ಟೆನ್ಷನ್‌ ಇಲ್ಲ

Police Station
ದೇಶ13 mins ago

Police Station: ಪೊಲೀಸ್‌ ಸ್ಟೇಷನ್‌ನಲ್ಲೇ ಪತಿ-ಪತ್ನಿ ಸಾವು; ಠಾಣೆಯನ್ನೇ ಸುಟ್ಟರು ಜನ

Milana Nagaraj Anarkali border gown worn
ಸ್ಯಾಂಡಲ್ ವುಡ್41 mins ago

Milana Nagaraj: ಗರ್ಭಿಣಿ ಮಿಲನಾ ನಾಗರಾಜ್‌ ಧರಿಸಿರುವ ಕ್ರಶ್ಡ್ ಅನಾರ್ಕಲಿ ಬಾರ್ಡರ್‌ ಗೌನ್‌ನ ವಿಶೇಷ ಏನು?

Boxer Parveen
ಕ್ರೀಡೆ43 mins ago

Boxer Parveen: ಒಲಿಂಪಿಕ್ಸ್‌ ಕೋಟಾ ಕಳೆದುಕೊಂಡ ಭಾರತದ ಬಾಕ್ಸರ್‌ ಪರ್ವೀನ್‌

Famous Food of bangalore
ಆಹಾರ/ಅಡುಗೆ1 hour ago

Famous Food of Bangalore: ಬೆಂಗಳೂರಿಗೆ ಬಂದಾಗ ಈ ಖಾದ್ಯಗಳ ರುಚಿ ನೋಡಲು ಮರೆಯಬೇಡಿ!

Prime Minister of India
ರಾಜಕೀಯ1 hour ago

Prime Minister Of India: ಸುದೀರ್ಘ ಕಾಲ ಪ್ರಧಾನಿಯಾಗಿದ್ದ ನೆಹರೂ, ಇಂದಿರಾ ದಾಖಲೆಯನ್ನು ಮೋದಿ ಮುರಿಯಲು ಸಾಧ್ಯವೆ?

RCB FANS BIKE RALLY
ಕ್ರೀಡೆ1 hour ago

RCB FANS BIKE RALLY: ಪಂದ್ಯಕ್ಕೂ ಮುನ್ನವೇ ಬೃಹತ್​ ಬೈಕ್​ ರ‍್ಯಾಲಿ ಮಾಡಿದ ಆರ್​ಸಿಬಿ ಅಭಿಮಾನಿಗಳು; ವಿಡಿಯೊ ವೈರಲ್​​

Pavithra Jayaram Chandrakant are just friends, daughter said
ಕಿರುತೆರೆ1 hour ago

Pavithra Jayaram: ಚಂದ್ರಕಾಂತ್‌ ಹಾಗೂ ನನ್ನ ಅಮ್ಮ ಜಸ್ಟ್‌ ಫ್ರೆಂಡ್ಸ್‌, ಪವಿತ್ರಾ ಮಗಳ ಸ್ಪಷ್ಟನೆ!

Powerful Bike
ಪ್ರಮುಖ ಸುದ್ದಿ1 hour ago

Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

Road Accident
ಶಿವಮೊಗ್ಗ2 hours ago

Road Accident : ಬಸ್ ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆ; ಚಕ್ರಕ್ಕೆ ಸಿಲುಕಿ ಸಾವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ19 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌