Site icon Vistara News

Theft Case: ಚಿನ್ನವೆಂದು ಉಮಾಗೋಲ್ಡ್ ಸರ ಕದ್ದ; ರೌಡಿಶೀಟರ್ ಮತ್ತೆ ಜೈಲುಪಾಲಾಗಿದ್ದು ಹೇಗೆ?

Umagold stole the chain as the original gold, Rowdy sheeter jailed again

Umagold stole the chain as the original gold, Rowdy sheeter jailed again

ಬೆಂಗಳೂರು: ಉಮಾಗೋಲ್ಡ್ ಸರ ಕದ್ದು ರೌಡಿಶೀಟರ್‌ವೊಬ್ಬ ಮತ್ತೆ ಜೈಲುಪಾಲಾದ (Theft Case) ಘಟನೆ ನಡೆದಿದೆ. ಬನಶಂಕರಿ ರೌಡಿಶೀಟರ್ ರಾಘವೇಂದ್ರ (40) ಹಾಗೂ ಆತನ ಸಹಚರ ವಿನೋದ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.

ಗಿರಿನಗರ ಪೊಲೀಸ್ ಠಾಣಾ (Girinagar Police Station) ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಧರಿಸಿದ್ದ ಸರವನ್ನು ರಾಘವೇಂದ್ರ ಕದ್ದು ಪರಾರಿ ಆಗಿದ್ದ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ 40 ಗ್ರಾಂ ಚಿನ್ನದ ಸರ ಕಳ್ಳತನ ಮಾಡಿದ್ದಾಗಿ ಮಹಿಳೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ರೇಸ್ ಕೋರ್ಸ್ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅದು ಅಸಲಿ ಚಿನ್ನವಲ್ಲ ಬದಲಿಗೆ ಉಮಾಗೋಲ್ಡ್ (Umagold) ಎಂಬ ಸಂಗತಿ ಬೆಳಕಿಗೆ ಬಂದಿದೆ. ಸರವನ್ನು ಕದ್ದು ಮಾರಾಟಕ್ಕೆ ಹೋದಾಗ, ಅದು ಅಸಲಿ ಅಲ್ಲ ನಕಲಿ ಎಂದು ಗೊತ್ತಾಗಿದೆ. ಹೀಗಾಗಿ ಕಳ್ಳರಿಬ್ಬರು ಆ ಸರವನ್ನು ಮರದಡಿ ಬಿಸಾಡಿದ್ದಾಗಿ ಹೇಳಿದ್ದಾರೆ.

ಇನ್ನು ರೌಡಿಶೀಟರ್ (Rowdysheeter) ರಾಘವೇಂದ್ರ 9 ತಿಂಗಳ ಹಿಂದೆಯಷ್ಟೇ ರಾಮನಗರ (Ramanagara) ಜೈಲಿಂದ ಬಿಡುಗಡೆಯಾಗಿ ಬಂದಿದ್ದ. ಬಂದವನೇ ಕಳ್ಳತನಕ್ಕೆ ಇಳಿದಿದ್ದ. ಇದೀಗ ನಕಲಿ ಸರ ಕದ್ದು ಜೈಲುಪಾಲಾಗಿದ್ದಾನೆ. ಸದ್ಯ ಗಿರಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಪೆಟ್ರೋಲ್‌ ಕಳ್ಳ

ಬೆಂಗಳೂರಲ್ಲಿ ಪೆಟ್ರೋಲ್‌ ಕಳ್ಳರು

ಮನೆ ಮುಂದೆ ನಿಲ್ಲಿಸುವ ವಸ್ತುಗಳನ್ನೇ ಟಾರ್ಗೆಟ್‌ ಮಾಡಿ ಪೆಟ್ರೋಲ್‌ (Petrol) ಕದಿಯುವ ಕಳ್ಳರ ಹಾವಳಿ ಹೆಚ್ಚಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣಾ (Jnanabharathi Police Station) ವ್ಯಾಪ್ತಿಯ ಉಲ್ಲಾಳ ರಸ್ತೆಯಲ್ಲಿರುವ ದೀಪಾ ಹಾಸ್ಪಿಟಲ್ (Deepa hospital) ಬಳಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬರುವ ಕಳ್ಳರು ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಪೆಟ್ರೋಲ್‌ ಕದಿಯುತ್ತಿದ್ದಾರೆ. ಕಳೆದ 2 ತಿಂಗಳಿನಿಂದ ಪೆಟ್ರೊಲ್ ಕಳ್ಳತನ ಬಗ್ಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ವಾಹನಗಳಿಂದ ಪೆಟ್ರೋಲ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Murder Case: ಪತಿ ಸ್ನೇಹಿತನ ವ್ಯಾಮೋಹಕ್ಕೆ ಸಿಲುಕಿ ಆತನನ್ನೇ ವರಿಸಿದಳು; ಮದುವೆಯಾದವ ಮಲಮಗನನ್ನೇ ಮುಗಿಸಿದ!

ರೌಡಿಗಳ ಅಟ್ಟಹಾಸ

ಮಹಾಲಕ್ಷ್ಮಿ ಲೇಔಟ್‌ನಲ್ಲಿ ಪುಂಡರ ಅಟ್ಟಹಾಸ

ಏರಿಯಾದಲ್ಲಿ ಹೆಸರು ಮಾಡಲು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಬಳಿಯ ಕಾವೇರಿನಗರದಲ್ಲಿ ಲಾಂಗ್ ಹಿಡಿದು ಓಡಾಡಿದ್ದಾರೆ. ಮಾತ್ರವಲ್ಲದೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಬೈಕ್‌ಗಳಲ್ಲಿ ಬಂದ ನಾಲ್ಕೈದು ರೌಡಿ ಟೀಂ ಅಜಿತ್ ಎಂಬಾತನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version