Site icon Vistara News

Pratap Simha: ದೊಡ್ಡವರ ಕಾಲಿಗೆ ನಮಸ್ಕರಿಸುವುದು ನನ್ನ ರೂಢಿ; ದೇವೇಗೌಡರ ಭೇಟಿ ಬಗ್ಗೆ ಪ್ರತಾಪ್‌ ಸಿಂಹ ಸಮರ್ಥನೆ

Pratap Simha seeks Deve Gowdas blessings

ಮೈಸೂರು: ಮಾಜಿ ಪ್ರಧಾನಿ‌ ಎಚ್.ಡಿ.ದೇವೇಗೌಡರ ಕಾಲಿಗೆ ಬಿದ್ದದ್ದನ್ನು ವೈಭವೀಕರಿಸುವ ಅಗತ್ಯವಿಲ್ಲ. ನಾನು ಎಲ್ಲರ ಕಾಲಿಗೂ ನಮಸ್ಕಾರ ಮಾಡುತ್ತೇನೆ. ದೊಡ್ಡವರ ಕಾಲಿಗೆ ನಮಸ್ಕರಿಸುವುದು ನನ್ನ ರೂಢಿ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ಹೇಳಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಭೇಟಿ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಾನು ಎಲ್ಲರ ಕಾಲಿಗೂ ನಮಸ್ಕಾರ ಮಾಡುತ್ತೇನೆ. ನಾನು ಸಿದ್ದರಾಮಯ್ಯ ಅವರ ಕಾಲಿಗೂ ನಮಸ್ಕರಿಸಿದ್ದೇನೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಲಿಗೂ ಬಿದ್ದಿದ್ದೇನೆ. ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಎಲ್ಲರ ಕಾಲಿಗೆ ಬಿದ್ದಿದ್ದೇನೆ. ದೊಡ್ಡವರ ಕಾಲಿಗೆ ನಮಸ್ಕರಿಸುವುದು ನನ್ನ ರೂಢಿ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ | Atrocity Case :‌ ಭೂಕಬಳಿಕೆ, ಜಾತಿನಿಂದನೆ ಆರೋಪ; ಸಚಿವ ಡಿ. ಸುಧಾಕರ್‌ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ

ಮಾಜಿ ಪ್ರಧಾನಿ ದೇವೇಗೌಡರು ಹಿರಿಯರು. ದೇಶದ ಪ್ರಧಾನಿಯಾಗಿ ಕೆಲಸ ಮಾಡಿದವರು. ಅವರಷ್ಟು ಕೆಲಸ ಮಾಡಿದವರು ಬೇರೊಬ್ಬರಿಲ್ಲ. ಅಂತಹವರು ಹಿಂದೆ ಇರಲಿಲ್ಲ, ಮುಂದೆ ಬರೋದು ಇಲ್ಲ. ಮೋದಿ ಅವರೇ ದೇವೇಗೌಡರನ್ನು ಬಹಳ ಗೌರವಯುತವಾಗಿ ನೋಡಿಕೊಳ್ಳುತ್ತಾರೆ. ಜಿಎಸ್‌ಟಿ ಉದ್ಘಾಟನೆ ವೇಳೆ ಕೈ ಹಿಡಿದು ಕರೆದುಕೊಂಡು ಹೋದರು. ಪಾರ್ಲಿಮೆಂಟ್ ಉದ್ಘಾಟನೆ ವೇಳೆ ಖುದ್ದು ಕರೆ ಮಾಡಿ ಆಹ್ವಾನಿಸಿದ್ದರು. ಅಂತಹವರ ಬಗ್ಗೆ ಹೆಚ್ಚು ಗೌರವ ಇಟ್ಟುಕೊಂಡಿದ್ದೇನೆ. ನಾನು ಮೈಸೂರಿಗೆ ಮಾತ್ರ ಸಂಸದನಲ್ಲ. ಕೊಡಗು ಭಾಗಕ್ಕೂ ನಾನು ಸಂಸದ, ಮಲೆನಾಡಿನಲ್ಲಿ ಹಿರಿಯರಿಗೆ ಗೌರವ ಕೊಡುವುದು ಇದೆ. ಆ ಹಿನ್ನೆಲೆ‌ ನಾನು ದೊಡ್ಡವರಿಗೆ ನಮಸ್ಕರಿಸಿರುವೆ ಎಂದು ತಿಳಿಸಿದರು.

ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯೆ ಪ್ರವೇಶ ಸಾಧ್ಯವಿಲ್ಲ. ಕೇಂದ್ರ ಸರ್ಕಾರಕ್ಕೂ, ಕಾವೇರಿಗೂ ಸಂಬಂಧವಿಲ್ಲ. ರಾಜಕೀಯದ ಬಗ್ಗೆ ಸಣ್ಣ ಪ್ರಜ್ಞೆ ಇದ್ದವರೂ ಕೇಂದ್ರ ಮಧ್ಯೆ ಪ್ರವೇಶ ಮಾಡಿ ಎನ್ನುವುದಿಲ್ಲ. ನೀರು ಬಿಡುಗಡೆಗೆ ಒತ್ತಾಯಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಅದೇ ರೀತಿ ನಮ್ಮ ರಾಜ್ಯ ಸರ್ಕಾರ ಕೂಡ ನ್ಯಾಯಾಲಯದಲ್ಲಿ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು. ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಬೇಕು. ಅದು ಬಿಟ್ಟು ಎಲ್ಲದಕ್ಕೂ ಪ್ರಧಾನಿ ಮೋದಿಯವರನ್ನು ಎಳೆದು ತರಬಾರದು ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಡಿಎಂಕೆ ಓಲೈಕೆಗಾಗಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ಸಿದ್ದರಾಮಯ್ಯನವರು ಸ್ಟಾಲಿನ್‌ಗೆ ಫೋನ್ ಮಾಡಿ ಮಾತನಾಡಲಿ. ನಮ್ಮ ರಾಜ್ಯದ ಪರಿಸ್ಥಿತಿಯನ್ನು ಸ್ಟಾಲಿನ್‌ಗೆ ತಿಳಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಬೇಕು. INDIA ಕೂಟ ಮಾಡಿಕೊಂಡು ಬೆಂಗಳೂರಿನಲ್ಲಿ ಸ್ಟಾಲಿನ್‌ಗೆ ಅದ್ಧೂರಿ ಸ್ವಾಗತ ಮಾಡಿದರು. ಅಂತಹವರು ಈಗ ಕಾಲ್ ಮಾಡಿ ಮಾತನಾಡಲು ಆಗಲ್ವಾ? ಸ್ಟಾಲಿನ್ ಬಳಿ ಸಿದ್ರಾಮಯ್ಯ ಮಾತನಾಡಿದರೆ ಸಮಸ್ಯೆ ಬಗೆಹರಿಯಲಿದೆ ಅಲ್ಲವೇ ಎಂದು ತಿಳಿಸಿದರು.

ಇದನ್ನೂ ಓದಿ | Pranavananda Shri : ಮಧು ಬಂಗಾರಪ್ಪರಿಂದ ಜೀವ ಬೆದರಿಕೆ; ಪ್ರಣವಾನಂದ ಶ್ರೀ ಗಂಭೀರ ಆರೋಪ, ಕಾಂಗ್ರೆಸ್‌ ಪಕ್ಷಕ್ಕೂ ಎಚ್ಚರಿಕೆ

ಭೇಟಿ ಹಿಂದಿದೆ ರಾಜಕೀಯ ಲೆಕ್ಕಾಚಾರ

ಲೋಕಾಸಭಾ ಚುನಾವಣೆಯನ್ನು ಜಂಟಿಯಾಗಿ ಎದುರಿಸಲು ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ಮೈತ್ರಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಜೆಪಿಗೆ ಜೆಡಿಎಸ್‌ ಬೆಂಬಲ ನೀಡಲಿದೆ. ಇದರಿಂದ ಚುನಾವಣೆಯಲ್ಲಿ ಗೆಲುವು ಸುಲಭವಾಗಲಿದೆ. ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ಹೀಗಾಗಿ ಅವರ ಬೆಂಬಲ ಪಡೆಯಲು ಸಂಸದ ಪ್ರತಾಪ್‌ ಸಿಂಹ ಅವರು ಇತ್ತೀಚೆಗೆ ಮೈಸೂರಿನಲ್ಲಿ ಆದಿಚುಚಂಚನಗಿರಿ ಶಾಖಾ ಮಠದ ಉದ್ಘಾಟನೆ ವೇಳೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಭೇಟಿಯಾಗಿದ್ದರು. ಈ ವೇಳೆ ಮಾಜಿ ಪ್ರಧಾನಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದರು.

Exit mobile version