ನವದೆಹಲಿ: ಕರ್ನಾಟಕಕ್ಕೆ ಯೂರಿಯಾ ಮತ್ತು ಡಿಎಪಿ ಕೊರತೆಯಾಗುವುದಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್ ಮಾಂಡವಿಯ ಆಶ್ವಾಸನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೇಂದ್ರ ಸಚಿವರನ್ನು ಬುಧವಾರ ಭೇಟಿ ಮಾಡಿದ ಮಾತನಾಡಿದ ಸಿಎಂ, ರಾಜ್ಯಕ್ಕೆ ಬೇಕಿರುವ ಗೊಬ್ಬರದ ಬಗ್ಗೆ ಚರ್ಚೆ ಮಾಡಲಾಯಿತು. ಕರ್ನಾಟಕಕಕ್ಕೆ ಡಿಎಪಿ ಮತ್ತು ಯೂರಿಯಾ ಕೊರತೆ ಇಲ್ಲವೆಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ನಮಗೆ ಮುಂಗಾರಿನಲ್ಲಿಯೂ ಡಿಎಪಿ ಮತ್ತು ಯೂರಿಯಾ ಅಗತ್ಯ ಇದೆ ಎಂದು ತಿಳಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೋನಿಯಾ ಮತ್ತು ಇತರೆ ಗೊಬ್ಬರದ ಕೊರತೆಯಿಂದ ಡಿಎಪಿ ಬಗ್ಗೆ ಅನುಮಾನವಿತ್ತು. ಡಿ.ಎ.ಪಿ ಗೊಬ್ಬರ ಸಿಗಲಿದೆ ಎಂದು ಹೇಳಿದ್ದಾರೆ. ಮಂಗಳೂರು ಮತ್ತು ಕಾರವಾರ ಬಂದರಿಗೆ ಬಂದ ಮೇಲೆ ಸಾಗಾಣಿಕೆ ವ್ಯವಸ್ಥೆಯಾಗಬೇಕು ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅನಂತಕುಮಾರ್ ಅವರ ಕೊಡುಗೆ ಅಪಾರ: CM ಬಸವರಾಜ ಬೊಮ್ಮಾಯಿ ಶ್ಲಾಘನೆ –