Site icon Vistara News

ಪಠ್ಯದಲ್ಲಿ ಸೂಲಿಬೆಲೆ ಅವರನ್ನು ಸಾಹಿತಿಯೆಂದು ಪರಿಚಯಿಸಿದ್ದು ತಪ್ಪಲ್ಲ: ಜಗದೀಶ್ ಶೆಟ್ಟರ್

ಪಠ್ಯದಲ್ಲಿ ಸೂಲಿಬೆಲೆಯನ್ನು ಸಾಹಿತಿಯೆಂದು ಪರಿಚಯಿಸಿದರಲ್ಲಿ ತಪ್ಪಿಲ್ಲ: ಜಗದೀಶ್ ಶಟ್ಟರ್

ಉತ್ತರ ಕನ್ನಡ: ಪಠ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಸಾಹಿತಿ ಎಂದು ಪರಿಚಯಿಸಿದ್ದರಲ್ಲಿ ತಪ್ಪಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮಂಗಳವಾರ ಹೇಳಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಹಿಂದುತ್ವದ ಬಗ್ಗೆ, ಸಂಸ್ಕೃತಿಯ ಬಗ್ಗೆ ಮಾತನಾಡಿದರೆ ಅವರು ಸಾಹಿತಿಯಾಗಿರಬಾರದೇ? ಎಂದವರು ಪ್ರಶ್ನಿಸಿದರು.

ರಾಜ್ಯಸಭಾ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಯಾರ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುವುದು ಹೈಕಮಾಂಡ್ ನಿರ್ಧರಿಸಲಿದೆ. ಈಗಾಗಲೇ ಮತಗಳನ್ನ ಹೇಗೆ ಪಡೆಯಬೇಕು ಎನ್ನುವ ಪ್ರಯತ್ನ ಮಾಡಲಾಗುತ್ತಿದೆ. ಎರಡು ಮೂರು‌ ದಿನಗಳಲ್ಲಿ ಎಲ್ಲವೂ ನಿರ್ಧಾರವಾಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಆರ್‌ಎಸ್‌ಎಸ್‌ ಅನ್ನು ಬಯ್ಯದೇ ಇದ್ದರೆ ತಿಂದಿದ್ದು ಪಚನವಾಗುವುದಿಲ್ಲ. ಆರ್‌ಎಸ್‌ಎಸ್‌ ಬಯ್ದರೆ, ಅಲ್ಪಸಂಖ್ಯಾತರ ಮತ ಪಡೆಯಬಹುದು ಎನ್ನುವ ಮನೋಭಾವ ಹೊಂದಿದ್ದಾರೆ. ಪಂಜಾಬ್, ಉತ್ತರ ಪ್ರದೇಶದಲ್ಲಿ ಏನಾಯಿತು ಎಂದು ಆತ್ಮಾವಲೋಕನ ಮಾಡೊಕೊಳ್ಳಲಿ ಎಂದರು.

ಅಲ್ಪಸಂಖ್ಯಾತರ ಓಲೈಕೆಗೆ ಆರ್‌ಎಸ್‌ಎಸ್‌ ಟೀಕೆ ಮಾಡುವುದು ಬಹಳ ದಿನ ನಡೆಯುವುದಿಲ್ಲ. ಇಡೀ‌ ದೇಶದಲ್ಲಿ ಹಿಂದೂ ಸಂಘಟನೆ ಒಂದು ಮಾಡುವ ಕೆಲಸ ಆರ್‌ಎಸ್‌ಎಸ್‌ ಮಾಡಿದೆ. ಆರ್‌ಎಸ್‌ಎಸ್‌ ಬಗ್ಗೆ ಕೀಳು ಮಟ್ಟದಲ್ಲಿ‌‌ ಸಿದ್ದರಾಮಯ್ಯ ಮಾತನಾಡಿ ಸಣ್ಣವರಾಗಿದ್ದಾರೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಇದನ್ನೂ ಓದಿ: RSS ಮೂಲ ಕೆದಕುವ ಸಿದ್ದರಾಮಯ್ಯ ಅವರ ರಾಜಕೀಯ ಮೂಲ ಪ್ರಶ್ನಿಸಿದ ಸಿ.ಸಿ ಪಾಟೀಲ್‌

Exit mobile version