Site icon Vistara News

ಸ್ನೇಹಿತನ ಫೇಸ್‌ಬುಕ್‌ ಪೋಸ್ಟ್‌ನಿಂದ ಸಿಕ್ಕಿಬಿದ್ದ ಕಳ್ಳರು

theft

ಬೆಂಗಳೂರು: ಕೊಲೆ ಪ್ರಕರಣದ ಆರೋಪಿ ಐದು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಮಧುಸೂದನ್‌ ಫೇಸ್‌ಬುಕ್‌ ಪೋಸ್ಟ್‌ನಿಂದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. 2014 ರಲ್ಲಿ ಲಕ್ಕಸಂದ್ರದ ಉದ್ಯಮಿ ಉದಯ್‌ ರಾಜ್‌ ಸಿಂಗ್‌ನನ್ನು ಕೊಲೆ ಮಾಡಿ, ಅವರ ಬಳಿಯಿದ್ದ ಸುಮಾರು ₹18 ಲಕ್ಷ ಮೌಲ್ಯದ ವಜ್ರ , ಚಿನ್ನಾಭರಣ ಕಳವು ಮಾಡಿದ ಪ್ರಕರಣದಲ್ಲಿ ಮಧು ಜೈಲು ಸೇರಿದ್ದ. 2017 ರಲ್ಲಿ ತಮ್ಮ ತಾಯಿಗೆ ತೀವ್ರ ಅನಾರೋಗ್ಯದ ಕಾರಣ ನೀಡಿ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗಡೆ ಬಂದಿದ್ದ.

ಬಳಿಕ ನ್ಯಾಯಾಲಯದ ಪ್ರಕ್ರಿಯೆಗಳಿಗೆ ಹಾಜರಾಗದೆ, ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರೂ ಸಣ್ಣ ಸುಳಿವು ಕೂಡ ದೊರೆತಿರಲಿಲ್ಲ. 2019 ರಲ್ಲಿ ₹1 ಲಕ್ಷ ದಂಡ ವಿಧಿಸಲಾಗಿತ್ತು. ಮಧು ಹೊರತುಪಡಿಸಿ, ಉಳಿದ ಆರೋಪಿಗಳಾದ ಶ್ರೀರಂಗ ಅಭಿಷೇಕ್ ಸೇರಿ ಐವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು.

ಈ ಮಾಹಿತಿ ತಿಳಿದುಕೊಂಡಿದ್ದ ಮಧು, ತಾನು ಶರಣಾದರೂ ಜೀವಾವಧಿ ಶಿಕ್ಷೆ ಕಾಯಂ ಆಗಲಿದೆ ಎಂದು ಭಯಗೊಂಡ. ಪುಣೆ, ಬಿಹಾರ ಹೀಗೆ ಹಲವು ಜಾಗಗಳಲ್ಲಿ ತಲೆಮರಿಸಿಕೊಂಡು ಉಳಿದುಕೊಂಡಿದ್ದ. ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಮಧು, ಸ್ನೇಹಿತನ ಜತೆ ಮಾಲ್‌ವೊಂದಕ್ಕೆ ತೆರಳಿದ್ದ. ಇಬ್ಬರೂ ಮಾಲ್‌ನಲ್ಲಿದ್ದಾಗ ತೆಗೆದುಕೊಂಡಿದ್ದ ಫೋಟೋವನ್ನು ಆತನ ಸ್ನೇಹಿತ ಫೇಸ್‌ಬುಕ್‌ಗೆ ಪೋಸ್ಟ್ ಮಾಡಿದ್ದ.

ಈ ಕುರಿತು ಮಾಹಿತಿ ಪಡೆದು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿ ಮಧುವನ್ನು ಬಂಧಿಸಿ ವಾರಂಟ್ ಹಾಕಿಸಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಪ್ರಮುಖ ಆರೋಪಿ ರಾಹುಲ್ ಬೆಳ್ಳಿ ಆಭರಣಗಳ ಮಳಿಗೆಯಲ್ಲಿ ಮಾಡುತ್ತಿದ್ದ. ಹಣಕಾಸು ಮಳಿಗೆಯ ವಹಿವಾಟನ್ನು ಕೂಡ ಆತನೇ ನೋಡಿಕೊಳ್ಳುತ್ತಿದ್ದ. ಆರೋಪಿಗಳು ಕಳವು ಮಾಡಿದ್ದ 9 ಲಕ್ಷ ರೂ . ಮೌಲ್ಯದ 8 ಕೆ.ಜಿ. ಬೆಳ್ಳಿ ಬಿಸ್ಕತ್ , 3.38 ಲಕ್ಷ ರೂ . ನಗದು ವಶಪಡಿಸಿಕೊಳ್ಳಲಾಗಿದೆ. ಶ್ರೀನಗರದ ನಿವಾಸಿ ರಾಹುಲ್ ಜೈನ್, ಶಿವಮೊಗ್ಗ ಮೂಲದ ಮಧು, ರಾಜೇಶ್‌ನನ್ನು ಪೋಲಿಸರು ಬಂಧಿಸಿದ್ದಾರೆ.

ಇದನ್ನೂ ಓದಿ| ದಿನಕ್ಕೆ ಒಂದು ಡಜನ್‌ ಟಾರ್ಗೆಟ್‌ ಹೊಂದಿದ್ದ ಮೊಬೈಲ್‌ ಕಳ್ಳರು !

Exit mobile version