Site icon Vistara News

Thieves gang : ಕದ್ದ ‌ಮನೆ ಮಾಲೀಕರ ಪತ್ನಿಯರ ಬಗ್ಗೆ ಅಶ್ಲೀಲ ಬರಹ ಬರೆದು ಎಸ್ಕೇಪ್ ಆಗೋ ಕಳ್ರು!

Thieves gang arrested

ಬೆಂಗಳೂರು: ಸಾಮಾನ್ಯವಾಗಿ ಮನೆಗಳ್ಳರು ಮನೆಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ದೋಚಿ ಎಸ್ಕೇಪ್ ಆಗ್ತಾರೆ. ಆದರೆ, ಇಲ್ಲೊಂದು ಗ್ಯಾಂಗ್ (Thieves gang) ಕಳ್ಳತನ ಮಾಡೋದಲ್ಲದೆ ಮನೆ ಮಾಲೀಕರ ಪತ್ನಿಯರ (Owners wives) ಬಗ್ಗೆ ಅಶ್ಲೀಲವಾಗಿ ಗೋಡೆ ಬರಹ (Obscene writing) ಬರೆದು ಎಸ್ಕೇಪ್ ಆಗುತ್ತಿತ್ತು. ಹೀಗೆ ಮಾಡಿ ಹಲವು ಬಾರಿ ತಪ್ಪಿಸಿಕೊಂಡಿದ್ದ ಈ ಗ್ಯಾಂಗ್‌ ಈಗ ಅಂಗಡಿಯೊಂದರಲ್ಲಿ ಕಳವು ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾರೆ.

ಬೆಂಗಳೂರಿನ ವರ್ತೂರಿನಲ್ಲಿ ಮೆಡಿಕಲ್‌ ಸ್ಟೋರ್‌ಗಳಲ್ಲಿ, ಕೆಲವು ಅಂಗಡಿಗಳಲ್ಲಿ, ಮನೆಗಳಲ್ಲಿ ಸಾಲು ಸಾಲು ಕಳ್ಳತನಗಳು ನಡೆಯುತ್ತಿದ್ದವು. ಒಂದಲ್ಲಾ ಒಂದು ಕಡೆ ಕಳವು ನಡೆಯುತ್ತಲೇ ಇತ್ತು. ಆದರೆ, ಅಲ್ಲಿ ನಡೆಯುವ ಕಳ್ಳತನಕ್ಕಿಂತಲೂ ವಿಚಿತ್ರವಾಗಿದ್ದದ್ದು ಮತ್ತು ವಿಕೃತವಾಗಿದ್ದದ್ದು ಕಳ್ಳರು ಬರೆದು ಹೋಗುತ್ತಿದ್ದ ಗೋಡೆ ಬರಹಗಳು. ಕಳ್ಳತನದ ಬಳಿಕ ಮನೆಯ ಗೋಡೆ ಮೇಲೆ ಕಾಣಿಸುತ್ತಿದ್ದ ಬರಹಗಳು ಮನೆ ಮಾಲೀಕರ ನಿದ್ದೆಗೆಡಿಸುತ್ತಿದ್ದವು. ಮನೆಯನ್ನೇನೋ ದೋಚಿಕೊಂಡು ಹೋದರು. ಅದಾದರೂ ಹೋಗ್ಲಿ ಗೋಡೆಯಲ್ಲಿ ಈ ರೀತಿ ಬರೆದು ಹೋಗುತ್ತಿದ್ದಾರಲ್ಲಾ ಎಂದು ಹೇಸಿಗೆ ಪಟ್ಟುಕೊಂಡಿದ್ದರು. ಯಾರಪ್ಪ ಹೀಗೆ ಮಾಡ್ತಿದ್ದಾರೆ ಅಂತ ಯೋಚನೆ ಮಾಡುತ್ತಾ ಕಾದು ಕುಳಿತ ಆ ಭಾಗದ ಜನರ ಕೈಗೆ ರಾತ್ರಿ ಇಬ್ಬರು ಕಳ್ಳರು ಸಿಕ್ಕಿಬಿದ್ದಿದ್ದಾರೆ. ಅವರೇ ಸತೀಶ್ ಹಾಗೂ ಚಂದ್ರು!

ದೊಮ್ಮಸಂದ್ರ ನಿವಾಸಿಗಳಾದ ಸತೀಶ್‌ ಮತ್ತು ಚಂದ್ರು ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದರು. ಕೇವಲ ಕಳ್ಳತನ ಮಾಡಿ ಸಿಕ್ಕ ಚಿನ್ನ, ನಗದು ದೋಚುತ್ತಿದ್ದರು. ಕೇವಲ ಸಿಕ್ಕ ವಸ್ತುಗಳನ್ನು ದೋಚಿ ಎಸ್ಕೇಪ್ ಆಗುವುದಲ್ಲದೆ ಮನೆಯ ಮಾಲೀಕನ ಪತ್ನಿಯ ಬಗ್ಗೆ ಅಶ್ಲೀಲವಾಗಿ ಮನೆಯ ಬೆಡ್ ರೂಂ ಗೋಡೆಗಳ ಮೇಲೆ ಬರೆದು ಹೋಗುತ್ತಿದ್ದರು!

ಇದನ್ನೂ ಓದಿ: Theft Case : ಈತ ಸೆಲೆಬ್ರಿಟಿ ಮನೆಗಳ್ಳ; ಖಾಲಿ ಸೈಟ್‌ಗಳೇ ಕದ್ದ ಒಡವೆಗಳ ಸೀಕ್ರೆಟ್‌ ಲಾಕರ್‌!

ಇಂತಹ ಘಟನೆಗಳಿಂದ ರೋಸಿ ಹೋಗಿದ್ದ ಸ್ಥಳೀಯರು ಏನಾದರೂ ಮಾಡಿ ಕಳ್ಳರನ್ನು ಹಿಡಿಯಲೇಬೇಕೆಂದು ಹುಡುಕಾಟ ನಡೆಸುತ್ತಿದ್ದರು. ಸ್ಥಳೀಯರು ಕಾಯುತ್ತಿದ್ದ ಸಮಯದಲ್ಲೇ ಕಳ್ಳರು ಅಂಗಡಿ ಕಳ್ಳತನ ಮಾಡುವಾಗ ರೆಡ್ ಹ್ಯಾಂಡಾಗಿ ಸಾರ್ವಜನಿಕರಿಗೆ ಸಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ: Coconut thief : ಇವನು ಸಾಮಾನ್ಯನಲ್ಲ, ಕಾರಲ್ಲಿ ಬಂದು ಎಳನೀರು ಕದಿಯೋ ರಮ್ಮಿ ಪ್ಲೇಯರ್!

ರಾಡ್ ನಿಂದ ಅಂಗಡಿ ಶಟರ್ ಮುರಿದು ಮೂರು ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದ ಕಳ್ಳರು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದು ಇಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿಕೊಂಡಿರೋ ವರ್ತೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Exit mobile version