Site icon Vistara News

BY Vijayendra: ತಿರುವಳ್ಳವರ್ ಪ್ರತಿಮೆಯು ಕನ್ನಡಿಗ, ತಮಿಳರ ಸಹೋದರತ್ವದ ಸಂಕೇತ: ಬಿ.ವೈ.ವಿಜಯೇಂದ್ರ

Thiruvallavar statue and BY Vijayendra

ಬೆಂಗಳೂರು: ಬೆಂಗಳೂರಿನ ತಿರುವಳ್ಳವರ್ ಪ್ರತಿಮೆ (Thiruvallavar Statue) ಮತ್ತು ಚೆನ್ನೈಯ ಸರ್ವಜ್ಞನ ಪ್ರತಿಮೆಗಳು ಕನ್ನಡಿಗರು ಮತ್ತು ತಮಿಳರ ನಡುವಿನ ಸಹೋದರತ್ವದ ಸಂಕೇತದಂತಿವೆ. ಇದನ್ನು ಈ ಹಿಂದೆ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಸಾಧ್ಯವನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು.

ಹಲಸೂರು ಬಳಿ ಇರುವ ವಿಶ್ವಕವಿ ತಿರುವಳ್ಳುವರ್ ಪ್ರತಿಮೆಗೆ ಮಂಗಳವಾರ ಮಾಲಾರ್ಪಣೆ ಮಾಡಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಬೆಂಗಳೂರಿನಲ್ಲಿ ತಿರುವಳ್ಳವರ್ ಪ್ರತಿಮೆ ಅನಾವರಣ ಮತ್ತು ಚೆನ್ನೈಯಲ್ಲಿ ಸರ್ವಜ್ಞ ಅವರ ಪ್ರತಿಮೆ ಅನಾವರಣಗೊಳ್ಳಬೇಕೆಂದು ಹಲವು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿತ್ತು. 2009ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಮತ್ತು ತಮಿಳುನಾಡಿನ ಸಹೋದರ ಭಾವ ವೃದ್ಧಿಗಾಗಿ ಇದನ್ನು ಅನುಷ್ಠಾನಕ್ಕೆ ತಂದರು ಎಂದು ತಿಳಿಸಿದರು.

ಇದನ್ನೂ ಓದಿ: CT Ravi : ನಿಂದನೆ ಯಾರು ಮಾಡಿದ್ರೂ ತಪ್ಪೇ; ಸಿದ್ದರಾಮಯ್ಯ ಬೆಂಬಲಿಸುತ್ತಲೇ ತಿವಿದ ಸಿ.ಟಿ ರವಿ

ಬೆಂಗಳೂರಿನಲ್ಲಿ ತಿರುವಳ್ಳವರ್ ಪ್ರತಿಮೆಯನ್ನು 18 ವರ್ಷ ಮುಚ್ಚಿಟ್ಟಿದ್ದರು. ಅದರ ಅನಾವರಣ ಆಗಿರಲಿಲ್ಲ. ಬಿ.ಎಸ್.‌ ಯಡಿಯೂರಪ್ಪ ಅವರ ಪ್ರಯತ್ನದ ಫಲವಾಗಿ ಇಲ್ಲಿ ತಿರುವಳ್ಳವರ್ ಪ್ರತಿಮೆ ಲೋಕಾರ್ಪಣೆ ಆಯಿತು. ಇನ್ನೊಂದೆಡೆ ಚೆನ್ನೈನಲ್ಲಿ ಸರ್ವಜ್ಞನ ಪ್ರತಿಮೆಯೂ ಅನಾವರಣಗೊಂಡಿತು ಎಂದು ಬಿ.ವೈ. ವಿಜಯೇಂದ್ರ ವಿವರಿಸಿದರು.

ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಕೆ.ಸಿ.ರಾಮಮೂರ್ತಿ ಅವರು ಭಾಗವಹಿಸಿದ್ದರು.

ಪ್ರಧಾನಿ ಭೇಟಿ; ಕಾರ್ಯಕಾರಿ ಸಭೆ ಮುಂದಕ್ಕೆ: ಪಿ.ರಾಜೀವ್

ಜನವರಿ 19ರಂದು ನಿಗದಿಪಡಿಸಲಾಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿ ಸಭೆಯನ್ನು ಮುಂದೂಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಭೇಟಿ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದರು.

ಮೋದಿ ಆಗಮನ ಹಿನ್ನೆಲೆ ಸಭೆ ಮುಂದಕ್ಕೆ

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪಿ. ರಾಜೀವ್, ಬೆಂಗಳೂರಿನ ಏರೋಸ್ಪೇಸ್ ಇಂಜಿನಿಯರಿಂಗ್ ಸ್ಪೆಷಾಲಿಟಿ, ಇಂಡಿಯಾ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ) ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬರುವ ಕಾರಣ ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Financial Intelligence Software: ಆರ್ಥಿಕ ಇಂಟೆಲಿಜೆನ್ಸ್ ತಂತ್ರಾಂಶ ಬಿಡುಗಡೆ ಮಾಡಿದ ಸಿಎಂ

ಸ್ವಾಗತಕ್ಕೆ ಕಾರ್ಯಕರ್ತರ ಬಳಕೆ

ಪಕ್ಷದ ಕಾರ್ಯಕರ್ತರನ್ನು ಸ್ವಾಗತಕ್ಕೆ ಬಳಸಿಕೊಳ್ಳುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರಮುಖರ ಜತೆ ಚರ್ಚೆ ಮಾಡುತ್ತಿದ್ದಾರೆ ಎಂದು ಪಿ. ರಾಜೀವ್ ವಿವರಿಸಿದರು.

Exit mobile version