Site icon Vistara News

Karnataka Election Results: ಎಲ್ಲರ ಶ್ರಮದಿಂದ ಗೆಲುವು, ಜನರಿಗೆ ಸಿಗಲಿದೆ ನಲಿವು; ಇದು ಡಿಕೆಶಿ ಗ್ಯಾರಂಟಿ

DK Shivkumar warning

Stomachache For DK Shivakumar; Delhi Travel Cancelled

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election Results) ಫಲಿತಾಂಶದಿಂದಾಗಿ ಕಾಂಗ್ರೆಸ್‌ ಪಾಳಯದಲ್ಲಿ ಸಂತಸ ಮನೆಮಾಡಿದೆ. ಇದೇ ಸಂತಸವನ್ನು ರಾಜ್ಯದ ಜನರ ಜತೆ ಹಂಚಿಕೊಳ್ಳಲು ಕಾಂಗ್ರೆಸ್‌ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು, ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ಭರವಸೆ ಕೊಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್‌, “ಎಲ್ಲರ ಪರಿಶ್ರಮದಿಂದ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ಉತ್ತಮ ಆಡಳಿತ ಸಿಗಲಿದೆ” ಎಂದು ಹೇಳಿದರು.

“ಇದು ಕೇವಲ ಗೆಲುವಲ್ಲ, ಭ್ರಷ್ಟಾಚಾರದ ವಿರುದ್ಧದ ಗೆಲುವು. ಕಳೆದ ಮೂರೂವರೆ ವರ್ಷದಿಂದ ರಾಜ್ಯಕ್ಕೆ ಹಿಡಿದ ಗ್ರಹಣ ಬಿಟ್ಟಿದೆ. ಇದು ಶೇ.40ರಷ್ಟು ಕಮಿಷನ್‌ ವಿರುದ್ಧದ ಗೆಲುವು. ಕರ್ನಾಟಕ ರಾಜ್ಯದ ಜನರ ಗೆಲುವು ಇದು. ಆದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಜನರ ಪರವಾಗಿ ಕೆಲಸ ಮಾಡಲಿದೆ. ಕಾಂಗ್ರೆಸ್‌ ನೀಡಿದ ಗ್ಯಾರಂಟಿಗಳನ್ನು ನೀಡುತ್ತೇವೆ. ಇನ್ನುಮುಂದೆ ಗೃಹಜ್ಯೋತಿ ಬೆಳಗಲಿದೆ” ಎಂದು ಭರವಸೆ ನೀಡಿದರು.

“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಪ್ರತಿಯೊಂದು ಮನೆಯಲ್ಲಿ ಗೃಹಲಕ್ಷ್ಮೀ ನಗಲಿದ್ದಾಳೆ. ಯುವ ಸಮುದಾಯಕ್ಕೆ ಯುವ ನಿಧಿ ಆತ್ಮವಿಶ್ವಾಸ ತುಂಬಲಿದೆ. ಅನ್ನಭಾಗ್ಯ ಯೋಜನೆಯು ಬಡವರ ಹೊಟ್ಟೆ ತುಂಬಿಸಲಿದೆ. ಮಹಿಳೆಯರು ಸುಖವಾಗಿ ಪ್ರಯಾಣ ಮಾಡಲದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತರು ನಿಟ್ಟುಸಿರು ಬಿಡಲಿದ್ದಾರೆ. ಇವುಗಳನ್ನು ನಾವು ಜಾರಿಗೆ ತರುತ್ತೇವೆ. ನಾವು ಈಗಲೂ ಜಾರಿಗೆ ತರುತ್ತೇವೆ ಎಂದು ಹೇಳುತ್ತಿದ್ದೇವೆ” ಎಂಬುದಾಗಿ ಹೇಳಿದರು.

ಇದನ್ನೂ ಓದಿ: Karnataka Election Results: ಲಿಂಗಾಯತ ಮತಗಳನ್ನು ಕಾಂಗ್ರೆಸ್‌ ಸೆಳೆದಿದ್ದು ಹೇಗೆ? ಬಿಜೆಪಿ ಎಡವಿದ್ದೆಲ್ಲಿ?

Exit mobile version