Site icon Vistara News

ಕೋಲಾರ, ರಾಮನಗರದಲ್ಲಿ ಭಾರಿ ಮಳೆಯಿಂದ ಫಾರ್ಮ್‌ನೊಳಗೆ ನುಗ್ಗಿದ ನೀರು: ಸಾವಿರಾರು ಕೋಳಿಗಳ ಸಾವು

Ramanagara koli
ಚಲುವನಹಳ್ಳಿಯ ಫಾರ್ಮ್‌ನಲ್ಲಿ ಸತ್ತು ಬಿದ್ದಿರುವ ಕೋಳಿಗಳು

ಕೋಲಾರ: ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆ ಸೃಷ್ಟಿಸಿದ ಅವಾಂತರದಿಂದ ಕೋಲಾರದಲ್ಲಿ ೮೪೦೦ ಕೋಳಿಗಳೂ ಮೃತಪಟ್ಟಿವೆ.

ಕೋಲಾರ ತಾಲೂಕಿನ ಚಲುವನಹಳ್ಳಿಯಲ್ಲಿ ತಿಮ್ಮೇಗೌಡ ಎಂಬುವವರಿಗೆ ಸೇರಿರುವ ಕೋಳಿ ಫಾರಂಗೆ ನೀರು ನುಗ್ಗಿದೆ. ಫಾರಂನಲ್ಲಿ ೮,೪೦೦ ಕೋಳಿಗಳು ಇದ್ದು, ಅವುಗಳ ಪೈಕಿ ೬೦೦೦ ಕೋಳಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ೨೪೦೦ ಸತ್ತು ಬಿದ್ದಿವೆ ಎಂದು ಹೇಳಲಾಗಿದೆ. ಅಂದಾಜು ೧೦ ಲಕ್ಷ ರೂ. ನಷ್ಟವಾಗಿದೆ ಎಂದು ತಿಮ್ಮೇಗೌಡ ಅವರು ಹೇಳಿದ್ದಾರೆ.

ರಾಮನಗರದಲ್ಲೂ ಹಾನಿ
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಮಧು ಎಂಬವರಿಗೆ ಸೇರಿದ ಕೋಳಿ ಫಾರಂಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಕೋಳಿಗಳು ಕೊಚ್ಚಿ ಹೋಗಿವೆ. ರಾತ್ರಿ ಸುರಿದ ಮಳೆಗೆ ಹರಿಸಂದ್ರ ಕೆರೆ ಕೋಡಿ ಬಿದ್ದ ಪರಿಣಾಮವಾಗಿ ಮಾರಾಟಕ್ಕೆ ಸಿದ್ಧವಾಗಿದ್ದ ೩೦೦೦ಕ್ಕೂ ಅಧಿಕ ಕೋಳಿಗಳು ನೀರುಪಾಲಾಗಿವೆ.

ಕೋಳಿ ಶೆಡ್ ಸಹ ನೀರಿನ ರಭಸಕ್ಕೆ ಕೊರೆದಿದ್ದು ನೆಲಸಮವಾಗುವ ಹಂತಕ್ಕೆ ತಲುಪಿದೆ.

Exit mobile version