Site icon Vistara News

Threat To Nitin Gadkari | ಬೆಳಗಾವಿಯಿಂದ ನಿತಿನ್ ಗಡ್ಕರಿಗೆ ಜೀವ ಬೆದರಿಕೆ; ಹಿಂಡಲಗಾ ಸೆಂಟ್ರಲ್ ಜೈಲಿನಲ್ಲಿ ಪೊಲೀಸರ ಶೋಧ

Nitin Gadkari

ಬೆಳಗಾವಿ: ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Threat To Nitin Gadkari) ಅವರಿಗೆ ಜೀವ ಬೆದರಿಕೆ ಕರೆ ಮಾಡಿರುವುದು ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ ಕೈದಿ ಎಂಬುದು ತಿಳಿದುಬಂದಿದೆ. ಹೀಗಾಗಿ ಮಹಾರಾಷ್ಟ್ರದ ಪೊಲೀಸರು ಜೈಲಿಗೆ ಆಗಮಿಸಿ ಆರೋಪಿ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಜೀವ ಬೆದರಿಕೆ ಸಂಬಂಧ ಕೇಂದ್ರ ಸಚಿವ ಗಡ್ಕರಿ ಅವರು ಮಹಾರಾಷ್ಟ್ರದ ನಾಗ್ಪುರ ಪೊಲೀಸರ ಗಮನಕ್ಕೆ ‌ತಂದಿದ್ದರು. ಹೀಗಾಗಿ ಆರೋಪಿ ಶೋಧಕ್ಕೆ ಅಲ್ಲಿನ ಪೊಲೀಸರು ಹಿಂಡಲಗಾ ಜೈಲಿಗೆ ಬಂದಿದ್ದಾರೆ. ನಾಗ್ಪುರ ಪೊಲೀಸರಿಗೆ ಕೊಲ್ಹಾಪುರ, ಸಾಂಗ್ಲಿ, ಬೆಳಗಾವಿ ನಗರ ಪೊಲೀಸರು ಸಾಥ್ ನೀಡಿದ್ದಾರೆ. ಶನಿವಾರ ಸಂಜೆ ಮೂರು ಗಂಟೆಗಳ ಕಾಲ ಜೈಲಿನಲ್ಲಿ ಶೋಧ ಕಾರ್ಯ ನಡೆಸಿರುವ ಪೊಲೀಸರು, ಭಾನುವಾರವೂ ಜೈಲಿನಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ.

ನಾಗ್ಪುರದಲ್ಲಿರುವ ನಿತಿನ್‌ ಗಡ್ಕರಿ ಅವರ ಕಚೇರಿಗೆ ಶನಿವಾರ ಬೆಳಗ್ಗೆ ಎರಡು ಬೆದರಿಕೆ ಕರೆಗಳು ಹೋಗಿದ್ದವು. ಅಪರಿಚಿತ ವ್ಯಕ್ತಿಗಳು ನಿತಿನ್‌ ಗಡ್ಕರಿ ಕಚೇರಿಗೆ ಅಪರಿಚಿತರು ಕರೆ ಮಾಡಿ, ಕೇಂದ್ರ ಸಚಿವರನ್ನು ಕೊಲ್ಲುತ್ತೇವೆ, ಇಡೀ ಕಚೇರಿಯನ್ನು ಸ್ಫೋಟಿಸುತ್ತೇವೆ ಎಂಬುದಾಗಿ ಹೇಳಿದ್ದರು. ಈ ಬಗ್ಗೆ ಕಚೇರಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಚೇರಿ ಹಾಗೂ ಗಡ್ಕರಿ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.

ಈ ಹಿಂದೆ ಉತ್ತರ ವಲಯದ ಐಜಿಪಿ ಆಗಿದ್ದ ಅಲೋಕ್ ಕುಮಾರ್‌ಗೂ ಕೈದಿಗಳು‌ ಜೀವ ಬೆದರಿಕೆ ಹಾಕಿದ್ದರು. ಹಲವು ಸಲ ದಾಳಿಯಾದರೂ ಜೈಲಿನಲ್ಲಿ ಮೊಬೈಲ್ ಬಳಕೆ ನಿಲ್ಲುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಕೆಲ ದಿನಗಳ ಹಿಂದೆಯಷ್ಟೇ ಜೈಲಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ | Threat To Nitin Gadkari | ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಜೀವ ಬೆದರಿಕೆ, ಕಚೇರಿ, ನಿವಾಸಕ್ಕೆ ಹೆಚ್ಚಿನ ಭದ್ರತೆ

Exit mobile version